ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಇತ್ತೀಚೆಗೆ ವಿಶ್ವವಿದ್ಯಾಲಯದ ‘ಜೈವಿಕ ವಿಜ್ಞಾನದ ಇತ್ತೀಚಿನ ಪ್ರವೃತ್ತಿಗಳು (ಎನ್ಸಿಟಿಆರ್ಬಿಎಸ್- 2025)’ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿತ್ತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಪ್ರೊ. ಮುತ್ತುಕುಮಾರ್ ಮುತ್ತುಚಾಮಿ, “ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆಯ ಸಂರಕ್ಷಣೆ ಅತ್ಯಂತ ಮಹತ್ವದ್ದು. ನೈಸರ್ಗಿಕ ಸಂಪನ್ಮೂಲಗಳು ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಗೆ ಸರಿಯಾದ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ಬಾಹ್ಯಾಕಾಶ ತಂತ್ರಜ್ಞಾನ ನಮಗೆ ನೆರವಾಗಬಹುದು” ಎಂದು ಅಭಿಪ್ರಾಯಪಟ್ಟರು.
ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಎಲ್. ಧರ್ಮ, “ಸಮಾಜಕ್ಕಾಗಿ ವೈಜ್ಞಾನಿಕ ಬೆಳವಣಿಗೆಗಳು ಮತ್ತು ಮಾಲಿನ್ಯ ಮುಕ್ತ ಪ್ರಕೃತಿ ನಿರ್ಮಾಣ ಯುವ ವಿಜ್ಞಾನಿಗಳ ಜವಾಬ್ದಾರಿ” ಎಂದರು.
ಬೆಂಗಳೂರಿನ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಸಂಶೋಧನಾ ಅಧಿಕಾರ ಜವಾಹರ್ ರವೀಂದ್ರನ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಾಗಾರದ ಸಂಚಾಲಕ ಡಾ. ನರಸಿಂಹಯ್ಯ ಎನ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಾಗಾರದ ಉದ್ದೇಶದ ಮೇಲೆ ಬೆಳಕು ಚೆಲ್ಲಿದರು. ಜೈವಿಕ ವಿಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪದವಿ, ಸ್ನಾತಕೋತ್ತರ ಪದವಿ ಬೋಧಕರು ಮತ್ತು ವಿದ್ಯಾರ್ಥಿಗಳು, ಸಂಶೋಧಕರಿಗೆ ತರಬೇತಿ ನೀಡಲಾಯಿತು.
ಇದನ್ನೂ ಓದಿ: ಮಂಗಳೂರು | ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್ ನಿಧನ
ಸುಮಾರು 10 ಆಹ್ವಾನಿತ ಉಪನ್ಯಾಸಗಳೊಂದಿಗೆ, ಅನೇಕ ವೈಜ್ಞಾನಿಕ ಚರ್ಚೆಗಳನ್ನು ನಡೆಸಲಾಯಿತು. ಆರು ಪೋಸ್ಟರ್ಗಳು ನಗದು ಬಹುಮಾನ ಮತ್ತು ಗೌರವ ಪ್ರಮಾಣಪತ್ರಗಳನ್ನು ಗೆದ್ದವು.