ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಹಾಲಬಾವಿ ಗ್ರಾಮದಲ್ಲಿನ ಸರ್ವೆ ನಂ. 58ರಲ್ಲಿ 2 ಎಕರೆ ಭೂಮಿಯನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ತಾಲೂಕು ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ತಾಲೂಕು ಅಧ್ಯಕ್ಷರ ಜಯರೆಡ್ಡಿ ಹೊಸಮನಿ ಮಾತನಾಡಿ, “ಸದರಿ ಶಹಾಪುರ ತಾಲೂಕಿನ ಹಾಲಬಾವಿ ಗ್ರಾಮದಲ್ಲಿನ ದಲಿತರ ಸಾಂಸ್ಕೃತಿಕ ಚಟುವಟಿಕೆಗಳು ಕಾರ್ಯಕ್ರಮ ಮಾಡಲು ಯಾವುದೇ ಸ್ಥಳ ಇರುವುದಿಲ್ಲ. ಹಾಗಾಗಿ ಹಾಲಬಾವಿ ಗ್ರಾಮದ ದಲಿತರು ಹಾಗೂ ಡಿಎಸ್‌ಎಸ್ ಸಂಘದಿಂದ ಮನವಿ ಮಾಡಲಾಗಿತ್ತು” ಎಂದು ಹೇಳಿದರು.
“ಉಲ್ಲೇಖ 1ರ ಮೂಲಕ ಶಹಾಪುರ ತಹಶೀಲ್ದಾರರು ಕಂದಾಯ ನೀರಿಕ್ಷಕರು ಹಾಗೂ ಭೂಮಾಪಕರ ವರದಿಯೊಂದಿಗೆ ಮಂಜೂರಾತಿಗಾಗಿ 2024ರ ಫೆಬ್ರವರಿ 04ರಂದು ಸಹಾಯಕ ಆಯಕ್ತರಿಗೆ ಪತ್ರ ಬರೆದಿದ್ದಾರೆ. ಸುಮಾರು 6ರಿಂದ 7 ತಿಂಗಳು ಕಳೆದರೂ ಕೂಡಾ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಕೂಡಲೇ ಡಾ. ಬಿ ಆರ್ ಅಂಬೇಡ್ಕರ್ ಭವನ ನಿರ್ಮಿಸಲು 2 ಎಕರೆ ಜಮೀನು ಮಂಜೂರು ಮಾಡಬೇಕು” ಎಂದು ಮತ್ತೊಮ್ಮೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈತರು ಬೆಳೆದ ಬೆಳೆಗಳ ನಾಶ: ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ರೈತರ ಒತ್ತಾಯ
ಹಣಮಂತ ಶಾರದಹಳ್ಳಿ, ಮಲ್ಲಿಕಾರ್ಜುನ ಹಾಲಬಾವಿ, ಜಯರೆಡ್ಡಿ, ಮರೆಪ್ಪ ಕನ್ಯಕೊಳ್ಳೂರು, ಮರೆಪ್ಪ ಬೇವಿನಹಳ್ಳಿ, ಭೀಮಶಂಕರ ಸಲಾದಪೂರ, ದೇವಿಂದ್ರ ಡಿಗ್ಗಿ ಸೇರಿದಂತೆ ಇತರರು ಇದ್ದರು.