ಬೀದರ್‌ | ಸಂವೇದನಶೀಲರು ವಚನ ಪರಂಪರೆಯ ಮುಂದುವರಿಕೆಗೆ ಶ್ರಮಿಸಬೇಕು : ವಿಕ್ರಮ ವಿಸಾಜಿ

Date:

Advertisements

ವಚನ ಪರಂಪರೆಯ ಮುಂದುವರಿಕೆಗೆ ಸಂವೇದನಶೀಲ ಮನಸ್ಸುಗಳು ಶ್ರಮಿಸಬೇಕು. ವಚನಗಳು ಕಟ್ಟಿಕೊಟ್ಟಿದ ಬದುಕಿನ ದರ್ಶನ ವಾಸ್ತವದ ಮತ್ತು ವೈಚಾರಿಕತೆಯ ನೆಲೆಯ ಮೇಲಿದೆ ಎಂದು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವೀಕ ಮತ್ತು ಭಾಷಾ ನಿಕಾಯದ ಡೀನ್‌ ಪ್ರೊ.ವಿಕ್ರಮ ವಿಸಾಜಿ ಹೇಳಿದರು.

ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದʼಲೇಖಕರೊಂದಿಗೆ ಸಂವಾದʼ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಒಂದು ಕಾಲದಲ್ಲಿ ಸಣ್ಣ ಸಣ್ಣ ಕೆಲಸ ಮಾಡುವವರೇ ಬಹುದೊಡ್ಡ ಸಿದ್ಧಾಂತಗಳು, ಮೌಲ್ಯಗಳು ವಚನಗಳ ಮೂಲಕ ರೂಪಿಸಿದ್ದಾರೆ. ಭಾರತದ ಬಹುದೊಡ್ಡ ಕವಿಗಳೊಂದಿಗೆ ಮುಖಾಮುಖಿಯಾಗುವುದು ಒಳ್ಳೆಯ ಬೆಳವಣಿಗೆ. ಮಾತು, ಚರ್ಚೆ, ಸಂವಾದಗಳೇ ಹೊಸ ತಿಳುವಳಿಕೆಗೆ ಕಾರಣವಾಗಿವೆ. ಸಂವಾದಗಳೇ ಹೆಚ್ಚು ಗಂಭೀರವಾದಾಗ ಸಿದ್ಧಾಂತಗಳಾಗಿ ಬಿಡುತ್ತವೆ” ಎಂದರು.

Advertisements

ಬಿಹಾರದ ಪಾಟ್ನಾ ವಿವಿಯ ನಿವೃತ್ತ ಪ್ರಾಧ್ಯಾಪಕ ಮತ್ತು ಹಿಂದಿಯ ಶ್ರೇಷ್ಠ ಕವಿ ಅರುಣ್ ಕಮಲ್ ಸಮಾರಂಭ ಉದ್ಘಾಟಿಸಿ ಮಾತನಾಡಿ, “ಕವಿತೆಯನ್ನು ಓದುವುದೆಂದರೆ ಬದುಕನ್ನು ಅರ್ಥೈಸುವುದು ಎಂದರ್ಥ. ಸಾಹಿತ್ಯದ ಆಳವಾದ ಅಧ್ಯಯನದಿಂದಲೇ ಬದುಕಿನ ಹಲವು ಮಜಲುಗಳು ಗ್ರಹಿಸಬೇಕು. ವಚನಗಳು ಈ ನೆಲದಲ್ಲಿ ಶ್ರೇಷ್ಠವಾದ ಆದರ್ಶಗಳು,ಮೌಲ್ಯಗಳು ಕಟ್ಟಿಕೊಟ್ಟಿವೆ. ಇಲ್ಲಿನ ಗಂಭೀರ ಓದುಗರು, ಮತ್ತು ವಿದ್ಯಾರ್ಥಿಗಳು ವಚನ ಪರಂಪರೆಯನ್ನು ಮುಂದುವರೆಸುವ ಜವಾಬ್ದಾರಿ ಹೊರಬೇಕು” ಎಂದು ನುಡಿದರು.

“ವಚನಗಳ ಗಂಭೀರ ಓದು ಬದುಕಿನ ಶೋಧವಾಗಿದೆ ಎಂದರು. ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಶ್ರೇಷ್ಠವಾದ ಸಾಹಿತ್ಯ ಕೃತಿಗಳು ಈ ಭಾಷೆಯಲ್ಲಿ ಬಂದಿವೆ. ಕನ್ನಡದ ಸಾಹಿತ್ಯದಲ್ಲಿ ಅಡಕವಾದ ಸತ್ವ ಬದುಕಿನ ಸತ್ವವೂ ಆಗಿದೆ. ಅದರ ಅಧ್ಯಯನ ವಿದ್ಯಾರ್ಥಿಗಳಿಂದ ನಡೆಯಲಿ. ಡಿ.ಆರ್.ನಾಗರಾಜ ಅವರಂಥ ಬರಹಗಾರರು ಈ ನೆಲದ ಅಲ್ಲಮನ ಬಗ್ಗೆ ಗಂಭೀರವಾಗಿ ಬರೆದಿದ್ದಾರೆ” ಎಂದು ಸ್ಮರಿಸಿದರು.

