ಮಹಾನ್ ಧರ್ಮನಿರಪೇಕ್ಷ, ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ಅವರ 134ನೇ ಸ್ಮರಣ ದಿನವನ್ನು ಎಐಡಿಎಸ್‌ಒ ಜಿಲ್ಲಾ ಸಂಘಟನೆ ನೇತೃತ್ವದಲ್ಲಿ ಯಾದಗಿರಿ ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹಾಗೂ ಯರಗೋಳ ಗ್ರಾಮದ ಬಸ್ ನಿಲ್ದಾಣದ ಬಳಿ ಆಚರಿಸಲಾಯಿತು.
ಎಐಡಿಎಸ್‌ಒ ಯಾದಗಿರಿ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ. ಮಾತನಾಡಿ, “ಆಧುನಿಕ ಶಿಕ್ಷಣಕ್ಕೆ ನಾಂದಿ ಹಾಡಿದ, ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ, ವಿಧವಾ ಪುನರ್ ವಿವಾಹಕ್ಕಾಗಿ ದುಡಿದ ಮಹಾನ್ ಚೇತನ ಈಶ್ವರಚಂದ್ರ ವಿದ್ಯಾಸಾಗರ ಅವರು ನಮ್ಮೆಲ್ಲರಿಗೂ ಆದರ್ಶವಾಗಬೇಕು. ಸಾರ್ವಜನಿಕ ಶಿಕ್ಷಣ ಉಳಿಸುವ ಹೋರಾಟಕ್ಕೆ ವಿದ್ಯಾಸಾಗರ ಅವರಿ ನಮಗೆ ದಾರಿದೀಪ ಆಗಿದ್ದಾರೆʼ ಎಂದರು.
ಕಾರ್ಯಕ್ರಮದಲ್ಲಿ ಎಐಡಿಎಸ್ಒ ಸದಸ್ಯರಾದ ದೇವೀಂದ್ರಮ್ಮ, ಲಕ್ಷ್ಮೀಕಾಂತ, ರೆಡ್ದೆಪ್ಪ, ರಂಜಿತಾ, ಶ್ರವಣಕುಮಾರ, ಮೆಹಬೂಬ್, ನಾಗಿಂದ್ರಮ್ಮ ಹಾಗೂ ಊರಿನ ನಾಗರೀಕರಾದ ಭೀಮರೆಡ್ಡಿ, ಯಂಕಾರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು.