ಯಾದಗಿರಿ | ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅರೆಬೆತ್ತಲೆ ಮೆರವಣಿಗೆ

Date:

Advertisements

ಸಾಂವಿಧಾನಿಕ ಸಂಸ್ಥೆಗಳಾದ ಇ.ಡಿ, ಐಟಿ, ಸಿಬಿಐ ಮತ್ತು ರಾಜಭವನಗಳನ್ನು ಕೇಂದ್ರ ಬಿಜೆಪಿ ಸರ್ಕಾರ ತಮ್ಮ ರಾಜಕೀಯ ಲಾಭಕ್ಕಾಗಿ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಯಾದಗಿರಿ ಜಿಲ್ಲೆಯ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅರೆಬೆತ್ತಲೆ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಶಿವಪುತ್ರ ಜಾವಳಿ ಮಾತನಾಡಿ, “ಕೇಂದ್ರ ಬಿಜೆಪಿ ಸರ್ಕಾರ ಕೇಂದ್ರಗಳಲ್ಲಿ ಅಧಿಕಾರಕ್ಕೆ ಬಂದ 10 ವರ್ಷಗಳಲ್ಲಿ ದೇಶದ ಅಖಂಡತೆಗೆ ಧಕ್ಕೆ ತಂದೊಡ್ಡಲು ಸಂವಿಧಾನ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಲಿದೆ. ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿಯೇತರರ ಸರ್ಕಾರಗಳು ಜನರ ಆಶೀರ್ವಾದದಿಂದ ಬಹುಸಂಖ್ಯಾತ ಆಯ್ಕೆ ಹೊಂದಿ ರಚನೆಗೊಂಡಿದ್ದ ಸರ್ಕಾರಗಳನ್ನು ಏನಾದರೂ ಮಾಡಿ ಅಸ್ಥಿರಗೊಳಿಸುವ ಹುನ್ನಾರ ಮಾಡುತ್ತಿದ್ದಾರೆ. ಬೇರೆ ಪಕ್ಷದಿಂದ ಆಯ್ಕೆಗೊಂಡಿರುವ ಶಾಸಕರನ್ನು ಪುಸಲಾಯಿಸಿ ಅವರ ಸ್ಥಾನಕ್ಕೆ ರಾಜಿನಾಮೆ ಕೊಡಿಸಿಯಾದರೂ ಇತರೆ ಸರ್ಕಾರಗಳನ್ನು ಉರುಳಿಸಲು ನಿಂತಿದ್ದಾರೆ” ಎಂದು ಟೀಕಿಸಿದರು.

“ಸಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಂಡು ತನ್ನ ವ್ಯಾಪ್ತಿಯಲ್ಲಿ ಬರುವ ಅಪರಾಧಗಳ ತನಿಖಾ ಸಂಸ್ಥೆಗಳನ್ನು ರಾಜಕೀಯಗೋಸ್ಕರ ಬಳಸಿಕೊಂಡಾದರೂ ಪಿತೂರಿ ನಡೆಸುತ್ತಿರುವ ಬಿಜೆಪಿ, ಬಹುಮತಗಳಿಂದ ಆಯ್ಕೆಯಾಗಿರುವ ಇತರೆ ಸರ್ಕಾರಗಳನ್ನು ಪತನಗೊಳಿಸಲು ಸಂಚುರೂಪಿಸಿ ಹಿಂಬಾಗಿಲುನಿಂದ ಅಧಿಕಾರದ ಗದ್ದುಗೆ ಏರುವ ಕೇಂದ್ರ ಬಿಜೆಪಿ ಸರ್ಕಾರದ ಹುನ್ನಾರವನ್ನು ಪ್ರಜಾಪ್ರಭುತ್ವವಾದಿಗಳು ಅರಿಯಬೇಕಾಗಿದೆ” ಎಂದರು.

