ಯಾದಗಿರಿಯಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನ ಘಟಕ ಮತ್ತು ನಗರ ಸಭೆ ಸಯುಕ್ತ ಆಶ್ರಯದಲ್ಲಿ ಕ್ಷಯ ಮುಕ್ತ ನಗರವನ್ನು ಮಾಡುವ ಸದಉದ್ದೇಶದಿಂದ ನಗರ ಸಭೆಯ ಪೌರ ಕಾರ್ಮಿಕರಿಗೆ ಕ್ಷಯ ರೋಗದ ಬಗ್ಗೆ ಅರಿವು ಕಾರ್ಯಕ್ರಮ ಮತ್ತು ಆರೋಗ್ಯ ತಪಾಸಣೆ ಶಿಬಿರವನ್ನು ಹಾಗೂ ʼಟಿಬಿ ಅನ್ನು ಸೋಲಿಸಿ ದೇಶವನ್ನು ಗೆಲ್ಲಿಸಿ ʼ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ. ಸಂಜೀವುಕುಮಾರ್ ಮಾತನಾಡಿ, ಕ್ಷಯ ರೋಗದ ಬಗ್ಗೆ ಭಯ ಬೇಡ. ಕ್ಷಯ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದೆ. ಕ್ಷಯರೋಗ ಸೊಂಕಿತ ವ್ಯಕ್ತಿ ಇಂದ ಒಬ್ಬರಿಂದ ಒಬ್ಬರಿಗೆ ಗಾಳಿಯ ಮುಖಾಂತರ ಹರಡುವ ಒಂದು ಸಾಂಕ್ರಾಮಿಕ ರೋಗ. ಇದು ಮೈಕೋಬ್ಯಾಕ್ಟ್ರಿಯಂ (tuberculosis) ಎಂಬ ಒಂದು ಬ್ಯಾಕ್ಟ್ರಿಯ ಮುಖಾಂತರ ಹಾರಡುತ್ತದೆ ಎಂದು ಹೇಳಿದರು.
ಕ್ಷಯ ರೋಗ ಸಂಬಂಧಿಸಿದಂತೆ 2 ವಾರಕಿಂತ ಹೆಚ್ಚು ಕೆಮ್ಮು, ಕಫದಲ್ಲಿ ರಕ್ತ ಬೀಳುವದು, ತೂಕದಲ್ಲಿ ಪ್ರಮಾಣ ಕಡಿಮೆ ಆಗುವದು, ರಾತ್ರಿವೇಳೆ ಜ್ವರ ಬರುವದು, ಇವು ಕ್ಷಯ್ ರೋಗದ ಲಕ್ಷಣಗಳು. ಇದರಲ್ಲಿ ಯಾವದಾದ್ರು ಒಂದು ಲಕ್ಷಣ ಇದ್ದಲ್ಲಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಹೋಗಿ ಸಂಬಂಧ ಪಟ್ಟ ವೈದ್ಯಧಿಕಾರಿಗಳ ಸಲಹೆ ಮೇರೆಗೆ ಕಫ ಪರಿಶೀಲನೆ ಮಾಡಿಸಿಕೊಳ್ಳಬೇಕು. ಕಫದ ಪರೀಕ್ಷೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವಾಗಿ ತಪಾಸಣೆ ಮಾಡಲಾಗುತ್ತದೆ ಮತ್ತು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಸಹ ನಿಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕ್ಷಯ ಸೊಂಕಿತ ವ್ಯಕ್ತಿಗೆ ಸರ್ಕಾರದಿಂದ ಪ್ರತಿ ತಿಂಗಳು 500 ರೂಪಾಯಿ ಪೌಷ್ಟಿಕ್ ಆಹಾರ ಸೇವೆನೆಗೋಸ್ಕರ ನೇರ ವಾಗಿ ಡಿಬಿಟಿ ಮುಖಾಂತರ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಗರ ಅರೋಗ್ಯ ಕೇಂದ್ರ ವೈದ್ಯಧಿಕಾರಿ ಡಾ. ವಿನುತಾ, ಸಲೀಂ ಹೆಲ್ತ್ ಇನ್ಸ್ಪೆಕ್ಟರ್, ಎಸ್‌ಟಿಎಲ್‌ಎಸ್ ಸುಭಾಷ್ ಮತ್ತು ಆಶಾ ಕಾರ್ಯ ಕರ್ತರು ಮತ್ತು ನಗರ ಸಭೆ ಸಿಬ್ಬಂದಿ ಭಾಗವಹಿಸಿದ್ದರು.