ಹೆಣ್ಣು ಮಕ್ಕಳು ನಾಲ್ಕು ಕೋಣೆಯೊಳಗೆ ಇರುವುದಲ್ಲ. ಅವರ ಜೀವನೋಪಾಯಕ್ಕಾಗಿ ಕೌಶಲ್ಯಗಳ ತರಬೇತಿಗಳನ್ನು ಪಡೆದುಕೊಳ್ಳುವುದು ತುಂಬಾ ಅವಶ್ಯಕ ಎಂದು ಮಲ್ಲಣ್ಣ ಹೇಳಿದರು.
ಯಾದಗಿರಿ ಜಿಲ್ಲೆ ಶಹಾಪುರದ ವೈಷ್ಣವಿ ಹೋಟೆಲ್ ಸಭಾಂಗಣದಲ್ಲಿ ಇಎಸ್‌ಎಎಫ್ ಫೌಂಡೇಶನ್ ಹಾಗೂ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬ್ಯೂಟಿಷಿಯನ್ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಭೀಮನಗೌಡ ಬಿರಾದರ್ ಅಸಿಸ್ಟೆಂಟ್ ಡೈರೆಕ್ಟರ್ ತಾಲೂಕ ಪಂಚಾಯ, ಮಲ್ಲಣ್ಣ ದೇಸಾಯಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶಹಾಪುರ, ಅನಿಲ್ ತೇಜಪ್ಪ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆ ವ್ಯವಸ್ಥಾಪಕರು ಕಾರ್ಯಕ್ರಮವನ್ನು ಸಸಿಗೆ ನೀರು ಉಣ್ಣಿಸುವ ಮುಖಾಂತರ ಉದ್ಘಾಟಿಸಿದರು.
“ಕುಟುಂಬದಲ್ಲಿ ಅವರು ತಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿಕೊಳ್ಳಬೇಕು. ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆ ನೀಡಿರುವ ಒಂದು ಅವಕಾಶವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು. ಜತೆಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನೂ ಕೂಡ ಪಡೆದುಕೊಳ್ಳಬೇಕು” ಎಂದು ತಿಳಿಸಿದರು.
ಅನಿಲ್ ತೇಜಪ್ಪ ಮಾತನಾಡಿ, “ಈ ತರಬೇತಿ ಕಾರ್ಯಗಾರದಲ್ಲಿ ತಪ್ಪದೇ ಎಲ್ಲರೂ ಬಂದು ತರಬೇತಿ ತೆಗೆದುಕೊಳ್ಳಬೇಕು. ತಮ್ಮ ಕೌಶಲ್ಯವನ್ನು ಅಭಿವೃದ್ಧಿಗೊಳಿಸಿಕೊಳ್ಳುವಲ್ಲಿ ತುಂಬಾ ಉಪಯೋಗವಾಗಲಿದ್ದು, ಈ ತರಬೇತಿಯು ಐದು ದಿನಗಳವರೆಗೆ ಇರುತ್ತದೆ. ಮುಗಿದ ನಂತರ ಪ್ರಮಾಣ ಪತ್ರಗಳನ್ನು ನೀಡಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ
ಈ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಕಿಶೋರಿಯರು ಸೇರಿದಂತೆ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ಸಿಬ್ಬಂದಿ ವರ್ಗದವರು ಇದ್ದರು.
ವರದಿ: ಮೋಹನ ಹೊಸಮನಿ