ಯಾದಗಿರಿಯಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷ ಚುನಾವಣಾ ಪ್ರಚಾರದ ಅಂಗವಾಗಿ ಇಂದು ನಗರದ ಹಳೆ ಬಸ್ ನಿಲ್ದಾಣದ ಸುತ್ತ ಮುತ್ತ ಅಂಗಡಿಗಳಲ್ಲಿ, ಸಂತೆಯಲ್ಲಿರುವ ಜನರ ನಡುವೆ ಚುನಾವಣಾ ಪ್ರಚಾರ ಕೈಗೊಂಡಿತು.
ಜನವಿರೋಧಿಯಾದ ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಿ ಹೋರಾಟದ ಎಸ್‌ಯುಸಿ ಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ರಾಮಲಿಂಗಪ್ಪ ಅವರನ್ನು ಗೆಲ್ಲಿಸುವಂತೆ ಪ್ರಜ್ಞಾವಂತ ಮತದಾರರಲ್ಲಿ ಕಾರ್ಯಕರ್ತರು ಮನವಿ ಮಾಡಿದರು.
ನಮ್ಮ ಬದುಕಿನ ಆಗು-ಹೋಗುಗಳಿಗೆ, ಬೆಲೆ ಏರಿಕೆ, ನಿರುದ್ಯೋಗ, ಬಡತನ, ವೇಶ್ಯಾವಾಟಿಕೆ, ರೈತರ ಆತ್ಮಹತ್ಯೆ ಮುಂತಾದ ಸಮಸ್ಯೆಗಳಿಗೆ ಕಾರಣವಾಗಿರುವ ಈ ರಾಜಕೀಯ ವ್ಯವಸ್ಥೆಯನ್ನು ಸೋಲಿಸಿ. ಜನಪರ ವ್ಯವಸ್ಥೆಯ ಜಾರಿಗಾಗಿ ಹೋರಾಟದ ಅಭ್ಯರ್ಥಿಯನ್ನು ಚುನಾಯಿಸಿವಂತೆ ಜನರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಸದಸ್ಯರಾದ ಕೆ. ಸೋಮಶೇಖರ್, ಡಿ.ಉಮಾದೇವಿ, ಚನ್ನಬಸವ ಜಾನೇಕಲ್, ಚಾಂದ್ ಪಾಶಾ, ಶಿಲ್ಪಾ ಬಿ.ಕೆ, ಸುಭಾಷ್ಚಂದ್ರ ಬಿ.ಕೆ, ಪೀರಸಾಬ್, ಹೇಮಂತ್ ಹಾಗೂ ಮುಂತಾದವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು.