ಕರಾವಳಿ ಭಾಗದಲ್ಲಿ ನೀರಿನ ಅಭಾವ; ಹಲವು ದೇವಾಲಯಗಳಲ್ಲಿ ಮಳೆಗಾಗಿ ಪ್ರಾರ್ಥನೆ

Date:

Advertisements

ಕರಾವಳಿ ಭಾಗದಲ್ಲಿ ನೀರು ಕೊರತೆ ಉಂಟಾಗಿದ್ದು, ದೇವಸ್ಥಾನಗಳಲ್ಲಿ ಅಭಿಷೇಕಕ್ಕೂ ನೀರಿಲ್ಲದೆ ಜಲಕ್ಷಾಮ ಎದುರಾಗಿದೆ. ಬಹುತೇಕ ದೇವಾಲಯಗಳಲ್ಲಿ ಮಳೆಗಾಗಿ ಪ್ರಾರ್ತನೆ ಮಾಡುತ್ತಿರುವುದೂ ಕಂಡುಬಂದಿದೆ.

ಮಳೆ ಆರಂಭವಾಗಬೇಕಾದ ಹೊತ್ತಲ್ಲಿ ರಣಬಿಸಿಲು ಸುಡುತ್ತಿರುವುದರಿಂದ ಶಾಲೆ, ಕಾಲೇಜುಗಳಿಗೆ ತೆರಳುವ ಮಕ್ಕಳು ಬಿಸಿಲಿಗೆ ಕೊಡೆ ಹಿಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಬಳಲಿ ಶಾಲೆಗೆ ತೆರಳಿದರೆ ಕುಡಿಯಲು ನೀರಿಲ್ಲದ ಪರಿಸ್ತಿತಿ ಇದೆ.

“ನಿತ್ಯ ಅನ್ನಪ್ರಸಾದ ನೀಡುವ ದೇವಸ್ಥಾನಗಳು ಪ್ರಯಾಸಪಟ್ಟು ಪ್ರತ್ಯೇಕವಾಗಿ ನೀರಿನ ವ್ಯವಸ್ಥೆ ಮಾಡಿಕೊಂಡಿರುವುದನ್ನು ಹೊರತುಪಡಿಸಿದರೆ, ನದಿಯನ್ನೇ ನಂಬಿಕೊಂಡಿರುವ ಕಟೀಲು ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿ ಸಮಸ್ಯೆ ಉಂಟಾಗಿದೆ” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

Advertisements

ಬತ್ತಿ ಹೋದ ನಂದಿನಿ

ಮಳೆಗಾಲವಿದ್ದಾಗ ನಂದಿನಿ ಹೊಳೆ ತುಂಬಿ ಹರಿಯುವುದರಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವು ದ್ವೀಪದಂತೆ ಕಂಗೊಳಿಸುತ್ತಿತ್ತು. ಆದರೀಗ, ನಂದಿನಿ ಬತ್ತಿ ಹೋಗಿರುವುದರಿಂದ ದೇವಾಲಯದ ಚಿತ್ರಣವೇ ಬೇರೆಯಾಗಿದೆ.

ಕಟೀಲು ದೇವಸ್ಥಾನಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತರಿಗಾಗಿ ತೀರ್ಥ, ಅನ್ನಪ್ರಸಾದಕ್ಕೆ ನದಿ ನೀರು ಬಳಕೆಯಾಗುತ್ತದೆ. ಆದರೆ ಈಗ ನದಿಯಲ್ಲಿ ನೀರಿಲ್ಲ. ಈಗಿರುವ ಸಣ್ಣ ಪ್ರಮಾಣದ ನೀರು ಅದ್ಯಾವುದಕ್ಕೂ ಸಾಕಾಗುತ್ತಿಲ್ಲ. ಹೀಗಾಗಿ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗಿದೆ.

