ಯಾದಗಿರಿ | ಬೋಧ ಗಯಾ ಮಂದಿರ ಕಾಯ್ದೆ ರದ್ದುಪಡಿಸಲು ಒತ್ತಾಯಿಸಿ ಸೆ.17ರಂದು ‘ಪಾಟ್ನಾ ಚಲೋ’

Date:

Advertisements

ಬೋಧ ಗಯಾ ಮಂದಿರ ಕಾಯ್ದೆ 1949 ರದ್ದುಪಡಿಸಲು ಒತ್ತಾಯಿಸಿ ಮತ್ತು ಬುದ್ಧ ಗಯಾದ ಮಹಾಬೋಧಿ ಮಹಾ ವಿಹಾರದ ಆಡಳಿತ ಮಂಡಳಿ ಸಂಪೂರ್ಣ ಬೌದ್ಧರ ಸ್ವಾಧೀನಕ್ಕೆ ಪಡೆಯಲು ಆಗ್ರಹಿಸಿ ಸೆಪ್ಟಂಬರ್ 17ರಂದು ‘ಪಾಟ್ನಾ ಚಲೋ’ ಮೂಲಕ ಐದು ಲಕ್ಷ ಬೌದ್ಧರ ಶಾಂತಿ ಯಾತ್ರೆ ಮತ್ತು ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ದೇವಿಂದ್ರ ಹೆಗ್ಗಡೆ ತಿಳಿದರು.

ಯಾದಗಿರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೌದ್ಧ ಸಾಹಿತಿ ಬುದ್ದ ಘೋಷ ದೇವಿಂದ್ರ ಹೆಗ್ಗಡೆ, “ಬುದ್ಧ ಗಯಾದ ಮಹಾಬೋಧಿ ಮಹಾವಿಹಾರವು ಜಗತ್ತಿನಾದ್ಯಂತ ಇರುವ ಬೌದ್ಧರಿಗೆಲ್ಲ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದೆ. ಇದೇ ನೆಲದಲ್ಲಿ ಜನ್ಮತಾಳಿದ ಬೌದ್ಧ ಧರ್ಮವು ಇಡೀ ಭಾರತ ಅಷ್ಟೇ ಅಲ್ಲ, ಏಷ್ಯಾದ ಹಲವು ದೇಶಗಳಲ್ಲಿ ಹರಡಿದೆ. ಶ್ರೀಲಂಕಾ, ಬರ್ಮಾ, ಇಂಡೋನೇಷ್ಯಾ, ಪರ್ಷಿಯಾ, ಟಿಬೆಟ್, ಚೀನಾ, ಜಪಾನ್ ಮುಂತಾದ ದೇಶಗಳಲ್ಲಿ ಹರಡಿ ಗಟ್ಟಿಯಾದ ನೆಲೆಕಂಡಿದೆ. ಅಲ್ಲಿಯ ರಾಷ್ಟ್ರೀಯ ಸಂಸ್ಕೃತಿಗಳೊಂದಿಗೆ ಬೆರೆತಿದೆ. ಭಾರತ ದೇಶದ ಮೌರ್ಯ, ಶಾತವಾಹನ, ಪಾಲ ಇನ್ನೂ ಹಲವಾರು ರಾಜಮನೆತನಗಳು ಬೌದ್ಧ ಧರ್ಮಕ್ಕೆ ರಾಜಾಶ್ರಯ ನೀಡಿ ಬೌದ್ಧ ಧರ್ಮವನ್ನು ಈ ನೆಲದ ರಾಜಧರ್ಮವನ್ನಾಗಿ ಪೋಷಿಸಿದ್ದರು” ಎಂದು ತಿಳಿದರು.

