ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ ಪರಿಹಾರ ನೀಡಬೇಕು ಮತ್ತು ಹುಣಸಗಿ ತಾಲೂಕಿನ ಎಲ್ಲಾ ರೈತರಿಗೆ ಸಮಪರ್ಕವಾಗಿ ರಸಗೊಬ್ಬರ ವಿತರಣೆ ಮಾಡುವಂತೆ ರೈತ ಸಂಘಗಳ ಸಾಮೂಹಿಕ ಸಂಘಟನೆಗಳಿಂದ ಆಗ್ರಹಿಸಿದರು.
ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಯಾದಗಿರಿ ಮತ್ತು ಸಾಮೂಹಿಕ ಸಂಘಟನೆಗಳು ನೇತೃತ್ವದಲ್ಲಿ ಹುಣಸಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಹಣಮಂತ್ರಾಯ ಚಂದಲಾಪೂರ್ ಮಾತನಾಡಿ, ‘ಈ ವರ್ಷ ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಬಂದಿರುವುದರಿಂದ ಜಿಲ್ಲೆಯಾದ್ಯಂತ ಎಲ್ಲಾ ರೈತರು ಬಿತ್ತನೆ ಮಾಡಿದ್ದರು. ಈಗ ಬಿತ್ತಿರುವುದಕ್ಕಿಂತ ಬೆಳೆಗಳು ಮಳೆಯಾಶ್ರಿತ ಬೆಳೆಗಳು ಮತ್ತು ನೀರಾವರಿಯ ಇಲ್ಲದ ಕೊನೆಯ ಭಾಗದ ರೈತರು ಬೆಳೆಗಳಾದ ಶೇಂಗಾ ಹತ್ತಿ, ಸಜ್ಜೆ, ತೊಗರಿ ಮುಂತಾದ ಬೆಳೆಗಳು ರೈತರು ಬೆಳೆದಿರುತ್ತಾರೆ. ಆದರೆ ಇದಕ್ಕೆಲ್ಲಾ ಒಂದು ಸಲ ಬೆಳೆಯಬೇಕಾದರೆ ಮೂರು ಸಲ ಗೊಬ್ಬರ ಕೀಟನಾಶಕ ಸಿಂಪಡಿಸಬೇಕುʼ ಎಂದರು.
ʼರೈತರು ಸಾಲ ಸೂಲ ಮಾಡಿ ಬಿತ್ತನೆಗೆ ಸಾಕಷ್ಟು ಖರ್ಚು ಮಾಡುತ್ತಾರೆ. ಕನಿಷ್ಠ ಒಂದು ಎಕರೆ ಬೆಳೆಯನ್ನು ಬೆಳೆಯಬೇಕಾದರೆ 30 ರಿಂದ 40 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆಯನ್ನು ಬೆಳೆಯುತ್ತಾರೆ. ಆದರೆ ಈ ವರ್ಷದಲ್ಲಿ ಸರ್ಕಾರ ರಸಗೊಬ್ಬರದ ಕೊರತೆ ಮಾಡಿ ರೈತರ ಗಾಯದ ಮೇಲೆ ಬರಿ ಎಳೆದಂತಾಗಿದೆ’ ಎಂದು ತಮ್ಮ ಅಳಲನ್ನು ತೊಡಗಿಕೊಂಡರು
‘ರೈತರು ಒಂದಲ್ಲಾ ಒಂದು ಸಂಕಷ್ಟಕ್ಕೀಡಾಗುತ್ತಿದ್ದಾನೆ. ರೈತರು ಬೆಳೆದಿರುವ ಬೆಳೆ ಸೂಕ್ತ ದರ ಇರುವುದಿಲ್ಲ. ಸರಿಯಾಗಿ ಮಳೆ ಬಂದು ಬೆಳೆ ಬೆಳೆದರೆ ಗೊಬ್ಬರವಿಲ್ಲ. ರೈತರ ಜೊತೆಯಲ್ಲಿ ಚೆಲ್ಲಾಟವಾಡುವ ಸರ್ಕಾರಗಳು ನಮಗೇಕೆ ಬೇಕು, ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ರೈತರ ಗೋಳು ಕೇಳುವುದಿಲ್ಲ. ರಸಗೊಬ್ಬರ ಸಮಸ್ಯೆ ಬಗೆಹರಿಸಲು ಆಗಿಲ್ಲ. ತಿಂಗಳಾದರೂ ರೈತರಿಗೆ ಯೂರಿಯಾ ಗೊಬ್ಬರ ಸಿಗದೇ ಪರದಾಡುತ್ತಿದ್ದಾರೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ
ಈ ಸಂದರ್ಭದಲ್ಲಿ ರೈತ ಮುಖಂಡರಾದ ಗೆದ್ದೆಪ್ಪ ನಾಗಬೇವಿನಾಳ, ಸಾಹೇಬಗೌಡ ಮದಲಿಂಗನಾಳ, ಹನುಮಗೌಡ ನಾರಾಯಣಪುರ, ನಿಂಗನಗೌಡ ಗುಳಬಾಳ, ವೆಂಕಟೇಶಗೌಡ ಕುಪಗಲ್, ತಿರುಪತಿ ಕುಪಗಲ್, ತಿಪ್ಪಣ್ಣ ಜಂಪಾ, ಮೌನೇಶ ಅರಳಹಳ್ಳಿ, ಗುಂಡುರಾವ, ಇನ್ನಿತರರು ಉಪಸ್ಥಿತರಿದ್ದರು.