ಹದಿನಾರು ಸಾವಿರ ಪತ್ರಕರ್ತರ ಜ್ವಲಂತ ಸಮಸ್ಯೆಗಳನ್ನು ಬಗೆ ಹರಿಸುವಂತೆ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ’ ಸಂಘಟನೆಯು ಒತ್ತಾಯಿಸಿದೆ. ಯದಗಿರಿ ಜಿಲ್ಲೆಯ ಕಂಭಾವಿಯಲ್ಲಿ ಉಪತಹಸೀಲ್ದಾರ್‌ಗೆ ಸಂಘದ ಸದಸ್ಯರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಹಕ್ಕೊತ್ತಾಯ ಪತ್ರ ಸಲ್ಲಿಸಿ ಮಾತನಾಡಿದ ಸಂಘದ ತಾಲೂಕು ಕಾರ್ಯಾಧ್ಯಕ್ಷ ಇಲಿಯಾಸ್ ಪಟೇಲ್ ಬಳಗನೂರ್, “ಪತ್ರಕರ್ತರನ್ನು ಆಧುನಿಕ ಸಮಾಜದ ಕನ್ನಡಿಯಂದು ಹೇಳುತ್ತಾರೆ. ಹಲವಾರು ಪತ್ರಕರ್ತರು ಹಗಲಿರುಳು ಎನ್ನದೆ ತಮ್ಮ ಪ್ರಾಣ ಪಣಕಿಟ್ಟು ಸಮಾಜ ಸೇವೆ ಮಾಡುತ್ತಿದ್ದಾರೆ. ಆರ್‌ಎನ್‌ಐ ಪಡೆದು ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸಂಪಾದಕರು ಹಾಗೂ ವರದಿಗಾರರಿಗೆ ಬಸ್ ಪಾಸ್, ಮೀಡಿಯಾ ಕಿಟ್, ಮಾಶಾಸನ ಹಾಗೂ ಕಾರ್ಮಿಕ ಯೋಜನೆ ಅಡಿಯಲ್ಲಿ ಸೌಲಭ್ಯಗಳನ್ನು ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
“ಕೆಲ ಕುತಂತ್ರಿಗಳ ಕೈವಾಡದಿಂದ ನಿಜವಾದ ವರದಿಗಾರರು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಮುಖ್ಯಮಂತ್ರಿಗಳು ಸಾವಿರಾರು ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಗಿರೀಶ್ ಬ್ಯಾಕೋಡ್, ಮಲ್ಲು ಸಜ್ಜನ, ರಾಚಪ್ಪ ಕುಂಬಾರ ಹಾಗೂ ಇನ್ನಿತರರು ಇದ್ದರು.