ಯಾದಗಿರಿ ನಗರದ ಲಾಡೀಸ್‌ಗಲ್ಲಿಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಮಷಿನ್‌ದಿಂದ ಔಷಧಿ ಸಿಂಪಡಿಸಿ, ಚರಂಡಿಗಳ ಹೂಳೆತ್ತಲು ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿ (ರಿ) ಕರ್ನಾಟಕ ಯಾದಗಿರಿ ಜಿಲ್ಲಾ ಸಮಿತಿ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದೆ.
ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ರಾಹುಲ್ ಕೊಲ್ಲೂರಕರ ಮಾತನಾಡಿ, ಯಾದಗಿರಿ ನಗರದ ಎಲ್ಲಾ ವಾರ್ಡಗಳಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಜನರಿಗೆ ಮಲೇರಿಯಾ, ಡೆಂಗ್ಯೂ, ಕಾಲರಾ ರೋಗ ಹೆಚ್ಚುತ್ತಿದ್ದರೂ, ಚರಂಡಿಗಳ ಹೂಳು ತೆಗೆಯುತ್ತಿಲ್ಲ. ಸ್ವಚ್ಚತೆ ಕಾಪಾಡಿರುವುದಿಲ್ಲ. ಬೀದಿ ದೀಪಗಳನ್ನು ಕೂಡಾ ಅಳವಡಿಸಿಲ್ಲ. ಸುಮಾರು ದಿನಗಳಿಂದ ಹೂಳೇ ತೆಗೆದಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುತ್ತಾರೆ ಎಂದು ಆರೋಪಿಸಿದರು.
ಆದ ಕಾರಣ ತಾವು ದಯಮಾಡಿ, ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಮಷಿನ್‌ದಿಂದ ಔಷಧಿ ಸಿಂಪಡಿಸಿ, ಚರಂಡಿ ಹೂಳು ತೆಗೆದು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಒಂದು ವೇಳೆ ಕ್ರಮಕ್ಕೆ ಮುಂದಾಗದೇ ಹೋದರೆ ಮುಂದಿನ ದಿನ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸುವುದರ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾ.ಅಧ್ಯಕ್ಷ ರಮೇಶ, ಸಹ ಕಾರ್ಯದರ್ಶಿ ಆಕಾಶ ಸಾಳುಂಕೆ, ಜಿ.ಸ. ಸದಸ್ಯ ರಮೇಶ ಕ್ಯಾತ್ನಾಳ, ಹಸೇನ್ ನದಾಫ್, ನಿಂಗು ಪೂಜಾರಿ, ನಾಗರಾಜ ಉಪಸ್ಥಿತರಿದ್ದರು.
