ಮುಖ್ಯಮಂತ್ರಿಗಳು ಕೊಟ್ಟ 10 ಗ್ಯಾರಂಟಿ ಭರವಸೆಯ ಮಾತನ್ನು ಉಳಿಸಿಕೊಳ್ಳಬೇಕು, ನಿವೃತ್ತಿ ಆಶಾಗಳಿಗೆ 5 ಲಕ್ಷ ಪರಿಹಾರ ನೀಡಬೇಕೆಂದು ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿಯು ನಗರದಲ್ಲಿ ಜೋರಾಗಿ ಸುರಿದ ಮಳೆಯ ನಡುವೆಯೂ ಸಹ ಧರಣಿ ಮುಂದುವರೆದಿದೆ.
‘ರಾತ್ರಿಯೂ ಸಹ ಧರಣಾ ಸ್ಥಳದಲ್ಲೇ ಮಲಗಿದ್ದ ಆಶಾ ಕಾರ್ಯಕರ್ತೆಯರು ಮಧ್ಯಾಹ್ನ ಸುರಿದ ಮಳೆಯನ್ನು ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಚಿಕ್ಕ ಚಿಕ್ಕ ಮಕ್ಕಳನ್ನು ಕೊಂಕಳಲ್ಲಿ ಎತ್ತಿಕೊಂಡು ಮಳೆಯಲ್ಲೇ ನಿಂತಿದ್ದರು. ಇಡೀ ಪ್ರತಿಭಟನಾ ಸ್ಥಳದಲ್ಲಿ ಮಳೆ ನೀರು ಹರಿದಾಡಿದವು. ಸುಮಾರು ಒಂದು ಗಂಟೆಗೂ ಅಧಿಕ ಸುರಿದ ಮಳೆಯಲ್ಲೇ ಹೋರಾಟ ಮುಂದುವರೆಸಿದರು.
ತಾವೇ ಸಿದ್ಧಪಡಿಸಿದ್ದ ಅಡುಗೆಯನ್ನು ಮಳೆಯಲ್ಲಿಯೇ ನಿಂತು ಊಟ ಮಾಡುತ್ತಿರುವುದು ಕಂಡುಬಂತು.

‘ಮಳೆ ಸ್ವಲ್ಪ ಕಡಿಮೆ ಆದ ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೇಡಿಕೆಗಳ ಮನವಿ ಸ್ವೀಕರಿಸಿ, ಮುಖ್ಯಮಂತ್ರಿಗಳಿಗೆ ಮನವಿ ರವಾನಿಸುಲಾಗುವುದೆಂದು’ ತಿಳಿಸಿದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಹೆಣ ಹೂಳಲು ಗ್ರಾಮ ಪಂಚಾಯ್ತಿಯವರು ಹೇಳಿಲ್ಲ, ದೇವಸ್ಥಾನದ ಮಾಹಿತಿ ಕೇಂದ್ರದಿಂದಲೇ ಸೂಚನೆ: ಸಾಕ್ಷಿ ದೂರುದಾರ
ಎರಡನೇ ದಿನದ ಧರಣಿಯಲ್ಲಿ ಡಿ ಉಮಾದೇವಿ, ರಾಮಲಿಂಗಪ ಬಿ.ಎನ್, ಮಹಾದೇವಿ, ಶ್ರೀದೇವಿ, ಇಂದ್ರಮ್ಮ, ರಸೀದಾ, ಲಲಿತಾ, ರಾಚಮ್ಮ, ಸತ್ಯಾದೇವಿ, ಸೂಗಮ್ಮ, ಕಾಮಾಕ್ಷಿ, ಸರೋಜಾ, ಮಲ್ಲಮ್ಮ, ಅನಿತಾ, ಪದ್ಮಾ, ಜಯಶ್ರೀ, ಕೃಪಾ, ಶರಬಮ್ಮ, ಸುನೀತಾ, ಬೇಬಿ, ರೇಣುಕಾ, ಪುಷ್ಪಲಾತ ಸೇರಿದಂತೆ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.