‘ಮಹರ್ಷಿ ವಾಲ್ಮೀಕಿ ಆರ್ ಸಿ ನಾಯಕ ಜನಸೇವಾ ಶೈಕ್ಷಣಿಕ ಜನಸೇವಾ ಟ್ರಸ್ಟ್’ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸವ ಉದ್ದೇಶದಿಂದ ‘ಉಚಿತ ಬೇಸಿಗೆ ಶಿಬಿರ’ ಆರಂಭವಾಗಿದೆ.
ಯಾದಗಿರಿ ಜಿಲ್ಲೆಯ ನಗರದ ಬಸ್ ನಿಲ್ದಾಣದ ಹತ್ತಿರದ ಸ್ವಾಮಿ ಪರಾಂಕುಶ ಮಠದ ಆವರಣದಲ್ಲಿ ಉಚಿತ ಬೇಸಿಗೆ ತರಬೇತಿ ಶಿಬಿರವನ್ನು ಸುರಪುರ ಮತ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಈ ಸಂಸ್ಥೆಯವರು ಶಿಸ್ತು, ಪ್ರಾಮಾಣಿಕತೆಗೆ ಹೆಸರಾಗಿದ್ದು, ಉತ್ತಮವಾದ ಬೋಧಕ ಸಿಬ್ಬಂದಿಯನ್ನು ಈ ಟ್ರಸ್ಟ್‌ನಲ್ಲಿ ನೇಮಕ ಮಾಡಿಕೊಂಡಿದೆ. ಹಾಗಾಗಿ ಸುರಪುರದ ಮಕ್ಕಳು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು” ಎಂದು ತಿಳಿಸಿದರು.
ಟ್ರಸ್ಟ್‌ನ ಅಧ್ಯಕ್ಷ ಆರ್ ಸಿ ನಾಯಕ ಮಾತನಾಡಿ, “ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ತರಬೇತಿ ಶಿಬಿರ ಪ್ರಾರಂಭಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ಈ ಟ್ರಸ್ಟ್‌ನ ಬೋಧಕ ಸಿಬ್ಬಂದಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತರಬೇತಿ ನಡೆಸುವರು. ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವುದು ಈ ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನಿಂತಿದ್ದ ಲಾರಿಗೆ ಬಸ್ ಡಿಕ್ಕಿ; ಬೆಳ್ಳಂಬೆಳಗ್ಗೆಯೇ ಐವರ ದುರ್ಮರಣ
ಬಳಿಕ ರಾಜಾ ಮುಕುಂದ ನಾಯಕ ಸುರಪುರ ಕ್ರಿಯೇಶನ್ ಕ್ಲಬ್ ಅಧ್ಯಕ್ಷ ಮಾತನಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಗೌರವ ಅಧ್ಯಕ್ಷ ರಾಜಾ ಸುಭಾಶ್ಚಂದ್ರ ನಾಯಕ, ರಾಜಕೀಯ ಮುಖಂಡ ರಾಜಾ ಸುಶಾಂಕ ನಾಯಕ, ಮಲ್ಲಣ್ಣ ಸಾಹುಕಾರ, ಹುಲಗಪ್ಪ ಪೂಜಾರಿ, ಚವ್ಹಾಲಕ್ಷ್ಮೀ, ಗ್ರಾ.ಪಂ ಅಧ್ಯಕ್ಷ ತಿಮ್ಮಣ್ಣ ದೇವಿಕೇರಾ, ರಾಜಾ ದೇವರಾಜ ನಾಯಕ, ರಾಜಾ ಉಡಚಪ್ಪ ನಾಯಕ ಹಾಗೂ ಬೋಧಕ ಸಿಬ್ಬಂದಿ ವರ್ಗದವರಾದ ಸಾಯಬಣ್ಣ, ಸಹನಾ, ಭಾಗ್ಯಶ್ರೀ, ಸೌಮ್ಯ, ಆದರ್ಶ ಹಾಗೂ ಟ್ರಸ್ಟಿನ ಸದಸ್ಯರು ಇದ್ದರು.