ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಿರ್ವಾಹಕಿಯೊಬ್ಬರು ತುಂಬು ಗರ್ಭಿಣಿಗೆ ಹೆರಿಗೆ ಮಾಡಿಸಿರುವ ಘಟನೆ ನಡೆದಿದೆ. ಈ ಮಾನವೀಯ ಕಾರ್ಯವನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿ ಶ್ಲಾಘಿಸಿದ್ದಾರೆ.
ಮೇ 15ರಂದು ಬಿಹಾರ ಮೂಲದ ಗರ್ಭಿಣಿ ಮಹಿಳೆ ಕೂಲಿ ಕೆಲಸಕ್ಕಾಗಿ ಚಿಕ್ಕಮಗಳೂರು ಬಸ್‌ನಲ್ಲಿ ಮೂಡುಗೆರೆಗೆ ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ ಒಂದು ಗಂಟೆಗೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇದನ್ನು ಗ್ರಹಿಸಿದ ನಿರ್ವಾಹಕಿ ವಸಂತಮ್ಮ ಬಸ್ ನಿಲ್ಲಿಸಲು ಸೂಚಿಸಿ, ಬಸ್‌ನಲ್ಲೇ ಮಹಿಳೆಗೆ ಹೆರಿಗೆ ಮಾಡಿದ್ದಾರೆ. ಹೆರಿಗೆಗೆ ಬಸ್‌ನಲ್ಲಿದ್ದ ಬೆಂಗಳೂರು ಮೂಲದ ಮಹಿಳೆಯೊಬ್ಬರು ಸಹ ಸಹಾಯ ಮಾಡಿದ್ದಾರೆ.
ಮಹಿಳೆ ಆರ್ಥಿಕವಾಗಿ ದುರ್ಬಲರಾಗಿದ್ದ ಕಾರಣ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಅರಿತ ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ಮಹಿಳೆಯ ತುರ್ತು ಖರ್ಚಿಗಾಗಿ ₹1500 ನೀಡಿದ್ದಾರೆ. ತಾಯಿ ಮತ್ತು ಮಗುವನ್ನು ಆಂಬುಲೆನ್ಸ್ ಮೂಲಕ ಶಾಂತಿಗ್ರಾಮ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯ ತಾಯಿ-ಮದು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಸಕಾಲದಲ್ಲಿ ಗರ್ಭಿಣಿಗೆ ಸ್ಪಂದಿಸಿ ಮಗು ಮತ್ತು ತಾಯಿಯನ್ನು ಉಳಿಸಿ, ಮಾನವೀಯತೆ ಮೆರೆದ ನಿರ್ವಾಹಕಿ ಕಾರ್ಯವನ್ನು ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ಶ್ಲಾಘಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಬೀದಿ ನಾಯಿಗಳ ದಾಳಿಗೆ 15 ಕುರಿಗಳು ಬಲಿ