ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮುಂಗಾರು ಮಳೆಯು ಪ್ರಾರಂಭವಾಗುವ ಮುನ್ಸೂಚನೆ ಇದ್ದು, ನಾರಾಯಣಪೂರ ಆಣೆಕಟ್ಟೆಗೂ ಸಹ ಹೆಚ್ಚಿನ ಒಳಹರಿವನ್ನು ಆಲಮಟ್ಟಿ ಹಾಗೂ ಮಲಪ್ರಭಾ ಜಲಾಶಯಗಳಿಂದ ಹಾಗೂ ಈ ಜಲಾಶಯಗಳ ಕೆಳಭಾಗದಲ್ಲಿ ಬರುವ ಜಲಾನಯನ ಪ್ರದೇಶಗಳಿಂದ ನಿರೀಕ್ಷಿಸಲಾಗಿದೆ.
ʼನಾರಾಯಣಪುರ ಅಣೆಕಟ್ಟೆಗೆ ಹರಿದು ಬರುವ ಒಳಹರಿವಿನ ಪರಿಮಾಣಾಕ್ಕನುಗುಣವಾಗಿ ನಾರಾಯಣಪೂರ ಆಣೆಕಟ್ಟೆಯಿಂದ ಕೃಷ್ಣಾ ನದಿಗೆ ಜೂ 12 ರಿಂದ ಯಾವುದೇ ಕ್ಷಣದಲ್ಲಿ ಪ್ರವಾಹದ ನೀರನ್ನು ಹರಿಬಿಡುವ ಸಾಧ್ಯತೆ ಇರುತ್ತದೆ ಎಂದು ಕೃಭಾಜನಿನಿ ಅಧೀಕ್ಷಕ ಅಭಿಯಂತರ ರಮೇಶ ಜಿ. ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನಾರಾಯಣಪೂರ ಆಣೆಕಟ್ಟೆಯ ಕೆಳಭಾಗದ ಕೃಷ್ಣಾ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಜಾಗೃತೆಯಿಂದ ಇರಲು, ತಮ್ಮ ಜನ-ಜಾನುವಾರು, ಪಂಪ್ ಸೆಟ್ ಇತ್ಯಾದಿ ವಸ್ತುಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಲು ಹಾಗೂ ಸುರಕ್ಷತೆಗಾಗಿ ನದಿಪಾತ್ರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಜಾಗ್ರತೆ ಮುನ್ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಕಳೆದ ಮೂರು ವರ್ಷದಲ್ಲಿ 39 ಬಾಲ ಕಾರ್ಮಿಕರ ರಕ್ಷಣೆ : ಬೇಕಿದೆ ಇನ್ನಷ್ಟು ಬಿಗಿ ಕ್ರಮ!