Advertisements

“ಸಂವಿಧಾನ ಪ್ರಜಾಪ್ರಭುತ್ವ ವಿರೋಧಿಸಿ, ಮನುವಾದವನ್ನು ಪ್ರತಿಪಾದಿಸುವ ಕೇಂದ್ರ ಬಿಜೆಪಿ ಸರ್ಕಾರ ಚುನಾವಣಾ ಆಯೋಗಳಂತಹ ಮೂಲಕವೇ ಮೆಟ್ಟಿಹಾಕುವ ಬಾಯಿಮುಚ್ಚಿಸುವ ಫ್ಯೂಡಲ್ ರಾಜಕಾರಣದ ಮಾದರಿಯೊಂದು ದೇಶದಲ್ಲಿ ಈಗ ಚಾಲ್ತಿಯಲ್ಲಿದೆ. ಇದರ ಭಾಗವಾಗಿಯೇ ಸಿದ್ದರಾಮಯ್ಯನವರ ವಿರುದ್ಧ ಮುಡಾ ಪ್ರಕರಣ ಬಳಸಿಕೊಳ್ಳಲಾಗುತ್ತಿದೆ” ಎಂದು ಆರೋಪಿಸಿದರು.

“ಇಂತಹ ಫ್ಯೂಡಲ್ ರಾಜಕಾರಣದ ಆಂತರ್ಯದಲ್ಲಿ ಕೋಮುವಾದ, ಮನುಸಿದ್ಧಾಂತದಂತಹ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಿಸಕಾಡುಸುತ್ತಿದೆ. ಕೋಮುವಾದಕ್ಕೆ ಈ ರಾಜ್ಯದಲ್ಲಿ ರಾಜಕೀಯವಾಗಿ ದೊಡ್ಡ ತಡೆಗೋಡೆಯಂತಿರುವುದೇ ಸಿದ್ದರಾಮಯ್ಯ
ಕೇವಲ ಮುಡಾ ಪ್ರಕರಣ ಕೃತಕ ಕಾರಣಕ್ಕೆ ಹೆದರಿ ಸಿದ್ದರಾಮಯ್ಯ ಎಂಬ ಜನಪ್ರಿಯ ನಾಯಕ ಅಧಿಕಾರದಿಂದ ನಿರ್ಗಮಿಸುವುದೆಂದರೆ ಅದು ಈ ಸಮಾಜದ ಬಹುಜನರ ವಿಚಾರದಾರೆಯ ಸೋಲಾಗುತ್ತದೆ. ಆದರೆ ʼನೈತಿಕತೆʼಯೆಂಬ ಗೂಟಕ್ಕೆ ಕಟ್ಟಿ ಬಲಿಹಾಕುವ ರಾಜಕೀಯದ ಸಂಚಿಗೆ ಸಿದ್ದರಾಮಯ್ಯನವರು ಒಳಗಾಗದಂತೆ ಪ್ರಜಾಪ್ರಭುತ್ವವಾದಿಗಳು ನೋಡಿಕೊಳ್ಳಬೇಕಾಗಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಉಡುಪಿ | ಮಹಾಲಕ್ಷ್ಮೀ ಬ್ಯಾಂಕ್‌ ಅವ್ಯವಹಾರ: ಸರ್ಕಾರದ ಮಧ್ಯಸ್ಥಿಕೆಗೆ ಬಿ ಕೆ ಹರಿಪ್ರಸಾದ್‌ ಆಗ್ರಹ

