ಜಾತಿ, ಧರ್ಮ, ಆಕ್ರೋಶ ಇವುಗಳೆಲ್ಲಕ್ಕಿಂತ ಮುಖ್ಯವಾದುದು ದೇಶದ ಜನರ ರಕ್ಷಣೆ ಎಂದು ಪಹಲ್ ಗಾಮ್ ಹತ್ಯಾಕಾಂಡವನ್ನು ಖಂಡಿಸುತ್ತಾ ಇದು ಕೇಂದ್ರ ಸರಕಾರದ ವೈಫಲ್ಯವೆಂದು ತಿಳಿಯಬಹುದಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ಸಿನ ಮಾಸಿಕ ಸಭೆಯನ್ನು ಉದ್ದೇಶಿಸಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಜಯಪ್ರಕಾಶ್ ಹೆಗಡೆ, ಕೇವಲ ಭಾಷಣ ಮಾಡಿ ಪ್ರಯೋಜನವಿಲ್ಲ ಕಾರ್ಯಸಾಧನೆ ಆಗಬೇಕು, ಕಾರ್ಯಕರ್ತರ ಬೇಡಿಕೆ ಪೂರೈಸಲು ಪಕ್ಷ ಗಮನ ಹರಿಸಬೇಕೆಂದು ಹೆಚ್ಚಿನ ಸದಸ್ಯರು ಒತ್ತಾಯಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಕೈಗೊಂಡ ಕಾರ್ಯಕ್ರಮಗಳನ್ನು ವಿವರಿಸಿ ಮೇ 6 ರಂದು ಬೈಂದೂರಿನಲ್ಲಿ ನಡೆಯುವ ಜೈ ಗಾಂಧಿ, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ಎಲ್ಲರೂ ಬರಬೇಕೆಂದು ವಿನಂತಿಸಿದರು.
ಸಭೆಯಲ್ಲಿ ಪ್ರಮುಖರಾದ ಎಂ .ಎ . ಗಪೂರ್ ಕಿಶನ್ ಹೆಗ್ಡೆ ಕೊಲ್ಕೆಬೈಲು, ಮಲ್ಯಾಡಿ ಶಿವರಾಮ್ ಶೆಟ್ಟಿ, ದಿನೇಶ್ ಪುತ್ರನ್, ರಮೇಶ್ ಕಾಂಚನ್, ಹರಿಪ್ರಸಾದ್ ಶೆಟ್ಟಿ, ಗೋಪಿನಾಥ್ ಭಟ್ , ಸಂತೋಷ್ ಕುಲಾಲ್, ವೈ ಸುಕುಮಾರ್, ಮಹಾಬಲ ಕುಂದರ, ನರಸಿಂಹಮೂರ್ತಿ, ಶರ್ಪುದ್ದೀನ್, ಅಶೋಕ ಎ ಎರ್ಮಲ್ ಹರೀಶ್ ಕಿಣಿ, ಶಬೀರ್ ಅಹಮದ್, ಸೌರಬ್ ಬಲ್ಲಾಳ್, ಜಯಕುಮಾರ್, ಪ್ರತ್ಯಾತ್ ಶೆಟ್ಟಿ, ಪ್ರಶಾಂತ್ ಜತ್ತನ್, ರೋಷನ್ ಶೆಟ್ಟಿ, ನಾಗೇಶ್ ಉದ್ಯಾವರ, ಭುಜಂಗಶೆಟ್ಟಿ, ಸುರೇಶ್ ಶೆಟ್ಟಿ, ಬನ್ನಂಜೆ ದಿಲೀಪ್ ಹೆಗ್ಡೆ, ಜ್ಯೋತಿ ಹೆಬ್ಬಾರ್, ಕಿರಣ್ ಹೆಗಡೆ, ಶಿರಿಯಣ್ಣ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ಹರೀಶ್ ಶೆಟ್ಟಿ ಪಾಂಗಳ, ಮುರಳಿ ಶೆಟ್ಟಿ, ಲಕ್ಷ್ಮೀಶ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಸಂತೋಷ್ ಕುಮಾರ್ ಹಕ್ಲಾಡಿ, ಸಂಧ್ಯಾ ತಿಲಕ್ ರಾಜ್, ಲೂಯಿಸ್ ಲೋಬೊ, ಸುಕನ್ಯಾ ಪೂಜಾರಿ, ಸಜ್ಜನ್ ಶೆಟ್ಟಿ, ಆನಂದ ಪೂಜಾರಿ, ರಮೇಶ್ ಶೆಟ್ಟಿ, ಕೀರ್ತಿ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಅವಧಿಯಲ್ಲಿ ಅಗಲಿದ ಕಾಂಗ್ರೆಸ್ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಪಾಧ್ಯಕ್ಷ ನೀರೇ ಕೃಷ್ಣ ಶೆಟ್ಟಿ ಸ್ವಾಗತಿಸಿ , ಜಿಲ್ಲಾ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಕೆ ಅಣ್ಣಯ್ಯ ಸೇರಿಗಾರ್ ನಿರೂಪಿಸಿ, ಕೆಪಿಸಿಸಿ ಸ್ಪೆಷಲಿಸ್ಟ್ ವೇರೋನಿಕ ಕರ್ನೆಲಿಯೋ ವಂದಿಸಿದರು.