ಕಲಬುರಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶಹಾಪುರದಲ್ಲಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಪ್ರತಿಭಟನೆ ನಡೆಸಿದೆ. ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಅಂಬೇಡ್ಕರ್‌ಗೆ ಅಪಮಾನ ಮಾಡಿದವರನ್ನು ಜಿಲ್ಲೆಯಿಂದ ಶಾಶ್ವತವಾಗಿ ಗಡಿಪಾರು ಮಾಡಬೇಕು. ರಾಜ್ಯದಲ್ಲಿರುವ ಎಲ್ಲ ಅಂಬೇಡರ್ ಪ್ರತಿಮೆಗಳ ಬಳಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಶರಣ್ ಎಸ್ ಗೊಂದನವರ್ , ಮೌಲಾಲಿ, ವಿಧ್ಯಾರ್ಥಿ ಘಟಕ ತಾ ಅದ್ಯಕ್ಷರಾದ ಮಂಜು ದೊರನಹಳ್ಳಿ,ದೇವು ದೊರನಹಳ್ಳಿ ,ಬಾಬು ಹೋತಪೇಠ, ಡಿಗ್ರಿ ಬೈ ಶಹಾಪುರ,ಬಲಭೀಮು,ಮಂಜು ಬುದ್ದ ನಗರ, ಅನಿಲ್ ಬುದ್ದ ನಗರ,ಬಸ್ಸು ಗುಂಡುಗುರ್ತಿ,ನಾಗು ,ಭಿಮು, ಹಾಗೂ ಇನ್ನಿತರ ಡಾ.ಬೀ ಆರ್ ಅಂಬೇಡ್ಕರ್ ಅನುಯಾಯಿಗಳು ಇದ್ದರು.