ಯಾದಗಿರಿ | ಸರ್ವೆ ನಂ. 7/3 ಭೂಮಿ ಮಂಜೂರಾತಿಗಾಗಿ ದಸಂಸ ಪ್ರತಿಭಟನೆ

Date:

Advertisements

ಸುರಪುರ ಪಟ್ಟಣದ ಸರ್ವೆ ನಂ. 7/3 ರಲ್ಲಿ 43 ವರ್ಷಗಳಿಂದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಭೂಮಿ ಮಂಜೂರಾತಿಗಾಗಿ ಆಗ್ರಹಿಸಿ ಮತ್ತು ಇತರ ನಾನಾ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಭೀಮವಾದ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಶಾಖೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಡಾ. ಮಲ್ಲಿಕಾರ್ಜುನ ಅನಸೂಗೂರು, “ದೇಶದ ಶೋಷಿತ ವರ್ಗದ ಬದುಕಿನ ದಲಿತ ಸೂರ್ಯನಾಗಿ ಉದಯಿಸಿ ಸಾವಿರಾರು ವರ್ಷಗಳಿಂದ ಗುಲಾಮಗಿರಿಯಲ್ಲಿ ಬದುಕುತ್ತಿದ್ದ ನನ್ನಂತವರನ್ನು ಸಂವಿಧಾನ ಬರೆಯುವ ಮೂಲಕ ಬಂಧನದಿಂದ ಬಿಡುಗಡೆಗೊಳಿಸಿದ ಡಾ. ಬಾಬಾ ಸಾಹೇಬ ಅಂಬೇಡ್ಕರವರನ್ನು ಇಡಿ ವಿಶ್ವವೇ ಸ್ಮರಿಸುತ್ತಿದೆ. ಅದರಂತೆ ಸುರಪುರ ನಗರದ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಹೆಚ್ಚಿನ ಅಭಿವೃದ್ಧಿಗಾಗಿ ಮತ್ತು ದಲಿತರ ಉದ್ದಾರಕ್ಕಾಗಿ ಅವಶ್ಯಕತೆ ಇರುವ ಸರ್ಕಾರಿ ಭೂಮಿ ಮಂಜೂರು ಮಾಡಬೇಕು. ಕಳೆದ ಆಗಸ್ಟ್ 20 ರಿಂದ ಯಾದಗಿರಿ ಜಿಲ್ಲಾಡಳಿತ ಮತ್ತು ಸುರಪುರ ತಾಲೂಕ ಆಡಳಿತವನ್ನು ಒತ್ತಾಯಿಸಿ ನಿರಂತರ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡು ಇಲ್ಲಿಯವರೆಗೆ 22 ದಿನಗಳು ಕಳೆದಿವೆ. ಆದರೆ ಜಿಲ್ಲಾಡಳಿತ ಈ ಹೋರಾಟದ ಬಗ್ಗೆ ಎಚ್ಚೆತ್ತುಕೊಂಡು ಬಗೆಹರಿಸುವಲ್ಲಿ ವಿಫಲವಾಗಿದೆ. ಈಗಲಾದರೂ ನಮ್ಮ ಬೇಡಿಕೆಯನ್ನು ಈಡೇರಿಸಬೇಕು” ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶರಣಪ್ಪ ಚತುರ್ವೇದಿ, ಶಿವಶಂಕರ ಹೆಚ್ ಹೊಸಮನಿ, ಮಲ್ಲಪ್ಪ ಲಂಡನಕರ್, ವೆಂಕಟೇಶ ಕಟ್ಟಿಮನಿ, ಮಲ್ಲಿಕಾರ್ಜುನ ತಳವಾರಗೇರಾ, ಸಿದ್ದರಾಮ ನಾಯ್ಕಲ್, ಹಣಮಂತ್ರಾಯ ಬಿ ವಡಗೇರಾ, ಮಲ್ಲಿಕಾರ್ಜುನ ಜಾಲಿಬೆಂಚಿ, ಹಣಮಂತ ತೇಲ್ಕರ್, ಮಲ್ಲಿಕಾರ್ಜುನ ಮುಷ್ಠಳ್ಳಿ, ಪರಶುರಾಮ ಮದರಕಲ್, ರಾಜು ಕುಮಾರಿ, ಸೈಯ್ಯದ, ಬಸವರಾಜ ಬಡಿಗೇರ, ಪುರುಷೋತ್ತಮ ಬಬಲಾದಿ, ಶರಣಪ್ಪ ದೊಡ್ಡಮನಿ, ಮೌಲಾಲ್ ಅಲಿ, ರಘುನಂದನ್ ತೇಲ್ಕರ್, ಭೀಮರಾಯ ಮಾಲಗತ್ತಿ, ಶೇಖಪ್ಪ ಹಾಲಭಾವಿ, ಚಂದ್ರಶೇಖರ ಇನ್ನಿತರರು ಇದ್ದರು.

