ಮಣ್ಣುಗಣಿಗಾರಿಕೆಯಿಂದ ರಿಪಬ್ಲಿಕ್ ಬಳ್ಳಾರಿಯಂತಾಗುತ್ತಿಯೇ ಹರಿಹರ?; ಮಂಜುನಾಥ ಕುಂದುವಾಡ ಅನುಮಾನ

Date:

Advertisements

ಹರಿಹರ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ವಿಶೇಷವಾಗಿ ನದಿ ದಡದ ಗ್ರಾಮಗಳ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಮಣ್ಣುಗಣಿಗಾರಿಕೆ ನಡೆಯುತ್ತಿದ್ದು, ಅದನ್ನು ತಕ್ಷಣ ತಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯ ದಾವಣಗೆರೆ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ ಆಗ್ರಹಿಸಿದರು.

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಈ ಹಿಂದಿನ ವರ್ಷಗಳಲ್ಲಿ ಹರಿಹರ ತಾಲೂಕಿನ ಹರ್ಲಾಪುರ, ಗುತ್ತೂರು, ಸಾರಥಿ, ಪಾಮೇನಹಳ್ಳಿ, ದೀಟೂರು, ಚಿಕ್ಕಬಿದರಿ, ಕರಲಹಳ್ಳಿ, ಬುಳ್ಳಾಪುರ, ಹಲಸಬಾಳು, ರಾಜನಹಳ್ಳಿ, ತಿಮ್ಲಾಪುರ, ಧೂಳೆಹೊಳೆ, ಇಂಗಳಗೊಂದಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿನ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಮಣ್ಣಿನ ಗಣಿಗಾರಿಕೆಯನ್ನು ಅವ್ಯಾಹತವಾಗಿ ನಡೆಸಲಾಗಿದೆ. ಈ ವರ್ಷವೂ ಆ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ” ಎಂದು ಆಕ್ರೋಶ ಹೊರಹಾಕಿದರು.

‌‌ “ತುಂಗಭದ್ರಾ ನದಿ ದಡದ ಹಲವಾರು ಗ್ರಾಮಗಳಲ್ಲಿ 15 ರಿಂದ 20 ಅಡಿಗಳ ಆಳದವರೆಗೆ ಜೆಸಿಬಿ, ಇಟಾಚಿಯಂತಹ ಬೃಹತ್ ಯಂತ್ರಗಳಿಂದ ಗುಂಡಿಗಳನ್ನು ತೋಡುತ್ತ ಅಕ್ರಮವಾಗಿ ಮಣ್ಣುಗಣಿಗಾರಿಕೆ ನಡೆಸಲಾಗಿದೆ. ಅಕ್ರಮ ಮಣ್ಣು ಗಣಿಗಾರಿಕೆಯಿಂದ ಹತ್ತಾರು ಗ್ರಾಮಗಳ ವ್ಯಾಪ್ತಿಯ ಸಾವಿರಾರು ಎಕರೆ ಪಟ್ಟಾ ಹಾಗೂ ನದಿ ಖರಾಬ್(ಸರ್ಕಾರಿ) ಜಮೀನುಗಳ ಬದಿಯಲ್ಲಿ ನೂರಾರು ವರ್ಷಗಳಿಂದ ಬೆಳೆದು ನಿಂತಿದ್ದ ಸಾವಿರಾರು ಮರಗಳ ಮಾರಣಹೋಮವಾಗಿದೆ. ಈ ಗ್ರಾಮಗಳ ರೈತರು, ಜನಸಾಮಾನ್ಯರು ದನಕರುಗಳಿಗೆ ಸ್ನಾನ ಮಾಡಿಸಲು, ಬಟ್ಟೆ ತೊಳೆಯಲು, ಹಬ್ಬ ಹರಿದಿನಗಳಲ್ಲಿ ನದಿಗೆ ಹೋಗದಂತಾಗಿದೆ.‌ ನದಿ ದಡದ ಹಲವು ಸಾರ್ವಜನಿಕ ಬಂಡಿ ರಸ್ತೆ, ಕಾಲುದಾರಿಗಳು ಕಣ್ಮರೆಯಾಗಿವೆ. ನದಿ ದಡದ ಗ್ರಾಮಗಳ ಗುತ್ತೂರು, ಹಳೆ ಹರ್ಲಾಪುರ, ರಾಜನಹಳ್ಳಿ ಹಿಂದೂ ರುದ್ರಭೂಮಿ, ಮುಸ್ಲಿಮರ ಖಬರಸ್ಥಾನ್‌ಗಳಲ್ಲಿ ಕೆಲವು ನಾಶವಾಗಿದ್ದರೆ, ಇನ್ನೂ ಕೆಲವು ನಾಶವಾಗುವ ದಾರಿಯಲ್ಲಿವೆ. ಸಾಧು ಸಿದ್ಧಪ್ಪಜ್ಜನ ಮಠ ಹಾಗೂ ಗುತ್ತೂರು ಗ್ರಾಮದೇವತೆ ಉಡಿಸಲಮ್ಮ ದೇವಿಯ ಮೂಲ ದೇವಾಲಯಗಳು ಅಳಿವಿನಂಚಿಗೆ ಬಂದಿವೆ” ಎಂದು ಆತಂಕದ ಪರಿಸ್ಥಿತಿ ಬಿಚ್ಚಿಟ್ಟರು.

