ಯಾದಗಿರಿ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದ್ಮಾವತಿ ಹಾಗೂ ಸೀನಿಯರ್ ಪ್ರೋಗ್ರಾಮರ್ ಮಲ್ಲಪ್ಪ ಅವರನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಜಯ ಕರ್ನಾಟಕ ಜನಪರ ವೇದಿಕೆಯ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಸಂಘಟನೆಯ ಪದಾಧಿಕಾರಿ, ಜಿಲ್ಲಾಧ್ಯಕ್ಷ ತೇಜರಾಜ್ ರಾಥೋಡ್ ಮಾತನಾಡಿ, “ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದ್ಮಾವತಿ ಅವರು 2023ರ ಸೆಪ್ಟೆಂಬರ್ 19ರಿಂದ ಈವರೆಗೆ ಕೆಲಸ ನಿರ್ವಹಿಸುತ್ತಿದ್ದು, ಮಲ್ಲಪ್ಪ ಎನ್ ಸೀನಿಯರ್ ಪ್ರೋಗ್ರಾಮರ್ ಅವರು 2006ರ ನವೆಂಬರ್ 7ರಿಂದ ಈವರೆಗೆ ಈ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ನಗರಸಭೆಗೆ ಬರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ” ಎಂದು ಆರೋಪಿಸಿದರು.
“ಜನಸಾಮಾನ್ಯರೊಂದಿಗೆ ಏಕವಚನದಲ್ಲಿ ಮಾತನಾಡುತ್ತಾರೆ. ಇವರಿಬ್ಬರೂ ಸ್ಥಳೀಯರಿದ್ದು, ಜನರನ್ನು ನಿತ್ಯವೂ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಾರೆ. ದಲ್ಲಾಳಿಗಳ ಮೂಲಕ ಹಣ ಪಡೆದು, ಕೆಲಸ ಮಾಡುತ್ತಿದ್ದಾರೆ. ಸರ್ವಾಧಿಕಾರಿಗಳಾಗಿ ಅಹಂಕಾರದಿಂದ ಅಂದಾ ದರ್ಬಾರ್ ನಡೆಸುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಫೆ.24ರಂದು ಸಾಗರದಲ್ಲಿ ಸಹ್ಯಾದ್ರಿ ಗಾನ ಸಿರಿ ಬಳಗದಿಂದ ಹಾಡುಗಳ ಸ್ಪರ್ಧೆ
“ಈ ಇಬ್ಬರು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ, ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಬೇಕು. ಒಂದು ವಾರದಲ್ಲಿ ಕ್ರಮ ಕೈಗೊಳ್ಳದೇ ಹೋದರೆ ತಮ್ಮ ಕಚೇರಿ ಎದುರು ಸಾರ್ವಜನಿಕರೊಂದಿಗೆ
ತೀವ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.