ಮೂರು ಹೊತ್ತು ದೇವಸ್ಥಾನದಲ್ಲಿ ಅನ್ನಪ್ರಸಾದ ವಿತರಣೆಯಾಗುವ ಕಾರಣ, ಸ್ಟೀಲ್ ಬಟ್ಟಲುಗಳಲ್ಲಿ ಊಟ ವಿತರಿಸಲಾಗುತ್ತಿತ್ತು. ಇದೀಗ ಅದರ ಬದಲಿಗೆ ಅಡಕೆ ಹಾಳೆ ತಟ್ಟೆಯನ್ನು ಉಪಯೋಗಿಸಲಾಗುತ್ತಿದೆ. ಇದರಿಂದ ಎರಡು ಲಾಭವಿದೆ. ಮೊದಲನೆಯದ್ದು ನೀರಿನ ಉಳಿತಾಯ, ಎರಡನೆಯದ್ದು ಪರಿಸರ ಸಂರಕ್ಷಣೆ. ಹಾಳೆ ತಟ್ಟೆಗಳು ಪ್ಲಾಸ್ಟಿಕ್‌ನಂತಲ್ಲ. ಅದನ್ನು ವಿಲೇವಾರಿ ಮಾಡಲು ಸುಲಭ. ಹೀಗಾಗಿ ಊಟ ನೀಡುವ ಸಂದರ್ಭ ನೀರಿನ ಬಳಕೆ ಕಡಿಮೆ ಮಾಡಬಹುದಾದರೂ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಅಭಿಷೇಕ, ತೀರ್ಥ ಇತ್ಯಾದಿಗಳಿಗೆ ನೀರು ಬೇಕೇ ಬೇಕು. ಆದರೆ ಅದಕ್ಕೂ ಅದ್ವಾನವಾಗಿದೆ.

ಕರಾವಳಿಯಲ್ಲಿ ಇಂಥ ಬಹುತೇಕ ಸಣ್ಣಪುಟ್ಟ ನದಿ, ಹೊಳೆಯನ್ನು ನಂಬಿ ಇರುವ ದೇವಸ್ಥಾನಗಳಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ. ಅಲ್ಲಿ ಭಕ್ತರ ಸಂಖ್ಯೆ ವಿರಳವಾಗಿರುವ ಕಾರಣ ದೊಡ್ಡ ಮಟ್ಟಿನ ಸಮಸ್ಯೆ ತಲೆದೋರಿಲ್ಲ.

ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಬಿಪರ್‌ಜಾಯ್ ಚಂಡಮಾರುತ; ಅರಬ್ಬಿ ಸಮುದ್ರ ತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಕಟೀಲಿನಲ್ಲಿ ಪದವಿ ಕಾಲೇಜು ಹೊರತುಪಡಿಸಿ ಒಂದನೇ ತರಗತಿಯಿಂದ ಪದವಿಪೂರ್ವ ಕಾಲೇಜಿನ ವರೆಗೆ ಮದ್ಯಾಹ್ನದವರೆಗೆ ತರಗತಿಗಳು ನಡೆಸಲಾಗುತ್ತಿದೆ. ದೇವಸ್ಥಾನದಲ್ಲಿ ಮೂರು ಬಾವಿ ಮತ್ತು ಮೂರು ಬೋರ್‌ವೆಲ್‌ಗಳು ಇವೆ. ಆದರೂ ನೀರು ಸಂಪೂರ್ಣವಾಗಿ ಬತ್ತಿದೆ. ಕಳೆದ ಏಪ್ರಿಲ್‌ನಲ್ಲಿ ನಡೆದ ಜಾತ್ರಾಮಹೋತ್ಸವದ ಸಂದರ್ಭದಲ್ಲೂ ನೀರಿನ ಅಭಾವ ಉಂಟಾಗಿತ್ತು.

ಕರಾವಳಿಯಲ್ಲಿ ಪ್ರತಿ ಬಾರಿ ಇಂಥ ಬರಗಾಲ ಬಂದಾಗ ಮಳೆಗಾಗಿ ದೇವರ ಮೊರೆಹೋಗುವುದು ವಾಡಿಕೆ. ಈ ಬಾರಿಯೂ ನಂದಾವರ, ಸಜಿಪ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

Download Eedina App Android / iOS

X