ಯಾದಗಿರಿ ಜಿಲ್ಲೆಯ ಶಹಾಪುರ್ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ವಿಶೇಷ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತಹೀನತೆಯ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್- ಶಹಾಪುರ್ ಕಚೇರಿ ಹಾಗೂ ಸೇವಾ ಮೊಬ್ ಸಹ ಭಾಗಿತ್ವದಲ್ಲಿ ನಡೆದ ವಿಶೇಷ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆಯ ಜನಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಬಿಪಿ, ಶುಗರ್ ಹಾಗೂ ರಕ್ತ ತಪಾಸಣೆ ಮಾಡಿ, ಉಚಿತ ಮಾತ್ರೆಗಳನ್ನು ನೀಡಲಾಯಿತು. ಅಲ್ಲದೆ, ರಕ್ತಹೀನತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ 100ಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.
ಈ ಶಿಬಿರದಲ್ಲಿ ಗ್ರಾಮಸ್ಥರು, ಪಿನ್ ಕೇರ್ ಫೈನಾನ್ಸ್ ಬ್ಯಾಂಕಿನ ಮುಖ್ಯಸ್ಥ ಭೂಪತಿ ರೆಡ್ಡಿ, ಲಿಂಗಯ್ಯ ನಾಯಕ್, ಪರಮೇಶ, ರವಿ ಕುಮಾರ್, ಮಹೇಶ್, ಅಮಲಪ್ಪ ಹಾಗೂ ಡಾ. ವಿಜಯ್ ಹಾಗೂ ಸೇವಾ ಮೊಬ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಗ್ರಾಮದ ಎಲ್ಲ ಸದಸ್ಯರು ಭಾಗವಹಿಸಿದ್ದರು.