ಇದನ್ನೂ ಓದಿ: ಯಾದಗಿರಿ | ಸಾಲಬಾಧೆ : ರೈತ ಆತ್ಮಹತ್ಯೆ

ಹಕ್ಕೊತ್ತಾಯಗಳು :

1) ಸುರಪುರ ನಗರದ ಸರ್ವೆ ನಂ. 71 ಸರ್ಕಾರಿ ಖಾರೀಜ್ ಖಾತಾ ಭೂಮಿಯನ್ನು ಸರ್ಕಾರದಿಂದ ಸರ್ವೆ ಮಾಡಿಸಿ ವರದಿಯನ್ನು ಬಹಿರಂಗಗೊಳಿಸಿ ಒತ್ತುವರಿಯಾಗಿರುವ 2 ಎಕರೆ 26 ಗುಂಟೆ ಜಾಗವನ್ನು ಮಾ ಬಿ.ಆರ್. ಅಂಬೇಡ್ಕ‌ರ್ ರವರ ವೃತ್ತದ ಅಭಿವೃದ್ಧಿಗಾಗಿ ಮಂಜೂರು ಮಾಡುವುದು.
2) ಪರಿಶಿಷ್ಟ ಜಾತಿಯ ಅಲೆಮಾರಿ ಜನಾಂಗದವರಿಗೆ ಸರ್ಕಾರ 1% ಮೀಸಲಾತಿಯನ್ನು ಕಲ್ಪಿಸಿಕೊಡಬೇಕು.
3) ವಡಗೇರು ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಜೆಜೆಎನ್ ಕಾಮಗಾರಿ ಕಳಪೆ ಕಾಮಗಾರಿಯಾಗಿದ್ದು ಈಗಾಗಲೇ ಮೂರು ಜನ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದ್ದು ಅವರನ್ನು ಸೇವೆಯಿಂದ ವಜಾಗೊಳಿಸಿ ಬಂಧಿಸಬೇಕು.
4) ಹುಣಸಗಿ ತಾಲೂಕಿನ ಕೂಡಲಗಿ ಗ್ರಾಮದಲ್ಲಿ ಜೆಜೆಎಮ್ ಕಾಮಗಾರಿ ಸಂಪೂರ್ಣ ಬೊಗಸ್ ಆಗಿದ್ದು, ಎ.ಇ.ಇ. ಮತ್ತು ಜೆ.ಇ. ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಸೇವೆಯಿಂದ ವಜಾಗೊಳಿಸಬೇಕು.
5) ಸುರಪುರ ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ ದಲಿತರ ಓಣಿಯಲ್ಲಿ ವಿದ್ಯುತ್ ಕಂಭಗಳಿಗೆ ಹಾಕಿರುವ ವಿದ್ಯುತ್ ತಂತಿ ತುಂಬಾ ಹಳೆಯದಾಗಿದ್ದು, ಮಳೆ ಗಾಳಿಗೆ, ಮಂಗಗಳು ಕುಳಿತುಕೊಳ್ಳುವಾಗ ಹಗಲಾಡಿ ವೈರ್‌ಗಳು ಹರಿದ್ದು ಬಿದ್ದು ಸಾರ್ವಜನಿಕರ ಜೀವಕ್ಕೆ ಅಪಾಯ ಮಾಡುತ್ತಿದ್ದು ತಕ್ಷಣವೇ ಅವುಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ವೈರಗಳನ್ನು ಹಾಕಬೇಕು.
6) ಯಾದಗಿರಿ ಜಿಲ್ಲೆಯಾದ್ಯಂತ ಇರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸರ್ಕಾರದಿಂದ ಬಂದಿರುವ ಸಬ್ಸಿಡಿ ಹಣವನ್ನು ಬ್ಯಾಂಕಿನ ಗ್ರಾಹಕರಿಗೆ ಕೊಡುವದಕ್ಕೆ ಇಲ್ಲ ಸಲ್ಲದ ನೆಪವೊಡ್ಡಿ ವರ್ಷವಾದರು ಕೊಡದೆ ತೊಂದರೆ ಕೊಡುತ್ತಿದ್ದಾರೆ.
7) ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ವಡ್ಡರ ಓಣಿಯಲ್ಲಿ ಸುಮಾರು ಎರಡು ನೂರು ಕುಟುಂಬಗಳಿಗೆ ವಾರಸುದಾರರು ಇಲ್ಲದೆ ಹಾಳು ಬಿದ್ದ ಚಿಕ್ಕ ಮನೆಯನ್ನು ತೆರವೊಗಳಿಸಿ ರಸ್ತೆ ನಿರ್ಮಿಸಿ ಕೊಡುವ ಬಗ್ಗೆ.
8) ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಭೂಸೇನಾ ನಿಗಮದಲ್ಲಿ ಸಿ.ಸಿ.ರೋಡ ಮತ್ತು ಶಾಲೆ ಅರ್ಧಕ್ಕೆ ನಿಲ್ಲಿಸಿದ್ದು, ಅದು ಪೂರ್ಣಗೊಳಿಸಬೇಕು. ಮತ್ತು ಹೊನ್ನಪ್ಪ ಪೂಜಾರಿ ಇವರ ಮೇಲೆ ಕ್ರಮ ಜರುಗಿಸಬೇಕು.
9) ತಡಿಬಿಡಿ ಗ್ರಾಮ ಪಂಚಾಯತಿಯಲ್ಲಿ ಇಬ್ಬರು ಪಿ.ಡಿ.ಓ.ಗಳು ಇದ್ದು ಜನ ಸಾಮಾನ್ಯರು ಕೆಲಸ ಮಾಡದೆ ನನ್ನದು ಚಾರ್ಜ ಇಲ್ಲಾ, ನಿನ್ನದು ಚಾರ್ಜ ಇಲ್ಲವೆಂದು ಕುಂಟು ನೆಪ ಹೇಳುತ್ತಿದ್ದಾರೆ. ಸದರಿ ಪಿ.ಡಿ.ಒ.ರವರ ಮೇಲೆ ಕ್ರಮ ಜರುಗಿಸುವ ಕುರಿತು.
10) ಸುರಪುರ ತಾಲೂಕಿನ ವಾಗಣಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಳವಾರಗೇರಾ ಗ್ರಾಮದ ಪಂಪ್ ಆಪರೇಟರ ಅವಧಿ ಮುಗಿದು 7 ತಿಂಗಳು ಕಳೆದಿದೆ. ಇನ್ನು ಪಂಪ್ ಆಪರೇಟರನ್ನು ನೇಮಕ ಮಾಡಿಕೊಂಡಿರುವುದಿಲ್ಲ. ಸದರಿ ಖಾಲಿ ಹುದ್ದೆಗೆ ಆದಷ್ಟು ಬೇಗನೆ ನೇಮಕ ಮಾಡಿಕೊಳ್ಳಬೇಕು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಡುಕೋಣ ದಾಳಿ ವ್ಯಕ್ತಿ ಗಂಭೀರ

