- ಬಿಸಿಯೂಟ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಮನವಿ
- ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ
ಚುನಾವಣೆ ಸಮಯದಲ್ಲಿ ಚುನಾವಣಾ ಕೆಲಸಕ್ಕೆ ಹಾಜರಾಗುವ ಅಧಿಕಾರಿಗಳಿಗೆ ಬಿಸಿಯೂಟ ತಯಾರಿಸುವ ಕಾರ್ಮಿಕರಿಗೆ ಕಾಂಟಿಜೆನ್ಸಿ ಹಣ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಅಕ್ಷರ ದಾಸೋಹ ಇಲಾಖೆಯ ಯಾದಗಿರಿ ಸಹಾಯಕ ನಿರ್ದೇಶಕರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆ ನಿಮಿತ್ತ ಮೇ.10 ರಂದು ಮತದಾನದ ಬೂತ್‌ಗಳಿಗೆ ಅಧಿಕಾರಿಗಳು ಒಂದು ದಿನ ಮುಂಚಿತವಾಗಿ ಬರುತ್ತಾರೆ. ಆ ಅಧಿಕಾರಿಗಳಿಗೆ ಬಿಸಿಯೂಟ ಕಾರ್ಮಿಕರು ಅಡುಗೆ ಮಾಡಿಕೊಡಬೇಕಾಗುತ್ತದೆ. ಈ ಕೆಲಸ ಮಾಡುವದಕ್ಕೆ ನಮಗೆ ಯಾವುದೇ ರೀತಿ ಹಣ ನೀಡುವುದಿಲ್ಲ. ಆದ್ದರಿಂದ, ಇಲಾಖೆಯು 2 ದಿನದ ಕಾಂಟಿಜೆನ್ಸಿ ಹಣ ನೀಡಬೇಕು” ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? : ತುಮಕೂರು | ಮಾಜಿ ಡಿಸಿಎಂ ಪರಮೇಶ್ವರ್ ಸ್ವಕ್ಷೇತ್ರದ 13 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ
“ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿವೆ. ಆ ಹಣದಲ್ಲಿ ಬಿಸಿಯೂಟದ ಕಾರ್ಮಿಕರಿಗಾಗಿ 2 ದಿನದ ಕೂಲಿ ಹಣ ನೀಡಬೇಕು. ಒಂದು ವೇಳೆ ನೀಡದಿದ್ದರೆ ಚುನಾವಣಾ ಅಧಿಕಾರಿಗಳಿಗೆ ಅಡುಗೆ ಮಾಡುವುದನ್ನು ಬಹಿಷ್ಕರಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಸೌಭಾಗ್ಯ ಮಾಲಗತ್ತಿ, ಶಹಾಜೀದಿಬೇಗಂ, ಪ್ರಕಾಶ ಆಲ್ದಾಳ, ಯಲ್ಲಪ್ಪ ಚಿನ್ನಾಕಾರ, ಸುರೇಖಾ ಕುಲಕರ್ಣಿ ಸೇರಿದಂತೆ ಹಲವು ಬಿಸಿಯೂಟ ಕಾರ್ಮಿಕರು ಉಪಸ್ಥಿತರಿದ್ದರು.