“ಕಾಲಾಂತರದಲ್ಲಿ ಭಾರತದಲ್ಲಿ ಬೌದ್ಧ ಧರ್ಮಕ್ಕೆ ರಾಜಾಶ್ರಯ ತಪ್ಪಿ ಹಲವಾರು ಧಾರ್ಮಿಕ ದಾಳಿಗಳು ನಡೆದು ಹುಟ್ಟಿದ ನೆಲದಲ್ಲಿ ಆಕ್ರಮಣಕ್ಕೆ ತುತ್ತಾಗಿ ನಾಶವಾಯಿತು. ಭಾರತದಾದ್ಯಂತ ಇದ್ದ ಸಾವಿರಾರು ಬೌದ್ಧ ವಿಹಾರಗಳು, ಸ್ತೂಪಗಳು, ಸಂಘಾರಾಮಗಳು, ಬೌದ್ಧ ಪ್ರಶಿಕ್ಷಣ ಕೇಂದ್ರಗಳು, ಬೌದ್ಧ ವಿಶ್ವವಿದ್ಯಾಲಯಗಳು ದುಷ್ಟ ಸಂಚಿಗೆ ಬಲಿಯಾದವು. ಅಳಿದುಳಿದ ಅವಶೇಷಗಳು ಇಸ್ಲಾಮೀಕರಣ ಮತ್ತು ಹಿಂದೂಕರಣಗೊಂಡವು. ಇದು ಇತಿಹಾಸದ ಸತ್ಯ” ಎಂದು ತಿಳಿಸಿದರು.

Advertisements

“ರಾಜಕುಮಾರ ಸಿದ್ದಾರ್ಥ ಜ್ಞಾನೋದಯ ಪಡೆದು ಭಗವಾನ ಗೌತಮ ಬುದ್ಧನಾದ ಬುದ್ಧಗಯ ಕ್ಷೇತ್ರವು ಕಾಲಾನುಕ್ರಮದಲ್ಲಿ ಆಕ್ರಮಣಕ್ಕೆ ಒಳಗಾಗಿ, ತನ್ನ ಐತಿಹಾಸಿಕ ಪರಂಪರೆಯನ್ನು ಕಳೆದುಕೊಂಡು ಹಿಂದೂ ಪುರೋಹಿತರ ವಶವಾಯಿತು. ಸಾಮ್ರಾಟ್ ಅಶೋಕ ಮತ್ತು ಪಾಲಾದೊರೆಗಳ ಆಶ್ರಯದಲ್ಲಿ ಅಭಿವೃದ್ಧಿ ಹೊಂದಿದ ಬೌದ್ಧ ಕ್ಷೇತ್ರ ಹೇಳ ಹೆಸರಿಲ್ಲದಂತೆ ಹಿಂದೂಕರಣಗೊಂಡಿತ್ತು” ಎಂದರು.

WhatsApp Image 2024 09 07 at 6.41.14 PM

“ಹಲವಾರು ಸಂಶೋಧಕರು, ಚಿಂತಕರು ಈ ಬಗ್ಗೆ ಬೆಳಕು ಚೆಲ್ಲಿ ಬುದ್ಧಗಯಾದಲ್ಲಿರುವ ಸ್ಥಿತಿಗತಿಯನ್ನು ಜಗತ್ತಿನ ಗಮನಕ್ಕೆ ತಂದರು. ಶ್ರೀಲಂಕಾದ ನಾಗರಿಕ ದಮ್ಮಪಾಲರವರು ಭಾರತಕ್ಕೆ ಬಂದು ಈ ಕುರಿತು ಚಳುವಳಿ ಪ್ರಾರಂಭಿಸಿದರು. ಸ್ವಾತಂತ್ರ ಹೋರಾಟದ ಅಂದಿನ ಸಂದರ್ಭದಲ್ಲಿ ಮಹಾತ್ಮಗಾಂಧಿ, ನೆಹರೂ, ಡಾ. ರಾಧಾಕೃಷ್ಣ ಇನ್ನಿತರ ಕಾಂಗ್ರೆಸ್ ಮುಖಂಡರು ಹಾಗೂ ಹಿಂದೂ ಮಹಾಸಭಾದ ನಾಯಕರು ಒಂದು ರಾಜಿ ಒಪ್ಪಂದಕ್ಕೆ ಬಂದು ಸ್ವಾತಂತ್ರದ ನಂತರ ಬೌದ್ಧರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು. ನಂತರ 1949ರಲ್ಲಿ ಬೋದಗಯ ಟೆಂಪಲ್ ಕಾಯ್ದೆ (Bodhagaya Tempe Act 1949) ಬಿಹಾರ ವಿಧಾನ ಸಭೆಯಲ್ಲಿ ಜಾರಿಗೊಳಿಸಿ, ಬೋಧಗಯ ದೇವಾಲಯ ಪ್ರತಿಬಂಧಕ ಸಮಿತಿ (BTMC)ಯಲ್ಲಿ 4 ಜನ ಬೌದ್ಧರು, 4 ಜನ ಹಿಂದು ಸದಸ್ಯರು ಹಾಗೂ ಜಿಲ್ಲಾಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದರು” ಎಂದರು.