Advertisements

“ಭೂ ವಿಜ್ಞಾನ ಮತ್ತು ಗಣಿ, ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಅನುಮತಿ ಪಡೆದು ಏರಿ ಅಥವಾ ಕಲ್ಲುಗಳಿದ್ದರೆ ಮೂರು ಅಡಿಯಷ್ಟು ಮಾತ್ರ ಜಮೀನುಗಳನ್ನು ಸಮತಟ್ಟು ಮಾಡಲು ಅವಕಾಶವಿದೆ. ಮೂರು ಅಡಿಗಿಂತ ಹೆಚ್ಚು ಮಣ್ಣನ್ನು ತೆಗೆಸಿದರೆ ಅಂತಹ ಪಟ್ಟಾ ಜಮೀನುಗಳನ್ನು ಸರ್ಕಾರ ಭೂ ಕಂದಾಯ ಕಾಯ್ದೆ ಅನ್ವಯ ತನ್ನ ಸುಪರ್ದಿಗೆ ಪಡೆಯಲು ಅವಕಾಶವಿದೆ. ಆದರೂ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಗಳು ಕಣ್ಮುಚ್ಚಿ ಕುಳಿತಿವೆ” ಎಂದು ಆರೋಪಿಸಿದರು.

“ಅಕ್ರಮವಾಗಿ ಮಣ್ಣುಗಣಿಗಾರಿಕೆ ನಡೆಯುತ್ತಿರುವುದರಿಂದ ಈಗಾಗಲೇ ತಾಲೂಕಿನ ಪರಿಸರ ನಲುಗಿದೆ. ಮಣ್ಣುಗಣಿಗಾರಿಕೆಗೆ ಪಟ್ಟಭದ್ರರು ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಅನೌಪಚಾರಿಕ ಅನುಮತಿಗಾಗಿ ಕೋರಿಕೊಂಡಿದ್ದು, ಅಲಿಖಿತವಾಗಿ ಅವಕಾಶ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ತಾಲೂಕಿನ ಭೌಗೋಳಿಕ ರಚನೆ ಏರುಪೇರಾಗಿ ತೀವ್ರ ದುಷ್ಪರಿಣಾಮ ಬೀರುವ ಅಪಾಯವಿದೆ. ಪಕ್ಕದ ಜಮೀನಿನ ಬಡ ರೈತನಿಗೆ ಕೃಷಿ ಕಾರ್ಯ ನಡೆಸಲು ಅಸಾಧ್ಯ ಎನಿಸುವಷ್ಟು ತೊಂದರೆಯಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

”ಹರಿಹರ ತಾಲೂಕಿನಲ್ಲಿ ಈವರೆಗೆ ನಡೆದಿರುವ ಅಕ್ರಮ ಮಣ್ಣು ಗಣಿಗಾರಿಕೆಯ ದುಷ್ಪರಿಣಾಮ ಗಮನಿಸಿದರೆ ಹರಿಹರವು ರಿಪಬ್ಲಿಕ್ ಬಳ್ಳಾರಿ ಯಂತೆ ತಪ್ಪು ಹೆಜ್ಜೆಯತ್ತ ಸಾಗುತ್ತಿದೆಯೇ? ಎಂಬ ಅನುಮಾನ ದಟ್ಟವಾಗಿ ಮೂಡುತ್ತಿದೆ. ಕೂಡಲೆ ರಾಜ್ಯ ಸರ್ಕಾರವು ಹರಿಹರ ತಾಲ್ಲೂಕಿನ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಲು ದ್ರೋಣ್ ಯಂತ್ರದ ಸಹಾಯ ಪಡೆಯಬೇಕು. ಅಕ್ರಮಕ್ಕೆ ಸಹಕಾರ ನೀಡಿದ ಸಂಬಂಧಿತ ಹಿಂದಿನ, ಈಗಿನ ಇಲಾಖಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸುತ್ತದೆ” ಎಂದು ಮುಖಂಡರು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಬಾಲ್ಯ ವಿವಾಹ; ಐವರಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ

“ಎಷ್ಟೇ ಒತ್ತಡ ಬಂದರೂ ಕೂಡ ಮಣ್ಣುಗಣಿಗಾರಿಕೆಗೆ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ನೀಡಿದಲ್ಲಿ ನಮ್ಮ ಸಂಘಟನೆಯು ಇತರೆ ಪ್ರಗತಿಪರ ಹಾಗೂ ಪರಿಸರ ಸಂಘಟನೆಗಳ ಸಹಕಾರದೊಂದಿಗೆ ತೀವ್ರತರವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ” ಎಂದು ದಸಂಸ ಮುಖಂಡರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹರಿಹರ ತಾಲೂಕು ಸಂಚಾಲಕ ಮಹಾಂತೇಶ್ ಪಿ ಜೆ, ಪರಿಸರ ವೇದಿಕೆ ಅಧ್ಯಕ್ಷ ಗಿರೀಶ್ ದೇವರಮನೆ, ಸುನಿಲ್ ಹೊಟ್ಟೆಗೇನಹಳ್ಳಿ, ಕೆ ಗೋಪಿನಾಥಾಚಾರಿ, ಮಂಜುನಾಥ್, ಮಹಾಂತೇಶ ಹಾಲವರ್ತಿ, ಶಿವಶಂಕರ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X