ಯಾದಗಿರಿ | ಅಬೇಂಡ್ಕರ್ ಭವನಕ್ಕೆ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿ ಎಸ್ಪಿಗೆ ಮನವಿ

Date:

ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಚಿನ್ನಾಕಾರ ಗ್ರಾಮದ ಅಂಬೇಡ್ಕರ್ ನಗರಕ್ಕೆ ಹೊಂದಿಕೊಂಡಿರುವ ಸರ್ವೆ ನಂ.458 ರಲ್ಲಿ 0-06 ಗುಂಟೆ ಜಾಗ ಡಾ. ಬಿ ಆರ್ ಅಂಬೇಡ್ಕ‌ರ್ ಭವನಕ್ಕೆ ಮಂಜೂರಾಯಗಿದ್ದು, ಇದಕ್ಕೆ ಹೊಂದಿಕೊಂಡಂತೆ ಉಳಿದ 0-03 ಗುಂಟೆ ಸರಕಾರಿ ಪರಂಪೋಕ ಇದೆ, ಈ 0-03 ಗುಂಟೆ ಜಮೀನು ಕೂಡಾ ಡಾ. ಬಿ ಆರ್ ಅಂಬೇಡ್ಕರ್ ಭವನಕ್ಕೆ ಮಂಜೂರು ಮಾಡಿಕೊಡಲು ಸಂಬಂಧಪಟ್ಟ ಅಕಾರಿಗಳಿಗೆ ಸೂಚಿಸುವಂತೆ ಒತ್ತಾಯಿಸಿ ಬಾಬಾ ಸಾಹೇಬ ಅಬೇಂಡ್ಕರ್ ಸಂಘ(ರಿ) ಗುರುಮಠಕಲ್ ಅಧ್ಯಕ್ಷ, ಕಾರ್ಯದರ್ಶಿ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಪಿ ವೃಥ್ವಿಕ್ ಇವರಿಗೆ ಮನವಿ ಸಲ್ಲಿಸಲಾಯಿತು.

- Advertisement -

ಮನವಿ ಸಲ್ಲಿಸಿ ಲಾಲಾಪ ತಲಾರಿ, ಅಶೋಕ ಅಂಬೇಡ್ಕರ್ ಮಾತನಾಡಿ, “ಚಿನ್ನಾಕಾರ ಗ್ರಾಮದ ಸರ್ವೆ ನಂ. 458 ರಲ್ಲಿ ಸರಕಾರಿ ಜಮೀನು 00 ಎಕರೆ 09ಗುಂಟೆ ರಲ್ಲಿ, 00ಎಕರೆ 06 ಗುಂಟೆ ಜಮೀನು ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ರವರ ಹೆಸರಿಗೆ ಮಂಜೂರು ಆಗಿ ಪಹಣಿ ಪತ್ರಿಕೆಯ‌ಲ್ಲಿ ನಮೂದಿಸಲಾಗಿದೆ. ಇದರ ಚೆಕ್ ಬಂದಿ ಪೂರ್ವಕ್ಕೆ-ಮುಖ್ಯ ರಸ್ತೆ ಪಶ್ಚಿಮಕ್ಕೆ- ಸರ್ವೇ ನಂ. 157, ಉತ್ತರಕ್ಕೆ ಮುಖ್ಯ ರಸ್ತೆ, ದಕ್ಷಿಣಕ್ಕೆ- ಸರ್ವೆ ನಂ. 457 ಎಂದು ಇರುತ್ತದೆ. ಇನ್ನೂ ರಿ೦ಎಕರೆ 03ಗುಂಟೆ ಜಮೀನು ಮಾತ್ರ ಈ ಸರ್ವೆ ನಂ. 458 ರ ಎರಡು ಬದಿಯ ರಸ್ತೆಗಳಿಗೆ ಒತ್ತುವರಿ ಆಗಿರುತ್ತದೆ. ಸದರಿ ಒತ್ತುವರಿಯಾದ ಜಮೀನನ್ನು ಪಹಣಿ ಪತ್ರಿಕೆಯ ಪೂಟ್ ಖರಾಬು ಕಲಂ ನಲ್ಲಿ ನಮೂದಿಸಿಬೇಕು. ಉಳಿದಿರುವ ಜಮೀನನ್ನು ಡಾ. ಬಾ ಬಾ ಸಾಹೇಬ್ ಅಂಬೇಡ್ಕರ್ ಭವನಕ್ಕೆ ಹೊಂದಿಕೊಂಡಿರುವುದರಿಂದ, ಆ ಜಾಗದಲ್ಲಿ ಡಾ. ಬಾ ಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಮತ್ತು ಉದ್ಯಾವನ ಹಾಗೂ ದಲಿತ ಸಮಾಜದ ಮದುವೆ ಕಾರ್ಯಕ್ರಮಗಳಿಗೆ ಕಲ್ಯಾಣ ಮಂಟಪಕ್ಕಾಗಿ ಜಾಗವನ್ನು ಮಿಸಲಿರಸಬೇಕೆಂದು ಸಮಸ್ತ ದಲಿತ ಸಮಾಜದವರ ಬೇಡಿಕೆಯಾಗಿದೆ” ಎಂದು ತಿಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

