ದಲಿತ ಯುವಕ ರಾಕೇಶ ಕೊಲೆಯನ್ನು ಖಂಡಿಸಿ ಯಾದಗಿರಿ ಜಿಲ್ಲಾ ಮಾದಿಗ ಸಮಾಜ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿಗೆ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಯಾದಗಿರಿ ನಗರದಲ್ಲಿಯ ಶಹಾಪೂರಪೇಟ ಬಡಾವಣೆಯಲ್ಲಿ ಏ.21ರಂದು ತಡ ರಾತ್ರಿ ಮಾದಿಗ ಸಮಾಜಕ್ಕೆ ಸೇರಿದ ರಾಕೇಶ್ ಎಂಬ ದಲಿತ ಯುವಕನನ್ನು ನಿರ್ದಯದಿಂದ ಆಮಾನುಷವಾಗಿ ಅವನ ತಂದೆ-ತಾಯಿಗಳ ಮುಂದೆ ಕೊಲೆ ಮಾಡಿದನ್ನು ಉಗ್ರವಾಗಿ ನಾವು ಖಂಡಿಸುತ್ತೇವೆ ಎಂದರು.
ಒಬ್ಬ ದಲಿತ ಯುವಕ ರೊಟ್ಟಿಕೇಂದ್ರ ನಡೆಸುತ್ತಿರುವ ಮುಸ್ಲಿಂ ಯುವಕ ಫಯಾಜ ಅವರ ಮನೆಗೆ ಏ.21ರಂದು ಹೋಗಿ ರೊಟ್ಟಿಕೇಳಿದಾಗ ಆತನನ್ನು ತಳಿಸಿ ಅಲ್ಲಿಂದ ಕಳಿಸಿದ್ದಾರೆ. ಅಷ್ಟಕ್ಕೆ ನಿಲ್ಲದ ಈ ಜಿಹಾದಿ ಮನಸ್ಥಿತಿಯ ಯುವಕರ ಗುಂಪು ಕಟ್ಟಿಕೊಂಡು ದಲಿತ ಯುವಕನ ಮನೆಗೆ ಬಂದು, ಜಾತಿ ನಿಂದನೆ ಮಾಡುತ್ತ ಮನಬಂದಂತೆ ಹೊಡೆದು ಅವನ ತಂದೆ-ತಾಯಿಯ ಕಣ್ಣಮುಂದೆ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದಾಗಿನಿಂದ ಇಂತಹ ಜಿಹಾದಿ ಮನಸ್ಥಿಯ ವ್ಯಕ್ತಿಗಳು ತಮ್ಮ ಬಾಲಬಿಚ್ಚಿಕೊಂಡು ಕಾನೂನನ್ನು ಕೈಗೆ ತೆಗೆದುಕೊಂಡು ಕೊಲೆಗಳನ್ನು ಮಾಡುತ್ತಿರುವುದು ಸಾಮಾನವಾಗಿದೆ ಇಂತಹ ಘಟನೆಗಳು ಮರುಕಳಿಸಿದಂತೆ ಇಂತವರನ್ನು ಅವನ್ನು ಬೇಗ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ನಾವು ಸರ್ಕಾರಕ್ಕೆ ಆಗ್ರಹ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಒಂದಾದಮೇಲೆ ಒಂದರಂತೆ ಕೊಲೆಗಳು ನಡೆಯುತ್ತಿರುವುದನ್ನು ನೋಡಿದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಸರ್ಕಾರ ಜನ ಸಾಮಾನ್ಯರನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ ಕೋಲೆ ನಡೆದ ನಂತರ ಇದನ್ನು ಮುಚ್ಚಿಹಾಕವ ಪ್ರಶ್ನೆಗಳು ನಡೆದಿವೆ. ಕೊಲೆಯಾದ 14ಗಂಟೆಗಳ ನಂತರ ಪೋಲಿಸರು ದೂರನ್ನು ದಾಖಲಿಕೊಂಡಿದ್ದಾರೆ. ದಲಿತ ಗೃಹಮಂತ್ರಿಿದ್ದು ಈ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ನೀಡಲು ಆಗುತ್ತಿಲ್ಲ ಎಂದರೆ ಅವರು ಇವರು ಇಲ್ಲದಂತಾಗಿದೆ ಇಂತಹ ಗಂಭೀರ ಘಟನೆಗಳು ರಾಜ್ಯದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವುದರಿಂದ ನೈತಿಕ ಹೊಣೆಹೊತ್ತು ಗೃಹಮಂತ್ರಿಗಳಾದ ಜಿ.ಪರಮೇಶ್ವರರವರು ಕೂಡಲೆ ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿಬೇಕೆಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ದೇವಿಂದ್ರಾನಾಥ ನಾದ, ಬಸವರಾಜ ಮೇತ್ರೆ ನಾಯ್ಕಲ್, ಹಣವಂತ ಇಟಗಿ, ಮಲ್ಲಿಕಾರ್ಜುನ ಜೊಲ್ಲಪ್ಪನೋರ, ಸಾಬಣ್ಣ ಹೊರುಂಚ, ಶಿವದೂರ ಮುದ್ನಾಳ, ಸೈದಪ್ಪ ಕೋನೆಹಳ್ಳಿ, ಹಣಮಂತ ಭಂಡಾರಿ, ಪ್ರಭು ಹಿರೇಮಟಿ, ಮರೆಪ್ಪ ಚಟ್ಟೇರಕೇರಾ, ಸಾಬಣ್ಣ ಗಡ್ಡೆಸೂಗೂರು, ಸಾಬಪ್ಪ, ನಾಗಪ್ಪ ಹೋನಗೇರಾ, ಗೋಪಾಲ್ ದಾಸನಕೇರಿ, ಸಂಜಯಕುಮಾರ್ ಕವಲಿ, ನಿಂಗಪ್ಪ ಬೀರನಾಳ, ಸೈದಪ್ಪ ಕೋಲೂರ್, ಸ್ವಾಮಿದೇವ್, ಡಾ. ಸಿ. ಆರ್.ಕಂಬಾರ, ಚಂದ್ರು ಮುಂಡಂಗಿ ಇನ್ನಿತರರು ಉಪಸ್ಥಿತರಿದ್ದರು.
ಬೇಡಿಕೆಗಳು
- ಮೃತರ ಕುಟುಂಬಕ್ಕೆ 25ಲಕ್ಷ ರೂಪಾಯಿಗಳನ್ನು ಪರಿಹಾರ ಕೊಡಬೇಕು
- ಮೃತನ ತಾಯಿಗೆ ಸರ್ಕಾರಿ ನೌಕರಿಯನ್ನು ಒದಗಿಸಬೇಕು
- ಅವರ ಕುಟುಂಬಕ್ಕೆ 2 ಎಕರೆ ಜಮೀನು ಸರ್ಕಾರದಿಂದ ಮಂಜೂರು ಮಾಡಬೇಕು
