ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಬದ್ಧರಾಗಿರುವ ದಲಿತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ ಬೌದ್ಧರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಇದೇ ಬಜೆಟ್ಟಿನಲ್ಲಿ ಅನುದಾನ ಘೋಷಣೆ ಮಾಡಬೇಕು ಎಂದು ದೇವಿಂದ್ರ ಹೆಗಡೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸ್ಮಶಾನ ಭೂಮಿ ಒತ್ತುವರಿ ತೆರವಿಗೆ ದಸಂಸ ಆಗ್ರಹ
“ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹಾದೇವಪ್ಪನವರು ಈ ಬಗ್ಗೆ ದಿಟ್ಟ ಹೆಜ್ಜೆ ಇಟ್ಟು, ಅಂಬೇಡ್ಕರ್ ಚಳುವಳಿಗೆ ಶಕ್ತಿ ತುಂಬಿ ಹೊಸ ಇತಿಹಾಸ ದಾಖಲಿಸಬೇಕೆಂದು ರಾಜ್ಯದ ಅಂಬೇಡ್ಕರ್ ಅನುಯಾಯಿಗಳ ಒತ್ತಾಯವಾಗಿದೆ” ಎಂದು ತಿಳಿಸಿದ್ದು, ಪ್ರಕಟಣೆ ನೀಡಿದ್ದಾರೆ.