ಹಿರಿಯ ನಾಗರಿಕರೊಬ್ಬರ ಮೇಲೆ ಯುವಕನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಗುರುಮಠಕಲ್ ತಾಲ್ಲೂಕಿನ ಪುಟಪಾಕ ಗ್ರಾಮದಲ್ಲಿ ನಡೆದಿದೆ.
ಪುಟಪಾಕ ಗ್ರಾಮದ ಹಿರಿಯರಾದ ನರಸಪ್ಪ ತಂದೆ ರಾಮಪ್ಪ (65) ಅವರ ಮೇಲೆ ಅದೇ ಗ್ರಾಮದ ಮುಸ್ಲಿಂ ಸಮಾಜದ ಯುವಕನೊಬ್ಬ ಕುಡಿದ ಅಮಲಿನಲ್ಲಿ ನರಸಪ್ಪ ಅವರೊಂದಿಗೆ ಜಗಳ ತೆಗೆದಿದ್ದು, ಅವರ ಮೈಮೇಲೆ ಪೆಟ್ರೋಲ್ ಎರಚಿ, ಬೆಂಕಿ ಹಚ್ಚಿದ್ದಾನೆ.
ಈ ದಾಳಿಯ ಪರಿಣಾಮವಾಗಿ ನರಸಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು, ಗ್ರಾಮಸ್ಥರು ಕೂಡಲೇ ಅವರನ್ನು ತೆಲಂಗಾಣದ ನಾರಾಯಣಪೇಟ ನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಮಾಹಿತಿ ಪಡೆದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಕೆ.ಬಿ. ವಾಸು ಅವರು ಆಸ್ಪತ್ರೆಗೆ ಭೇಟಿ ನೀಡಿ, ನರಸಪ್ಪ ಅವರ ಆರೋಗ್ಯ ವಿಚಾರಿಸಿದ್ದಾರೆ. ದಲಿತ ಸಮುದಾಯದ ನರಸಪ್ಪ ಊರಡಿ ಅವರ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯತ್ನಾಳ್ ಕಾಂಗ್ರೆಸ್‌ಗೆ ಅರ್ಜಿ ಹಾಕಿಲ್ಲ, ಹಾಕಿದರೂ ಸೇರಿಸಿಕೊಳ್ಳುವುದು ಕಷ್ಟ: ಎಂ ಬಿ ಪಾಟೀಲ್
ಕೂಡಲೇ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಯನ್ನು ತಕ್ಷಣವೇ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.