ಕೆಕೆಆರ್‌ಡಿಬಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ರಾಯಚೂರು ವಿಶ್ವ ವಿದ್ಯಾಲಯದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಮುಖಂಡರು ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕೆಕೆಆರ್‌ಡಿಬಿ ಯೋಜನೆಯಡಿ ವಿಶ್ವವಿದ್ಯಾನಿಲಯಕ್ಕೆ 2,79 ಕೋಟಿ ರೂ. ಅನುದಾನ ನೀಡಲಾಗಿತ್ತು. ಆ ಅನುದಾನದಲ್ಲಿ ಸಿಸಿ ಕ್ಯಾಮೆರಾ, ಸಿಸಿ ಟಿವಿ ಹಾಗೂ ಸ್ಟಾರ್ಟ ಕ್ಲಾಸ್‌ಗೆ ಸಂಬಂಧಿಸಿದಂತೆ ಉಪಕರಣಗಳನ್ನು ಖರೀದಿಸುವಾಗ ವಿಶ್ವವಿದ್ಯಾಲಯದ ಅಧಿಕಾರಿಗಳು ಮಾರುಕಟ್ಟೆ ದರಕ್ಕಿಂತ 4-5 ಪಟ್ಟು ಹೆಚ್ಚು ದರಕ್ಕೆ ಖರೀದಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರು ವಿಶ್ವವಿದ್ಯಾಲಯ ಒಂದೇ ಇದ್ದು, ಅಭಿವೃದ್ಧಿಗಾಗಿ ಸರ್ಕಾರ ಅನುದಾನ ನೀಡಿದರೆ, ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಪರಿಣಾಮ ಈ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ” ಎಂದು ದೂರಿದ್ದಾರೆ.
“ಭ್ರಷ್ಟಾಚಾರ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿಶ್ವವಿದ್ಯಾಲಯದ ಅಭಿವೃದ್ಧಿ ಹಾಗೂ ಶೈಕ್ಷಣಿಕ ಗುಣಮಟ್ಟ ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಾಶೀನಾಥ ನಾಟೇಕಾರ್ ಜಿಲ್ಲಾಧ್ಯಕ್ಷರು ಯಾದಗಿರಿ,ರಾಹುಲ್ ಕೊಲ್ಲೂರ್ ಜಿಲ್ಲಾ.ಸಂ.ಕಾರ್ಯದರ್ಶಿ ಯಾದಗಿರಿ,ಮಲ್ಲಿಕಾರ್ಜುನ ಕುಮನೂರು, ಮಲ್ಲಪ್ಪ ಕುರಕುಂದಿ, ಸಾಬಣ್ಣ ಹಂಚಿನಾಳ, ಭೀಮರಾಯ ಕ್ಯಾತ್ನಾಳ್, ಇತರ ಉಪಸ್ಥಿತರಿದ್ದರು.