ನೀಲಿ ಧ್ವಜವನ್ನು ಕೆಳಗೆ ಇಳಿಸುವ ಮೂಲಕ ಧ್ವಜಕ್ಕೆ ಅವಮಾನಿಸಿರುವುದನ್ನು ಖಂಡಿಸಿ ಮತ್ತು ದಲಿತರ ಮೇಲೆ ಸುಳ್ಳು ಕೌಂಟರ್ ಕೇಸು ಮಾಡಿದ್ದಾರೆಂಬ ಹಿನ್ನೆಲೆಯಲ್ಲಿ ಸುರಪುರ ಇನ್ಸ್‌ಪೆಕ್ಟರ್ ಉಮೇಶ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ದಲಿತ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟ ಸುರಪುರ ಮತ್ತು ಸಮಸ್ತ ದಲಿತ ಸಮಾಜ ಸುರಪುರ ವತಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆಯ ಮೂಲಕ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಮಾರ್ಕೆಟ್ ಮಾರ್ಗವಾಗಿ ಸುರಪುರ ತಹಶೀಲ್ದಾರ್ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ವೃತ್ತದ ಸುತ್ತ ಇರುವ ಸರ್ವೆ ನಂ. 7/1 ರಲ್ಲಿ ಹೆಚ್.ಕೆ.ಇ. ಸೊಸೈಟಿಯವರು ಒತ್ತುವರಿ ಮಾಡಿದ ಸರ್ಕಾರಿ ಖಾರಿಜ್ ಖಾತಾ ಭೂಮಿಯನ್ನು ಸರ್ಕಾರದಿಂದ ಸರ್ವೆ ಮಾಡಿ ಒತ್ತುವರಿಯಾದ 2 ಎಕರೆ 26 ಗುಂಟೆ ಜಾಗದಲ್ಲಿ ಡಾ. ಅಂಬೇಡ್ಕರ್‌ರವರ ಹೆಸರಲ್ಲಿ ಉದ್ಯಾನವನ, ಸಾಂಸ್ಕೃತಿಕ ಭವನ, ಗ್ರಂಥಾಲಯ ನಿರ್ಮಾಣಕ್ಕಾಗಿ ಭೂಮಿ ಮಂಜೂರು ಮಾಡಲು ಒತ್ತಾಯಿಸಿದರು.
ಅಧಿಕಾರ ದುರುಪಯೋಗ ಮಾಡುತ್ತಿರುವ ಸುರಪುರ ಪೋಲಿಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಉಮೇಶ ನಾಯಕ್ ಇವರನ್ನು ಅಮಾನತು ಮಾಡಬೇಕು ಹಾಗೂ ದಲಿತರ ಮೇಲೆ ಸುಳ್ಳು ಕೌಂಟರ್ ಕೇಸ್ ದಾಖಲಿಸಿದ್ದನ್ನು ರದ್ದು ಪಡಿಸಬೇಕು. ಕೆಂಭಾವಿ ಮುಖ್ಯ ರಸ್ತೆಯ ಬದಿಯಲ್ಲಿ ಇರುವ [ದರ್ಗಾ ಮತ್ತು ಸಾರ್ವಜನಿಕ ಭಾವಿಯನ್ನು ಹೊರತುಪಡಿಸಿ] ಅನಧಿಕೃತ ಅಂಗಡಿ ಮುಗ್ಗಟ್ಟುಗಳನ್ನು ತೆರೆವುಗೊಳಿಸಬೇಕು ಎಂದು ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟ ಸುರಪುರ, ಮತ್ತು ಸಮಸ್ತ ದಲಿತ ಸಮಾಜದ ಮುಖಂಡರು ಒತ್ತಾಯಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, “ನೀಲಿ ಧ್ವಜವನ್ನು ಕೆಳಗೆ ಇಳಿಸುವ ಮೂಲಕ ಧ್ವಜಕ್ಕೆ ಅವಮಾನಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಧ್ವಜ ಇಳಿಸುವಾಗ ಸ್ಥಳದಲ್ಲಿಯೇ ಇದ್ದ ಪಿಐ ಉಮೇಶ್ ನಾಯಕ ಅವರನ್ನು ಅಮಾನತುಗೊಳಿಸಬೇಕು ಅಥವಾ ವರ್ಗಾವಣೆ ಮಾಡಬೇಕು. ನೀಲಿ ಧ್ವಜ ಹಾಕಿರುವ ಸ್ಥಳದ ಸರ್ವೇ ಮಾಡಿಸಿ 2 ಎಕರೆ 26 ಗುಂಟೆ ಭೂಮಿಯನ್ನು ಅಂಬೇಡ್ಕರ್ ಸಾಂಸ್ಕೃತಿ ಭವನ, ಗ್ರಂಥಾಲಯ ನಿರ್ಮಾಣಕ್ಕೆ ಮಂಜೂರು ಮಾಡಬೇಕು. ಬಸ್ ನಿಲ್ದಾಣದ ಮುಂಭಾಗದಲ್ಲಿನ ಮೈದಾನಕ್ಕೆ ಹೊಂದಿಕೊಂಡಿರುವ ಎಲ್ಲ ಅಂಗಡಿಗಳನ್ನು ತೆರವುಗೊಳಿಸಬೇಕು. ದಲಿತರ ಮೇಲೆ ದಾಖಲಿಸಿರುವ ಸುಳ್ಳು ಕೇಸು ಕೈಬಿಡಬೇಕು” ಎಂದು ಆಗ್ರಹಿಸಿದರು.
