ಕಾಫಿ ತೋಟಕ್ಕೆ ತೆರಳುತ್ತಿದ್ದ ರೈತನೋರ್ವನ ಮೇಲೆ ಆರು ಕಾಡಾನೆಗಳು ದಾಳಿ ನಡೆಸಿದ್ದು, ಆತ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡ ರೈತನನ್ನು ಬಿಕ್ಕೋಡು ಗ್ರಾಮದ ಬಿ.ಬಿ ನಾಗೇಶ್ ಎಂದು ಗುರುತಿಸಲಾಗಿದೆ.

ಹಾಸನ ಜಿಲ್ಲೆ ಬೇಲೂರು ತಾಲೂಕು ಬಿಕ್ಕೋಡು ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಎಂದಿನಂತೆ ಬೈಕ್‌ನಲ್ಲಿ ಕಾಫಿ ತೋಟಕ್ಕೆ ತೆರಳುತ್ತಿದ್ದಾಗ ಆರು ಆನೆಗಳು ಏಕಾಏಕಿ ದಾಳಿ ನಡೆಸಿವೆ. ಗಾಬರಿಗೊಂಡ ಬಿ.ಬಿ ನಾಗೇಶ್ ಅವರು ತಕ್ಷಣವೇ ಬೈಕ್ ಬೀಳಿಸಿ ಅಲ್ಲಿಂದ ಓಡಿ, ಜೀವ ಉಳಿಸಿಕೊಂಡಿದ್ದಾರೆ. ಗಾಯಾಳು ಆದ ಬಿ.ಬಿ ನಾಗೇಶ್ ಅವರನ್ನು ಬೇಲೂರು ತಾಲುಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ₹1.49 ಕೋಟಿ ಹಣ ದುರುಪಯೋಗ; ಗ್ರಾ.ಪಂ ಕಾರ್ಯದರ್ಶಿ ಪಿ ಎನ್ ಭುವನ್ ಅಮಾನತು
ಕಾಫಿ ತೋಟದಲ್ಲಿ 30 ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು ರೈತರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