ಚಂದಪ್ಪ ಮುನಿಯೋಪ್ಪನವರ್, ಶಿವಲಿಂಗ ಹಸನಾಪೂರ, ಭೀಮಣ್ಣ ನಾಟೇಕರ, ಹುರಸಗುಂಡಗಿ, ಬಲಭೀಮ ಬೇವಿನಹಳ್ಳಿ, ವಾಸು ಕೋಗಿಲರ್, ಸಂದೀಪ್ ಹುರಸಗುಂಡಗಿ, ಸುಭಾಷ ಹುರಸಗುಂಡಗಿ, ತಾಯಪ್ಪ ಭಂಡಾರಿ, ಗಂಗರಾಮ ಬಬಲಾದ, ಶರಣಪ್ಪ ದಾಸನಕೇರಿ, ಶಿವಕುಮಾರ, ಗಿರೆಪ್ಪನೊರ, ಮರೆಪ್ಪ ಗಿರೆಪ್ಪನೊರ, ದೊಡ್ಡಬಸಪ್ಪ ಗಿರಿಪ್ಪನೊವರ, ಮೋನೇಶ ಮುನಿಯಪ್ಪನೊರ, ಈಶಪ್ಪ ತುಮಕೂರ, ಭೀಮರಾಯ ಬೆಳಿಗೇರಿ, ದೇವಪ್ಪ ಜೋಗ, ಮರೆಪ್ಪ ಕ್ರಾಂತಿ, ಸಂತೋಷ ಗುಂಡಳ್ಳಿ, ಶರಬಣ್ಣ ರಸ್ತಾಪೂರ, ಶ್ರೀಮಂತ ಸಿಂಗನಹಳ್ಳಿ, ನಾಗರಾಜ ಕೊಡಮನಹಳ್ಳಿ, ಶರಣಪ್ಪ ಕೋಟಿ, ತಿಪ್ಪಣ್ಣ ಶೆಳ್ಳಗಿ, ಶೇಖರ ಮಂಗಳೂರು, ವೆಂಕಟೇಶ ದೇವಾಪೂರ, ರಾಜು ಬಡಿಗೇರ, ಚನ್ನಪ್ಪ ದೇವಾಪೂರ, ಖಾಜಾ ಅಜಮೀರ, ಎಂ ಪಟೇಲ ಅಲ್ಪ ಸಂಖ್ಯಾತ, ರಂಗಸ್ವಾಮಿ ದಾಸರಿ ಕೊಂಕಲ್, ಪುರಷೋತ್ತಮ ಬಬಲಾದ, ಬಾಲರಾಜ ಖಾನಪೂರ, ದೊಡಪ್ಪ ಕಾಡಂಗೇರಾ, ಚನ್ನಬಸ್ಸು ಗುರುಸುಣಗಿ, ಹಣಮಂತ ಗುರುಸುಣಗಿ, ಬಸಪ್ಪ ಕುರಕುಂದಿ, ಮಲ್ಲು ಕೋಳಿ, ಹಣಮಂತ ರಾಯಣ್ಣ ತಾ.ಸಂ.ಸಂಚಾಲಕರು, ಶರಣಪ್ಪ ಮಳ್ಳಳ್ಳಿ ತಾ. ಖಜಾಂಚಿ, ಬಸಲಿಂಗಪ್ಪ ಹಳ್ಳಿ, ಚಂದ್ರ ಬಲಶೆಟ್ಟಿಹಾಳ, ಚೌಡಪ್ಪ ಯಡ್ಡಳ್ಳಿ, ಶರಣಪ್ಪ ಮಾಳೂರು, ಯಲ್ಲಪ್ಪ ಗುಂಡಲಗೇರಿ, ಪರಮಣ್ಣ ಚಲವಾದಿ, ಸಂಗಮೇಶ ಮಾಳೂರು, ಜೈಭೀಮ ಸಿಂಗನಹಳ್ಳಿ, ಭೀಮಾಶಂಕರ ಗುಂಡಳ್ಳಿ, ಮಲ್ಲಪ್ಪ ತಡಿಬಿಡಿ, ಸಿದ್ದಪ್ಪ ಕೊಡಮನಹಳ್ಳಿ, ನಾಗರಾಜ ರಸ್ತಾಪೂರ, ಬಸಲಿಂಗ ಹಾಲಭಾವಿ, ದೇವಪ್ಪ ಕೊಂಬಿನ್, ಭೀಮರಾಯ ಮಂಗಳೂರು, ಹಣಮಂತ ರತ್ನಾಳ, ನಾಗಪ್ಪ ಹಳಿಸಗರ, ರವಿ ಹಳಿಸಗರ, ಮಲ್ಲುಗಡ್ಡಿಮನಿ, ಚಂದ್ರ ಬುದ್ಧನಗರ, ಪರಶುರಾಮ ಸಿಂಗನಹಳ್ಳಿ, ಸಂತೋಷ ಹಾದಿಮನಿ, ಸುನೀಲ ರಬ್ಬನಳ್ಳಿ, ಭೀಮು ಹೊಸಮನಿ, ಪುನೀತ ಹಾದಿಮನಿ, ಶರಣು ಹಾದಿಮನಿ, ಪರಶುರಾಮ ಹಳಿಗೇರಿ, ಮಲ್ಲಪ್ಪ ಅನವಾರ, ಸಾಯಬಣ್ಣ ಬಳ್ಳಕ್ಕಿ, ಸಾಯಬಣ್ಣ ಗುಂಡಳ್ಳಿ ಇದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X