ಯಾದಗಿರಿಯ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಅವರು ರಂಜಾನ್ ಅಂಗವಾಗಿ ಮುಸ್ಲಿಂ ಬಾಂಧವರಿಗೆ ಕಲ್ಲಂಗಡಿ ಹಣ್ಣು ಹಂಚಿದರು.
ರೈತರಿಂದ ಎರಡೂವರೆ ಕ್ವಿಂಟಾಲ್ ಕಲ್ಲಂಗಡಿ ಖರೀದಿಸಿ ತಮ್ಮ ಕಚೇರಿಯಲ್ಲಿ ಆಯೋಜಿಸಿದ ಸಭೆಯಲ್ಲಿ ಮುಸ್ಲಿಂ ಬಾಂಧವರಿಗೆ ವಿತರಿಸಿದರು.
ಉಮೇಶ್ ಮುದ್ನಾಳ ಅವರು ಯಾವುದೇ ಒಂದು ಸಮಾಜಕ್ಕೆ ಸೀಮಿತರಾಗದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಮುಸ್ಲಿಂ ಸಮುದಾಯದ ಮುಖಂಡರು ಹೇಳಿದರು.
ಅಖಿಲ ಭಾರತೀಯ ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಮುದ್ನಾಳ್ ಮಾತನಾಡಿ, ‘ಹಿಂದೂ-ಮುಸ್ಲಿಂ ಎಂಬ ಭೇದ ಭಾವ ಮಾಡದೇ ನಾವೆಲ್ಲರೂ ಸಹಬಾಳ್ವೆಯಿಂದ ಬದುಕಬೇಕು. ಹಿಂದೂ, ಮುಸ್ಲಿಂ ಎಲ್ಲರೂ ಜೊತೆಗೂಡಿ ಹಬ್ಬ ಆಚರಿಸಿದರೆ ಹಬ್ಬಕ್ಕೆ ಮೆರಗು ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.
ರಿಯಾಜ್ ಅಹಮ್ಮದ್, ಬಶೀರ್, ಬಾಬಾ ಪಟೇಲ್, ಎಂ.ಡಿ.ರಫೀಕ್, ಮಹೇಶ್ ಹಿಪ್ಪರಗಿ, ಪಾಷ, ಶರಣು ಜೋತ, ಸಾಬಯ್ಯ ಗುತ್ತೆದಾರ್, ಮಹೆಬೂಬ್, ಮಹೆಬೂಬಸಾಬ್, ಅಕ್ರಮ್, ಮಷಕ್, ಜಮಾಲ್, ಆರೀಫ್, ಪರ್ವೇಜ್, ಶಫಿ, ಅಜರ್, ರಫಿಕ್, ಖಾಸೀಂ, ಫಾರೂಕ್ ಹಸನ್, ಯುಸೂಫ್ ಚಾಂದ್, ಮಲ್ಲಿಕಾರ್ಜುನ, ಸಾಬಣ್ಣ, ಶರಣು ನಾರಾಯಣ ಪೇಟ್ ಇನ್ನಿತರರು ಉಪಸ್ಥಿತರಿದ್ದರು.