ಸಿಯುಕೆ ಶಾಸ್ತ್ರೀಯ ಕನ್ನಡ ಕೇಂದ್ರದ ನಿರ್ದೇಶಕ ಪ್ರೊ. ಬಿ.ಬಿ. ಪೂಜಾರಿ ಮಾತನಾಡಿ, “ನಮಗೆ ತಕ್ಷಣಕ್ಕೆ ಆನಂದ ಕೊಡುವ ಶಕ್ತಿ ಕವಿತೆಗಿದೆ. ನಮ್ಮ ಸಂಸ್ಕೃತಿಯ ಮತ್ತು ಜೀವನದ ಒಳ ಅರಿವು ಸಾಹಿತ್ಯ ನಿರಂತರ ಮೂಡಿಸುತ್ತದೆ. ಬರಹಗಾರರ ಮತ್ತು ವಿಜ್ಞಾನಿಗಳ ಜೊತೆಗೆ ಇಲ್ಲಿನ ವಿದ್ಯಾರ್ಥಿಗಳು ಸಂವಾದ ನಡೆಸುವುದು ಈ ಕಾಲೇಜಿನ ಉತ್ತಮ ಬೆಳವಣಿಗೆಯಾಗಿದೆ. ಬಸವಕಲ್ಯಾಣದಲ್ಲಿ ಇಂಥದೊಂದು ಸಮಾರಂಭ ನಡೆಯುತ್ತಿದ್ದು ವಚನ ಪರಂಪರೆಯನ್ನು ನೆನಪಿಸುತ್ತದೆ” ಎಂದು ನುಡಿದರು.

ಬಿಡಿಪಿಸಿ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿ ಪಠ್ಯದಲ್ಲಿದ್ದ ಪ್ರೊ. ಅರುಣ್ ಕಮಲ್ ಅವರ ಎರಡು ಕವಿತೆಗಳು ಅವರೇ ವಾಚಿಸಿದರು. ಬಳಿಕ ಬಸವೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಅರುಣ್ ಕಮಲ್, ವಿಕ್ರಮ ವಿಸಾಜಿ ಹಾಗೂ ಬಿ.ಬಿ. ಪೂಜಾರಿ ಅವರೊಂದಿಗೆ ಸಂವಾದ ನಡೆಯಿತು.

ಕಾರ್ಯಕ್ರಮದಲ್ಲಿ ಡಾ. ಶಾಂತಲಾ ಪಾಟೀಲ, ಡಾ. ಬಸವರಾಜ ಖಂಡಾಳೆ, ಶ್ರೀನಿವಾಸ ಉಮಾಪುರೆ, ಪ್ರವೀಣ ಬಿರಾದಾರ, ಚನ್ನಬಸಪ್ಪ ಗೌರ, ವಿವೇಕಾನಂದ ಶಿಂಧೆ, ರೋಶನ್ ಬಿ. ಗಂಗಾಧರ ಸಾಲಿಮಠ, ಮಾಲಾಶ್ರೀ ತಾಂಬೋಳೆ, ಗುರುದೇವಿ ಖಿಚಡೆ, ಜಗದೇವಿ ಜವಳಗೆ, ಸೌಮ್ಯ ಕರಿಗೌಡ, ನಿಲಮ್ಮ ಮೆತ್ರೆ, ಕರಣ ಮಲ್ಲಿಕಾರ್ಜುನ ವಾಡಿ, ಅಶೋಕ ರೆಡ್ಡಿ ಗದಲೆಗಾಂವ, ಪ್ರಶಾಂತ ಬುಡಗೆ, ಸಚಿನ ಬಿಡವೆ, ಎಮ್.ಡಿ. ಸುಜಾವುದ್ದಿನ್, ಗಣೇಶ ಮೆತ್ರೆ, ಶಶಿಧರ ಪಾಟಿಲ, ಪ್ರಭಾಕರ ನವಗಿರೆ ಇದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸದ ಸಂಸದರು, ಉತ್ತರಿಸದ ಪ್ರಧಾನಿ ಮತ್ತು ದಿಕ್ಕೆಟ್ಟ ದೇಶ

ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಗೀತಾ ಮಹಾಗಾಂವೆ ನಿರೂಪಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X