ತುಮಕೂರಿನಲ್ಲಿ ಎರಡು ದಿನ ದಸಂಸ ಮಹಾಧೀವೇಶನ : ಮಾವಳ್ಳಿ ಶಂಕರ್

Date:

Advertisements

ಕರ್ನಾಟಕದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯಮಟ್ಟದ ಮಹಾಧೀವೇಶನ ಅಕ್ಟೋಬರ್ 05ರ ಶನಿವಾರ ಮತ್ತು ಅಕ್ಟೋಬರ್ ಭಾನುವಾರ ತುಮಕೂರು ನಗರದ ಏಂಪ್ರೆಸ್ ಕೆಪಿಎಸ್‌ಶಾಲೆಯ ಸಭಾಂಗಣದಲ್ಲಿ ಜರುಗಲಿದೆ ಎಂದು ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.

ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ನಿಯಮದ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ಸರ್ವ ಸದಸ್ಯರ ಸಭೆ ನಡೆಸುವುದು ಕಡ್ಡಾಯ. ಹಿನ್ನೆಲೆಯಲ್ಲಿ ಅಕ್ಟೋಬರ್ 05-06 ರಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರು,ಸಂಘಟನಾ ಸಂಚಾಲಕರು,ಪದಾಧಿಕಾರಿಗಳು,ತಾಲೂಕು ಪದಾಧಿಕಾರಿಗಳ ಮಹಾಧೀವೇಶವನ್ನು ಆಯೋಜಿಸ ಲಾಗುತ್ತಿದೆ. ರಾಜ್ಯದ ವಿವಿಧ ಮೂಲೆಗಳಿಂದ ತುಮಕೂರಿಗೆ ಆಗಮಿಸಿ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರೊ.ಬಿ.ಕೃಷ್ಣಪ್ಪ ಅವರು ಎಲ್ಲಾ ಶೋಷಿತ ಸಮುದಾಯಗಳ ಏಳಿಗೆಗಾಗಿ ದಲಿತ ಸಂಘರ್ಘ ಸಮಿತಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದೆ.ಇತ್ತೀಚಿನ ಸಾಮಾಜಿಕ, ಆರ್ಥಿಕ ಅಸಮಾನತೆಯ ಜೊತೆಗೆ, ಕೋಮುವಾದಿಕರಣವೂ ರಾಜ್ಯವನ್ನು ಕಿತ್ತು ತಿನ್ನುತಿದ್ದು,ಸಂವಿಧಾನಕ್ಕೆ,ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿರುವ ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಯಾವ ರೀತಿಯ ಹೆಜ್ಜೆಗಳನ್ನೀಡಬೇಕು.ದಲಿತ ಸಂಘರ್ಷ ಸಮಿತಿಯ ಮುಂದಿರುವ ಆಯ್ಕೆಗಳೇನು ಎಂಬ ವಿಚಾರವಾಗಿ ಚರ್ಚಿಸುವ ನಿಟ್ಟಿನಲ್ಲಿ ಈ ಸರ್ವಸದಸ್ಯರ ಮಹಾಧೀವೇಶನ ಮಹತ್ವದ ಹೆಜ್ಜೆಯಾಗಿದೆ.ಯುವಜನರಿಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದೆ ಎಂದರು.

Advertisements

ಅಕ್ಟೋಬರ್ 05ರಂದು ನಡೆಯುವ ದಲಿತ ಸಂಘರ್ಷ ಸಮಿತಿಯ ಮಹಾಧೀವೇಶನವನ್ನು ಬಂಡಾಯ ಸಾಹಿತಿ ನಾಡೋಜ ಬರಗೂರ ರಾಮಚಂದ್ರಪ್ಪ ಅವರು ಉದ್ಘಾಟಿಸಲಿದ್ದು,ಸಹಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ,ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್,ಇಂದಿರಾ ಕೃಷ್ಣಪ್ಪ,ನಟರಾಜ್ ಬೂದಾಳ್, ಜಿ.ವಿ.ಆನಂದಮೂರ್ತಿ, ಕೆ.ದೊರೆರಾಜು ಮತ್ತಿತರರ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಮಾವಳ್ಳಿ ಶಂಕರ್ ತಿಳಿಸಿದರು.