“ಈಗಾಗಲೇ ದಲಿತ ಸಮಾಜದವರ ಜಮೀನು ಸರ್ವೆ ನಂ. 404ರಲ್ಲಿ ಎಕರೆ 38ಗುಂಟೆ ಜಮೀನಿನಲ್ಲಿ ನಿರ್ಮಿಸಿದ ಕೈಗಾರಿಕ ಶೆಡ್ ಮತ್ತು ಶಾಲಾ ಕಟ್ಟಡ, ಸಮುದಾಯ ಭವನ ಈ ಎಲ್ಲಾ ಕಟ್ಟಡಗಳು ದಲಿತರ ಪಟ್ಟಾ ಜಮೀನಿನಲ್ಲಿ ನಿರ್ಮಾಣವಾಗಿರುತ್ತವೆ. ನಮಗೇನು ಈ ಜಮೀನಿನಲ್ಲಿ ಜಾಗ ಉಳಿದಿರುವುದಿಲ್ಲ. ಆದುದ್ದರಿಂದ ಈಗಾಗಲೇ 25ವರ್ಷಗಳಿಂದ ಗ್ರಾಮ ಪಂಚಾಯತಿ ಕಾರ್ಯಾಲಯವನ್ನು ಕಾ‌ರ್ ಪೆಂಟರ್ ಶೇಡ್ ನಲ್ಲಿ ನಡೆಸಿಕೊಂಡು ಬಂದಿರುತ್ತಾರೆ. ಈ ಸ್ಥಗಿತಗೊಂಡಿರುವ ಮತ್ತು ಸಿಥಿಲಗೊಂಡಿರುವ ಈ ಕಾರ್‌ಪೆಂಟರ್ ಶೇಡ್‌ನ್ನು ಡಿಸ್‌ಮೆಟಲ್ ಮಾಡಿ ಅಲ್ಲಿಯೆ ಗ್ರಾಮ ಪಂಚಾಯತ ಕಟ್ಟಡವನ್ನು ನಿರ್ಮಾಣ ಮಾಡಿ ಸರ್ವೆ ನಂ. 458 ರಲ್ಲಿ ಉಳಿದಿರುವ 03ಗುಂಟೆ ಜಮೀನನ್ನು ಮಂಜೂರು ಮಾಡಿ ಕೊಡುವಂತೆ” ಒತ್ತಾಯಿಸಿದರು.

“ನಮ್ಮ ಅರ್ಜಿಯನ್ನು ಸಹಾನುಭೂತಿಯಿಂದ ಪರಿಶೀಲಿಸಿ, ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಒಂದು ವೇಳೆ
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಭವನಕ್ಕಾಗಿ ಮಂಜೂರಿಯಾದ 0.06 ಗುಂಟೆ ಜಮೀನಿನಲ್ಲಿ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಅವಕಾಶ ನೀಡಿದಲ್ಲಿ ಯಾದಗಿರಿ ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲೆಯಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು” ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವೀರಣ್ಣ ದೊಡ್ಡಮನಿ, ಅಮರೇಶ್ ಪಾಟೀಲ್, ನರಸಿಂಹ ಸ್ವಾಮಿ, ಮರೆಪ್ಪ ಚಟ್ಟೇರಕರ್, ಸೈದಪ್ಪ ಕೋಲುರ್ ಇನ್ನಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಭಾರತದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ; ಮಾವಳ್ಳಿ ಶಂಕರ್

ಚಿಕ್ಕಮಗಳೂರಿನ ಮಹಾರಾಜ ಗ್ರ್ಯಾಂಡ್ ಹೋಟೆಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ...

ಹಾಸನ | ಪ್ರತಿಭಟನೆ ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮ ಖಂಡಿಸಿ ಜನಪರ ಒಕ್ಕೂಟ ಪ್ರತಿಭಟನೆ 

ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಖಂಡಿಸಿ ಹಾಸನದ ಹೇಮಾವತಿ ಪ್ರತಿಮೆಯ...

ಚಿಕ್ಕಮಗಳೂರು | SIR ವಿರೋಧ: ಫಾರಂ – 7ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚಿಸಲಾಗಿದೆ; ಎದ್ದೇಳು ಕರ್ನಾಟಕ 

SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7...

ಗದಗ | ಮಾಜಿ ಗ್ರಾ. ಪಂ ಸದಸ್ಯನ ಬರ್ಬರ ಹತ್ಯೆ

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ...