ಯಾದಗಿರಿಯ ಕೆಂಭಾವಿಯಲ್ಲಿ ಪಂಚಮಸಾಲಿ ಸಮಾಜದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಹೋನಪ್ಪಗೌಡ ಮೇಟಿಗೌಡ ಇವರನ್ನು ಮುದನೂರಿನ ಹಿರಿಯ ಮುಖಂಡರು ಸನ್ಮಾನಿಸಿದರು.
ನೂತನ ಉಪಾಧ್ಯಕ್ಷ ಹೊನ್ನಪ್ಪಗೌಡ ಮೇಟಿಗೌಡ ಮಾತನಾಡಿ, ಪಂಚಮಸಾಲಿ ಸಮಾಜದ ಏಳಿಗೆಗಾಗಿ ನಾವು ಎಲ್ಲರೂ ಒಂದಾಗಬೇಕಿದೆ. ಪಂಚಮಸಾಲಿ ಸಮಾಜಕ್ಕೆ ಅನ್ಯಾಯವಾದಾಗ ನಾವು ಹೋರಾಟ ಮಾಡಲು ಸದಾಸಿದ್ದರಿದ್ದೇವೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವವರೆಗೂ ನಾವು ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಶಿವರೆಡ್ಡಿ ಯಡಹಳ್ಳಿ, ಸಿದ್ಧನಗೌಡ ಗೌಡಪ್ಪಗೌಡ, ನಾಗರೆಡ್ಡಿ ಬುಸ್ಸಾ, ಈರಣ್ಣ ಚೌದ್ರಿ, ಪ್ರಭು ಬಳಿ, ಎಸ್.ಐ. ತನಶೆಟ್ಟಿ, ಬಸವರಾಜ್ ಸಜ್ಜನ್, ಗೌಸ್ ಪಟೇಲ್, ಡಾ.ಭಾಷಾಪಟೇಲ್, ಸೈಯದ್ ತಾಳಿಕೋಟಿ ಹಾಗೂ ಇತರರು ಇದ್ದರು.