ಸಾಲದ ಹೊರೆ ತಾಳಲಾರದೆ ವಿಷ ಸೇವಿಸಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರಪುರ ತಾಲೂಕಿನ ವಾರಿ ಸಿದ್ದಾಪುರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಭೀಮಣ್ಣಾ ಕೊಲ್ಲೂರ್ (55) ಆತ್ಮಹತ್ಯೆಗೆ ಶರಣಾದ ರೈತ. ಮೃತರಿಗೆ 26 ಗುಂಟೆ ಜಮೀನಿತ್ತು. ₹8 ರಿಂದ 10 ಲಕ್ಷ ಸಾಲ ಕೈಗಡ ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಮೃತರಿಗೆ ಮೂವರು ಗಂಡು ಮಕ್ಕಳು, ಓರ್ವ ಮಗಳು ಇದ್ದಾರೆ.
ಸಾಲಗಾರರ ಕಾಟ ತಾಳಲಾರದೆ ಚಿಂತೆಗೀಡಾಗಿದ್ದರು, ಕುಟುಂಬಸ್ಥರು ಎಷ್ಟೇ ಧೈರ್ಯ ಹೇಳಿದರೂ ಕೇಳದ ರೈತ ತಮ್ಮ ಜಮೀನಿನಲ್ಲಿ ವಿಷ ಸೇವಿಸಿದರು. ವಿಷಯ ತಿಳಿದು ಸ್ಥಳೀಯರು ಸುರಪುರ ತಾಲೂಕು ಆಸ್ಪತ್ರೆಗೆ ಕರದೊಯ್ದುರು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ರೈತ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.