ಅಲ್ಲದೆ, ನಮ್ಮ ಹೋರಾಟ ಯಾವುದೇ ಜಾತಿಯ ವಿರುದ್ಧವಲ್ಲ. ಧ್ವಜ ಇಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮುಖಂಡರಾದ ನಿವೃತ್ತ ಪ್ರೊಫೆಸರ್ ಮಾನು ಗುರಿಕಾರ, ನಾಗಣ್ಣ ಕಲ್ಲದೇವನಹಳ್ಳಿ ಮಾನಪ್ಪ ಕಟ್ಟಿಮನಿ, ವೆಂಕಟೇಶ ಹೊಸ್ಮನಿ, ಭೀಮರಾಯ ಸಿಂದಗೇರಿ, ಚಂದ್ರಶೇಖರ ಜಡಿಮರಳ, ಆದಪ್ಪ ಹೊಸ್ಮನಿ, ರಾಹುಲ್ ಹುಲಿಮನಿ, ಮೂರ್ತಿ ಬೊಮ್ಮನಹಳ್ಳಿ ಶ್ರೀನಿವಾಸ ನಾಯಕ ದೊರೆ ಬೊಮ್ಮನಹಳ್ಳಿ, ಮಾಳಪ್ಪ ಕಿರದಳ್ಳಿ ನಿಂಗಣ್ಣ ಗೋನಾಲ, ಮಲ್ಲಿಕಾರ್ಜುನ ತಳ್ಳಳ್ಳಿ ಶಿವಲಿಂಗ ಹಸನಾಪುರ ಇತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ಗೋಪಾಲ ವಜ್ಜಲ್, ರಾಜು ಕಟ್ಟಿಮನಿ, ಶಿವಶಂಕರ ಹೊಸ್ಮನಿ, ಮಹಾದೇವ ಚಲವಾದಿ, ತಿಪ್ಪಣ್ಣ ಶೆಳ್ಳಗಿ, ಮಾನಪ್ಪ ಶೆಳ್ಳಗಿ, ಶರಣು ತಳವಾರಗೇರ, ಶರಣು ಚಂದ್ಲಾಪುರ, ಬಸವರಾಜ ದೊಡ್ಡನಿ, ಮಹೇಶ ಯಾದಗಿರಿ, ರವಿ ಬೊಮ್ಮನಹಳ್ಳಿ, ರಾಜು ದೊಡ್ಡನಿ, ವಿಶ್ವನಾಥ ಹೊಸ್ಮನಿ, ಮಲ್ಲು ಮುಷ್ಕಳ್ಳಿ, ಹಣಮಂತ ಭದ್ರಾವತಿ, ವೀರಭದ್ರ ತಳವಾರಗೇರ, ವೈಜನಾಥ ಹೊಸ್ಮನಿ, ರವಿ ಬೊಮ್ಮನಹಳ್ಳಿ, ಪರಶು ನಾಟೇಕಾರ, ಜೆಟ್ಟೆಪ್ಪ ನಾಗರಾಳ, ಶೇಖರ ಮಂಗಳೂರ, ಮಂಜುನಾಥ ಹೊಸ್ಮನಿ, ಪ್ರಭು ಕಟ್ಟಿಮನಿ, ಜೆಟ್ಟೆಪ್ಪ ಹಾದಿಮನಿ, ಹಣಮಂತ ಮಾನಸಗಲ್, ಹಣಮಂತ ರತ್ನಾಳ, ನಾಗೂ ಗೋಗಿಕೇರ, ಗೋಪಾಲ ಗೋಗಿಕೇರ, ಭೀಮಣ್ಣ ಅಡ್ಡೆಡಗಿ, ನಾಗರಾಜ ಓಕಳಿ, ಪ್ರಕಾಶ ಕೆಂಭಾವಿ, ಶಂಕರ ಗೋನಾಲ, ಶರಣಪ್ಪ ತೆಗ್ಗೆಳ್ಳಿ, ಚಿದಾನಂದ ಹೆಬ್ಬಾಳ, ಮಲ್ಲಿಕಾರ್ಜುನ ತಳವಾರಗೇರ, ಅಂಬ್ರೇಶ ದಿಗ್ಗಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
