ಜೆಡಿಎಸ್ ಪಕ್ಷ ಆರ್ಸಿಬಿ ತಂಡ ಇದ್ದಂತೆ. ಸೋಲಲಿ, ಗೆಲ್ಲಲಿ, ಅಭಿಮಾನಿಗಳ ಹವಾ ಕಡಿಮೆ ಆಗೋದಿಲ್ಲ. ಜೆಡಿಎಸ್ ನಾಯಕರನ್ನು ರಕ್ಷಿಸಿಕೊಳ್ಳದಿದ್ದರೆ ನಮಗೆ ಕ್ಷಮೆ ಇರೋದಿಲ್ಲ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ ಹೇಳಿದರು.
“ತಾತನ ಹಾದಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಪ್ರವಾಸ ಮಾಡಿ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡಿ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಶಕ್ತಿ ಕೊಟ್ಟಂತೆ ಆಗಿದೆ. ಅವರ ಹೆಗಲಿಗೆ ಹೆಗಲು ಕೊಟ್ಟು ಅವರ ಜೊತೆಯಲ್ಲಿ ಪಕ್ಷ ಸಂಘಟನೆ ಮಾಡಿ 2028ರಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಕುಮಾರಣ್ಣ ಅವರನ್ನು ಸಿಎಂ ಮಾಡುವುದೇ ನಮ್ಮ ಗುರಿ” ಎಂದರು.
“ಸಂಘಟನೆಗೆ ಒತ್ತು ಕೊಟ್ಟರೆ ನಮ್ಮ ಮುಂದೆ ತೊಡೆ ತಟ್ಟುವ ವ್ಯಕ್ತಿ ನಮ್ಮ ಯಾರೂ ಇರೋದಿಲ್ಲ. ಸಂಸದ ಮಲ್ಲೇಶ್ ಬಾಬು ಆಚೆ ಬಂದರೆ ವಿರೋಧಿಗಳಿಗೆ ಒಂದು ಆಟ ತೋರಿಸೋಣ. ನೀವು ಸೈಲಂಟಾಗಿದ್ದರೆ ಏನು ಮಾಡೋದಿಕ್ಕೂ ಆಗೋದಿಲ್ಲ. ನಿಮ್ಮನ್ನ ದೊಡ್ಡ ಮಟ್ಟದಲ್ಲಿ ಗೆಲ್ಲಿಸಿದ್ದೀವಿ. ಇದನ್ನ ಅರ್ಥ ಮಾಡಿಕೊಳ್ಳಿ” ಎಂದು ಹೇಳಿದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ದೂರುದಾರನ ಮಾಹಿತಿ ಬಹಿರಂಗಪಡಿಸಿದವರ ವಿರುದ್ಧ ಪ್ರತ್ಯೇಕ ತನಿಖೆ: ಎಸ್ಪಿ
“ಮಾತು ಕೊಟ್ಟ ಮೇಲೆ ಉಳಿಸಿ ಕೊಳ್ಳುವ ಕೆಲಸ ಮಾಡುತ್ತೇನೆ. ನಮ್ಮ ಗೆಲುವಿಗೆ ಕಾರ್ಯಕರ್ತರು-ಮುಖಂಡರು ಹಗಲು ರಾತ್ರಿ ಎನ್ನದೆ ದುಡಿದಿದ್ದಾರೆ. ಅವರಿಗಾಗಿ ನಾವು ರಾಜಕಾರಣ ಮಾಡಬೇಕು. ಅವರನ್ನು ರಕ್ಷಣೆ ಮಾಡಿಕೊಳ್ಳಬೇಕು, ಇಲ್ಲವಾದರೆ ನಮ್ಮನ್ನ ಅವರು ಕ್ಷಮಿಸೋದಿಲ್ಲ. ಮುಂದಿನ ದಿನಗಳಲ್ಲಿ ಬೇರೆ ರಾಜಕಾರಣ ಮಾಡಿ ತೋರಿಸುತ್ತೇನೆ” ಎಂದರು.