ಮೈತ್ರಿ ಸಾಮಾಜಿಕ, ಸಾಂಸ್ಕೃತಿಕ ಶಿಕ್ಷಣ ಟ್ರಸ್ಟ್ ವಿಭೂತಿಹಳ್ಳಿ ವತಿಯಿಂದ ನೆಲ ಮೂಲದ ಹಾಡುಗಳ ಗಾಯನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಪ್ರಜ್ಞಾ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಜ್ಞಾ ಕಾಲೇಜು ಪ್ರಾಚಾರ್ಯ ಸೈಯಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಗ್ರಾಮೀಣ ಸಂಸ್ಕೃತಿ, ನೆಲದ ಹಾಡುಗಳು, ಜಾನಪದ ಪರಂಪರೆ ಮತ್ತು ಸ್ಥಳೀಯ ಕಲೆಯ ಮೌಲ್ಯವನ್ನು ಕಾಪಾಡುವುದು ಹಾಗೂ ಮುಂದಿನ ತಲೆಮಾರಿಗೆ ಪರಿಚಯಿಸುವುದು ಅಗತ್ಯವಾಗಿದೆ. ನಾಡು-ನುಡಿಯ ಗೌರವವೊಂದು ಮೂಡುತ್ತದೆ, ಜನರ ಮನಸ್ಸಿನಲ್ಲಿ ನೆಲದ ಕಲೆಯ ಮೇಲಿನ ಭಾವನಾತ್ಮಕ ಸಂಪರ್ಕ ವೃದ್ಧಿಸುತ್ತದೆʼ ಎಂದು ತಿಳಿಸಿದರು.
ಸ್ನೇಹ ಕಾಲೇಜಿನ ಪ್ರಾಂಶುಪಾಲ ಯಲ್ಲಪ್ಪ ಬಡಿಗೇರ್ ಮಾತನಾಡಿ, ʼದೇಶಿ ಸಂಸ್ಕೃತಿ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಕಾಲೇಜುಗಳಲ್ಲಿ ಸೇರಿದಂತೆ ಪ್ರತಿ ಹಳ್ಳಿಗಳಲ್ಲಿ ರೂಪಿಸಿದರೆ ಜನರಿಗೆ ಮತ್ತಷ್ಟು ಅರಿವು ಮೂಡಿಸಲು ಸಹಕಾರಿಯಾಗುತ್ತದೆʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೈತ್ರಿ ಸಂಸ್ಥೆಯ ಮುಖ್ಯಸ್ಥ ವಿಶ್ವ ನಾಟೇಕಾರ್ ಮಾತನಾಡಿ, ʼಮುಂದಿನ ದಿನಗಳಲ್ಲಿ ನಾಡಿನಾದ್ಯಂತ ನಮ್ಮ ಸಂಸ್ಥೆಯು ಜಾನಪದ ಪರಂಪರೆ ಮತ್ತು ಸ್ಥಳೀಯ ಸಂಸ್ಕೃತಿಗಳ ಮೌಲ್ಯಗಳ ಕುರಿತು ಅರಿವು ಮೂಡಿಸುವ ಮತ್ತು ಸಾಂಸ್ಕೃತಿಕತೆ ಬಿಂಬಿಸುವಂತೆ ಕಾರ್ಯ ನಿರ್ವಹಿಸುತ್ತದೆʼ ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವು; ಸಚಿವ ಈಶ್ವರ ಖಂಡ್ರೆ ರಾಜೀನಾಮೆ ನೀಡಲಿ : ಖೂಬಾ
ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮರಿಲಿಂಗ ಹೀರೆಮಠ ಸ್ವಾಗತಿಸಿ ನಿರೂಪಿಸಿದರು.
ಅಯ್ಯಣ್ಣ ಗೊಂದೆನೂರ್ ವಂದಿಸಿದರು.