ವಡಗೇರಾ ಗ್ರಾಮದಲ್ಲಿ ಅಳವಡಿಸಿರುವ ಅಂಬೇಡ್ಕರ್ ಧ್ವಜಸ್ತಂಭಕ್ಕೆ ಕೆಲವರು ತಕರಾರು ತೆಗೆದಿದ್ದಾರೆ. ಇದು ಸರಿಯಲ್ಲ. ಆ ಧ್ವಜಸ್ತಂಭವನ್ನು ತೆರವುಗೊಳಿಸುವುದಾದೆ, ಗ್ರಾಮದಲ್ಲಿ ಹಾಕಿರುವ ಎಲ್ಲ ಸಂಘಟನೆಗಳ ನಾಮಫಲಕ ಮತ್ತು ಧ್ವಜಸ್ತಂಭಗಳನ್ನು ತೆರವುಗೊಳಿಸಬೇಕು ಎಂದು ಭೀರ್ಮ್ ಆರ್ಮಿ ಹೇಳಿದೆ.
ಸಂಘಟನೆಯ ಮುಖಂಡರು ಯಾದಗಿರಿ ಜಿಲ್ಲೆಯ ಶಹಾಪುರ ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ತಾಲೂಕಿನ ವಡಗೇರಾ ಗ್ರಾಮದಲ್ಲಿ ಕುರಕುಂದಾಕ್ಕೆ ಹೋಗುವ ರಸ್ತೆ ಬದಿಯಲ್ಲಿ ಮಹಾ ಮಾನವಾತವಾದಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಧ್ವಜಸ್ತಂಭವನ್ನು ಭೀಮ್ ಆರ್ಮಿ ಅಳವಡಿಸಿದೆ. ಆದರೆ, ಇದಕ್ಕೆ ಕೆಲವು ಕಿಡಿಗೇಡಿಗಳು ವಿನಾಕಾರಣ ತಕರಾರು ತೆಗೆದಿದ್ದಾರೆ. ಗ್ರಾಮದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ನಾವು ಅಳವಡಿಸಿದ ಧ್ವಜಸ್ತಂಭ ತೆರವುಗೊಳಿಸುವುದಾದರೆ, ವಡಗೇರಾದಲ್ಲಿ ಅನಧಿಕೃತವಾಗಿ ಹಾಕಲಾಗಿರುವ ಎಲ್ಲ ಸಂಘಟನೆಗಳ ನಾಮಫಲಕ ಮತ್ತು ಧ್ವಜ ಸ್ತಂಭ ತೆರವುಗೊಳಿಸಬೇಕು. ಸಾಮಾಜಿಕ ನ್ಯಾಯ ಕಲ್ಪಿಸಿ ಕೊಡಬೇಕು. ಕೇವಲ ನಮ್ಮ ಧ್ವಜಸ್ತಂಭ ತೆರವಿಗೆ ಮುಂದಾಗಬಾರದು” ಎಂದು ಆಗ್ರಹಿಸಿದ್ದಾರೆ.
“ಅಂಬೇಡ್ಕರ್ ಧ್ವಜಸ್ತಂಭ ತೆರವುಗೊಳಿಸಲು ಮುಂದಾದರೆ, ತಾಲೂಕು ಕಚೇರಿ ಎದುರು ನಾವು ನಿರಂತರ ಧರಣಿ ಸತ್ಯಾಗ್ರಹ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಹಕ್ಕೊತ್ತಾಯ ಸಲ್ಲಿಸುವ ವೇಳೆ ಸೈದಪ್ಪ ಎಮ್ ಕಣಜಕರ್, ಶರಣ್ ಎಸ್ ಗೊಂದನವರ್, ಮೌಲಾಲಿ, ಕಲಪ್ಪ ಇನ್ನಿತರರು ಇದ್ದರು.