ಕಾಡುಕೋಣ ದಾಳಿಯಿಂದ ವ್ಯಕ್ತಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೂರು...

ರಾಯಚೂರು | ರಕ್ತಹೀನತೆ, ತಾಯಿ ಶಿಶು ಮರಣ ನಿಯಂತ್ರಣಕ್ಕೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ...

ಚಿಕ್ಕಮಗಳೂರು l ಗುಡ್ಡಹಳ್ಳದಲ್ಲಿ ಪುಂಡಾನೆ ಸೆರೆ; ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ

ಸುಮಾರು ಒಂದುವರೆ ವರ್ಷಗಳಿಂದ ಬೀಡು ಬಿಟ್ಟಿದ್ದ, ಪುಂಡಾನೆ ಕೊನೆಗೂ ಸೆರೆಯಾಗಿರುವ ಘಟನೆ,...

ಚಿಕ್ಕಮಗಳೂರು l 1% ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು; ಎದ್ದೇಳು ಕರ್ನಾಟಕ

ಬದುಕಿನ್ನುದ್ದಕ್ಕೂ ಅಲೆಯುತ್ತಲೇ ಬದುಕಿದ ಅಲೆಮಾರಿ ಬಂಧುಗಳು ಇಂದು ನ್ಯಾಯ ಅರೆಸುತ್ತಾ ದೆಹಲಿಗೆ...

Download Eedina App Android / iOS

X