ಸರಕಾರದ ಮುಂದೆ ದಲಿತರ ಹಲವಾರು ಬೇಡಿಕೆಗಳಿವೆ.ಪ್ರಮುಖವಾಗಿ ಒಳ ಮೀಸಲಾತಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ದೇವರಾಜ ಅರಸು ಅವರ ಉಳುವವನೇ ಭೂಮಿಯ ಒಡೆಯ ಕಾಯ್ದೆ ನಂತರವೂ ಶೇ5 ರಷ್ಟು ದಲಿತರ ಕೈಯಲ್ಲಿ ಮಾತ್ರ ಭೂಮಿಯ ಒಡೆತನವಿದೆ. ದಲಿತರು ಅರ್ಜಿ ಸಲ್ಲಿಸಿರುವ ಸುಮಾರು 7ಲಕ್ಷ ಹೆಕ್ಟೇರ್ ಬಗುರ್ ಹುಕ್ಕಂ ಸಾಗುವಳಿ ಚೀಟಿ ವಿತರಣೆ ಬಾಕಿ ಇದೆ.ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಜಾರಿಗೆ ಬಂದ ಎಸ್ಸಿಪಿ ಮತ್ತು ಟಿಎಸ್ಸಪಿ ಹಣವನ್ನು ಬೇರೆ ವಿಷಯಗಳಿಗೆ ವರ್ಗಾವಣೆಯಾಗುತ್ತಿವೆ.ಈ ಎಲ್ಲಾ ವಿಚಾರಗಳನ್ನು ಈಗಾಗಲೆ ಸರಕಾರದ ಗಮನಕ್ಕೆ ತರಲಾಗಿದೆ. 2013ರಿಂದ 2024ರವರೆಗೆ ಸುಮಾರು 1.50ಲಕ್ಷ ಕೋಟಿ ಹಣ ಎಸ್ಸಿಪಿ, ಟಿ.ಎಸಪಿ ಹಣ ದಾಖಲೆಯಲ್ಲಿ ಖರ್ಚಾಗಿದೆ. ಇದರಿಂದ ದಲಿತ ಉದ್ದಾರವೆಸ್ಟಾಗಿದೆ ಎಂಬುದು ಅವಲೋಕನವಾಗಬೇಕಿದೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ದಲಿತ ಸಂಘರ್ಷ ಸಮಿತಿಯ ರಾಜ್ಯ ಮಹಾಧೀವೇಶನವನ್ನು ಕರೆಯಲಾಗಿದೆ.ನಾಡಿನ ದಲಿತಪರ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮಾವಳ್ಳಿ ಶಂಕರ್ ಮನವಿ ಮಾಡಿದರು.

WhatsApp Image 2024 10 02 at 4.33.45 PM

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದದ ತುಮಕೂರು ಜಿಲ್ಲಾಧ್ಯಕ್ಷ ಕುಂದೂರು ತಿಮ್ಮಯ್ಯ ಮಾತನಾಡಿ, ರಾಜ್ಯದ ಚಳವಳಿಗಳಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ಹೋರಾಟ ರೋಚಕವಾದುದ್ದು,ಹಲವಾರು ನಾಯಕರು ಚಳವಳಿಯ ರಥ ಎಳೆದಿದ್ದಾರೆ.ಅವುಗಳನ್ನು ಮೆಲುಕು ಹಾಕುವ ಜೊತೆಗೆ,ಮುಂದೇನು ಎಂಬ ಪ್ರಶ್ನೆಗೂ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಮಹಾಧೀವೇಶನ ಮಹತ್ವ ಪಡೆದಿದೆ.ರಾಜ್ಯದ ವಿವಿಧೆಡೆಗಳಿಂದ ಸುಮಾರು 400 ಜನರು ಭಾಗವಹಿಸಲಿದ್ದು, ಜಿಲ್ಲೆಯಿಂದ 200 ಜನರು ಪಾಲ್ಗೊಳ್ಳಲಿದ್ದಾರೆ. ಹೊರಗಿನಿಂದ ಬರುವ ಕಾರ್ಯಕರ್ತರಿಗೆ ಏಂಪ್ರೆಸ್ ಶಾಲೆಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆೆ.ಎರಡು ದಿನವೂ ಊಟ, ತಿಂಡಿ ವ್ಯವಸ್ಥೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚೇಳೂರು ಶಿವನಂಜಪ್ಪ, ವಿರೂಪಾಕ್ಷ ಡ್ಯಾಗೇರಹಳ್ಳಿ, ಮುರುಳಿ ಕುಂದೂರು, ಶ್ರೀನಿವಾಸ್,ತಾಯಪ್ಪ,ನಾಗಣ್ಣ ಬಡಿಗೇರ್,ವೀರೇಶ್ ಹಿರೇಹಳ್ಳಿ,ಡಾ.ಮಹೇಶ್, ಸಿದ್ದಪ್ಪ ಕಾಂಬ್ಳೆ ಮತ್ತಿತರರು ಪಾಲ್ಗೊಂಡಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X