“ಭಾರತದ ಸಂವಿಧಾನವು 1950 ಜನವರಿ 26ರಂದು ಜಾರಿಗೆ ಬಂದಿತು. ಆದರೆ ಸಂವಿಧಾನದ ಅನುಚ್ಛೇದ 13, 25 ಮತ್ತು 26ಕ್ಕೆ ವಿರೋಧವಿರುವ ಬೋದಗಯ ಟೆಂಪಲ್ ಕಾಯ್ದೆಯನ್ನು ರದ್ದುಗೊಳಿಸಿದೇ ಮುಂದುವರೆಸಲಾಗಿದೆ” ಎಂದು ತಿಳಿಸಿದರು.

“ಸಂವಿಧಾನದ ಪ್ರಕಾರ ದೇಶದ ಎಲ್ಲ ಹಿಂದೂ ದೇವಾಲಯಗಳು, ಹಿಂದೂಗಳ ಆಡಳಿತದಲ್ಲಿ, ಮಸೀದಿ-ಮದರಸಾಗಳು ಮುಸ್ಲಿಮರ ಆಡಳಿತದಲ್ಲಿ, ಚರ್ಚ್‌ಗಳು ಕ್ರೈಸ್ತರ ಆಡಳಿತದಲ್ಲಿ, ಗುರುದ್ವಾರಗಳು ಸಿಖ್ಖರ ಆಡಳಿತದಲ್ಲಿದೆ. ಆದರೆ ಬೌದ್ಧರ ಪವಿತ್ರ ಧಾರ್ಮಿಕ ಕ್ಷೇತ್ರ ಬುದ್ದಗಯ ಮಾತ್ರ ಬೌದ್ಧರ ಕೈಯಲ್ಲಿ ಇರದೇ ಹಿಂದೂಗಳ ಆಡಳಿತದಲ್ಲಿದೆ. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದರು.

“ಭಗವಾನ ಬುದ್ಧ ವಿಷ್ಣುವಿನ ಅವತಾರವೆಂದು ಬೌದ್ಧ ಧರ್ಮವು, ಹಿಂದು ಧರ್ಮದ ಭಾಗವೆಂದು ದಿಕ್ಕು ತಪ್ಪಿಸುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.

