ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಆಸ್ತಿ ಮಾಡುವ ಬದಲು, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಜೊತೆಗೆ ಮಕ್ಕಳ ಉನ್ನತಿಗೆ ಪೋಷಕರ ಸಹಕಾರ ಅಗತ್ಯವಾಗಿದೆ. ಶಿಕ್ಷಣದಿಂದ ಎಲ್ಲವೂ ಸಾಧ್ಯ ಎಂದು ಹೆಳವ ಸಮಾಜ ಕೋಡಿಹಳ್ಳಿ ಮಠದ ಶ್ರೀ ಬಸವ ಭೃಂಗೇಶ್ವರ ಶ್ರೀಗಳು ತಿಳಿಸಿದರು.
ಅಖಿಲ ಕರ್ನಾಟಕ ಹೆಳವ ಸಮಾಜ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಹೆಳವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಕುರಿತು ಧುಮ್ಮನಸೂರು ಮಠದ ಶ್ರೀ ಶಂಕರಲಿಂಗ ಸ್ವಾಮಿ, ಯಾದವ ಸಮುದಾಯದ ಹಿರಿಯ ಮುಖಂಡ ತಿಮ್ಮಯ್ಯ ಪುರ್ಲೆ, ಕ್ರಾಂತಿ ಪತ್ರಿಕೆ ಸಂಪಾದಕ ಇಂದೂಧರ ಸಿನ್ನೂರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಸದಾಶಿವ ನಾರಾಯಣಕರ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಪ್ಪಗೌಡ ಚೌಧರಿ, ಬಸವರಾಜ ಹೆಳವರ ಯಾಳಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ 11 ವಿಧ್ಯಾರ್ಥಿಗಳಿಗೆ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನದ ಜೊತೆಗೆ ಪ್ರತಿಭಾ ಪುರಸ್ಕಾರ ಮಾಡಿ ಸನ್ಮಾನಿಸಲಾಯಿತು.
ಇದನ್ನೂ ಓದಿ: ಯಾದಗಿರಿ | ಈಜಲು ಹೋದ ಇಬ್ಬರು ಕುರಿಗಾಯಿ ಯುವಕರು ನೀರುಪಾಲು
ಕಾರ್ಯಕ್ರಮದಲ್ಲಿ ಹಿರಿಯರಾದ ಹೆಚ್ ಎನ್ ಗೋಗಿ, ಮಲ್ಲಿಕಾರ್ಜುನ ಬಿ ಹೆಚ್ ಕಲಬುರ್ಗಿ, ಸಾಯಬಣ್ಣ ಹೆಳವರ ಕಲಬುರಗಿ, ಶ್ರೀಮಂತ ಸೌಂದರ್ಗೆ, ಶರಣಪ್ಪ ಕೆಲೂರ, ಹಣಮಂತ್ರಾಯ ಹಳಿಸಗರ, ಸಣ್ಣ ಭಿಮರಾಯ ಯಾಳಗಿ, ಶ್ರೀಕಾಂತ್ ಯಾಳಗಿ, ಪರಶುರಾಮ್ ಮುದನೂರ, ಲಾಲಪ್ಪ ಕಟ್ಟಿಮನಿ, ಹಣಮಂತ್ರಾಯ ಖಾನಾಪುರ, ಚಂದಪ್ಪ ಕಕ್ಕೇರಾ, ನೆಹರೂ ಹಳಿಸಗರ, ದೇವಪ್ಪ ನಗನೂರ, ಭೀಮರಾಯ ದಂಡಸೊಲ್ಲಾಪುರ, ರಾಮಚಂದ್ರ ಹೆಗ್ಗಣದೊಡ್ಡಿ, ಮಲ್ಲಪ್ಪ ದೋರನಳ್ಳಿ, ಭೀಮಣ್ಣ ಹಂಚಿನಾಳ, ಶಿವು ಕಕ್ಕೇರಾ, ಅಂಬ್ರೀಶ್ ಯಾದಗಿರಿ ಸೇರಿದಂತೆ ಇತರರು ಇದ್ದರು.