ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಗೆ ಬೀದರ್ ನಗರದ ಟೀಮ್ ಯುವಾ ಸಂಸ್ಥೆಯ ಸಂಯೋಜಕ, ಪರಿಸರ ಹೋರಾಟಗಾರ ವಿನಯಕುಮಾರ್ ಮಾಳಗೆ ಅವರನ್ನು ಸದಸ್ಯರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಮುಂದಿನ ಮೂರು ವರ್ಷಗಳ ಅವಧಿಗೆ ಮಂಡಳಿಯನ್ನು ಪುನರ್ ರಚಿಸಿ, ಹೊಸದಾಗಿ ಸದಸ್ಯರನ್ನು ನೇಮಿಸಲಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಜಿ ಮಂಜುಳಾ ತಿಳಿಸಿದ್ದಾರೆ.
ವಿನಯ ಮಾಳಗೆ ಅವರು ಟೀಂ ಯುವಾ ಸಂಸ್ಥೆಯ ಸಂಯೋಜಕರಾಗಿ ಒಂದು ದಶಕದಿಂದ ಜಿಲ್ಲೆಯ ಐತಿಹಾಸಿಕ ಕರೇಜ್, ಪರಿಸರ ಸೇರಿದಂತೆ ಐತಿಹಾಸಿಕ ತಾಣಗಳ ಸಂರಕ್ಷಣೆಯ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಇದೀಗ ಸರ್ಕಾರ ಅವರನ್ನು ವನ್ಯ ಜೀವಿ ಮಂಡಳಿಯ ಸದಸ್ಯರಾಗಿ ನೇಮಿಸಿದೆ.