ಈ ಅನ್ಯಾಯ ಕೇಂದ್ರ ಸರ್ಕಾರ ಮತ್ತು ಬಿಹಾರ ರಾಜ್ಯ ಸರ್ಕಾರ ಸರಿಪಡಿಸಿ ಈ ವಿಹಾರವನ್ನು ಸಂಪೂರ್ಣವಾಗಿ ಬೌದ್ಧರಿಗೆ ಹಸ್ತಾಂತರ ಮಾಡಬೇಕೆಂದು 1991 ರಿಂದ ನಾಗಪೂರದ ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ ದೀಕ್ಷಭೂಮಿಯ ಅಧ್ಯಕ್ಷರಾಗಿರುವ ಜಪಾನ ಮೂಲದ ಬಂದಂತ ಆರ್ಯ ನಾಗಾರ್ಜುನ ಸುರೈ ಸಸಾಯಿ ಬಂತೇಜಿಯವರು ಹೋರಾಟ ಮಾಡುತ್ತ ಬಂದಿದ್ದಾರೆ. ಈ ಹೋರಾಟದ ಮುಂದುವರೆದ ಭಾಗವಾಗಿ ಅಖಿಲ ಭಾರತ ಬೌದ್ಧ ವೇದಿಕೆ ಮತ್ತು ಭಾರತದ ಎಲ್ಲಾ ಬೌದ್ಧ ಸಂಘಟನೆಗಳ ಬ್ಯಾನರ ಅಡಿಯಲ್ಲಿ ಬೋಧಿಸತ್ವ ಅನಾಗರಿಕ ದಮ್ಮಪಾಲರವರ 160ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಬೋಧಗಯ ವಿರುದ್ಧ, ಬಿಹಾರ ರಾಜ್ಯದ ರಾಜಧಾನಿ ಪಾಟ್ನಾದಲ್ಲಿ ಇದೇ ಸೆಪ್ಟೆಂಬರ್ 17 ರಂದು 5 ಲಕ್ಷ ಬೌದ್ಧರ ಶಾಂತಿ ಯಾತ್ರೆ ಮತ್ತು ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದರು.

ಇದನ್ನು ಓದಿದ್ದೀರಾ? ರಾಯಚೂರು | ಲೊಯೋಲಾ ಶಾಲಾಡಳಿತದಿಂದ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ಚೆಕ್‌ ವಿತರಣೆ

ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಜನ ಬೌದ್ಧ ಉಪಾಸಕರು ಮತ್ತು ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಲಿದ್ದಾರೆ. ಈ ಐತಿಹಾಸಿಕ ಹೋರಾಟಕ್ಕೆ ಯಾದಗಿರಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು, ಬೌದ್ಧ ಸಂಘ-ಸಂಸ್ಥೆಗಳು ಹಾಗೂ ಬೌದ್ಧ ಉಪಾಸಕರು ಮತ್ತು ಅಂಬೇಡ್ಕರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿ ಭಾಗವಹಿಸಬೇಕೆಂದು ಸುದ್ದಿಗೋಷ್ಠಿ ಮೂಲಕ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾರೆಪ್ಪ ಬುಕ್ಕಲೆಕರ್, ಮರೆಪ್ಪ ‌ಚಟ್ಟೇರಕೆರ್, ಮಲ್ಲಿಕಾರ್ಜುನ ಕ್ರಾಂತಿ, ವೆಂಕಟೇಶ ಹೊಸಮನಿ, ಬಾಬುರಾವ್ ಬೂತಾಳಿ, ಮಲ್ಲಿಕಾರ್ಜುನ ಪೂಜಾರಿ, ಡಾ. ಭಗವಂತ ಅನಾವರ, ನೀಲಕಂಠ ಬಡಿಗೇರ, ನಿಂಗಪ್ಪ ಕೊಲ್ಲೂರಕರ್,‌ ಚಂದ್ರು ಚಕ್ರವರ್ತಿ, ರಾಹುಲ ಹುಲಿಮನಿ, ಶಿವಪುತ್ರ ಜವಳಿ, ಗೋಪಾಲ ತಳಗೇರಿ, ಭೀಮಣ್ಣ ರಾಕಂಗೇರಾ, ಶಿವಕುಮಾರ , ಶರಣಪ್ಪ‌, ರಾಮಣ್ಣ ‌ಸೈದಾಪುರ, ಮಲ್ಲಪ್ಪ ಅರಿಕೇರಿ ಇನ್ನಿತರರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X