ಬೀದರ್‌ | ಕಮಲನಗರದಲ್ಲಿ ʼಯಶವಂತಪೂರ-ಲಾತೂರ್‌ʼ ರೈಲು ನಿಲುಗಡೆ: ಸಚಿವ ಭಗವಂತ ಖೂಬಾ

Date:

ಬೀದರ್ ಜಿಲ್ಲೆಯ ಕಮಲನಗರದಲ್ಲಿ ಯಶವಂತಪೂರ-ಲಾತೂರ ರೈಲುಗಳ ನಿಲುಗಡೆಗೆ ರೈಲ್ವೇ ಇಲಾಖೆ ಒಪ್ಪಿಗೆ ಸೂಚಿಸಿದೆ. ಆ ಮೂಲಕ ಕಮಲನಗರ ತಾಲೂಕಿನ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ರೈಲು ನಿಲುಗಡೆಯನ್ನು ಮುಂದಿನ ವಾರದೊಳಗೆ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ.

“ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಹಾಗೂ ಕರ್ನಾಟಕದ ಗಡಿ ತಾಲೂಕುವಾದ ಕಮಲನಗರ ರೈಲ್ವೆ ನಿಲ್ದಾಣದಲ್ಲಿ ವೇಗದೂತ ರೈಲುಗಳ ನಿಲುಗಡೆಯಾಗಬೇಕೆಂಬುದು ಜನತೆಯ ಬಹುದಿನದ ಕನಸಾಗಿತ್ತು. ಈ ನಿಟ್ಟಿನಲ್ಲಿ ನಾನು ಸತತವಾಗಿ ಪ್ರಯತ್ನಿಸಿದ್ದೆ, ಇದರ ಫಲವಾಗಿ
ಕಳೆದ ಕೆಲ ದಿನಗಳ ಹಿಂದೆ ಬೀದರ ಮೂಲಕ ಶಿರಡಿ ಹೊಗುವ ರೈಲುಗಳ ನಿಲುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ, ಅದರಂತೆ ಯಶವಂತಪೂರ-ಲಾತೂರ (16583/84) ರೈಲು ಸಹ ಕಮಲನಗರದಲ್ಲಿ ನಿಲುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವೆ” ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.

“ಬೀದರನಿಂದ ಹಾದುಹೊಗುವ ಎಲ್ಲಾ ರೈಲುಗಳು ಭಾಲ್ಕಿಯಲ್ಲಿ ನಿಲುಗಡೆಗೊಂಡು ಮುಂದೆ ಉದಗೀರ ನಿಲಗಡೆಗೊಳ್ಳುತ್ತಿದ್ದವು, ಇವುಗಳ ಮಧ್ಯದಲ್ಲಿ ಬರುವ ಕಮಲನಗರದಲ್ಲಿ ರೈಲು ನಿಲುಗಡೆ ಮಾಡಲು ರೈಲ್ವೆ ಇಲಾಖೆಯ ನಿಯಮಗಳು ಇಷ್ಟು ದಿನ ಈ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದವು, ಆದರೆ ನಾನು ರೈಲ್ವೆ ಇಲಾಖೆಯ
ನಿರ್ದೇಶನದಂತೆ, ನಿಲಗಡೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಒದಿಗಿಸಿಕೊಟ್ಟು, ರೈಲ್ವೆ ಸಚಿವರಿಗೆ ಈ ನಿಲುಗಡೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿರುವ ಕಾರಣ ಇಂದು ಈ ರೈಲ್ವೆ ಬೋರ್ಡ ಕಮಲನಗರದಲ್ಲಿ ನಿಲುಗಡೆಗೆ ಒಪ್ಪಿಗೆ ಸೂಚಿಸಿದೆ” ಎಂದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ನಿಲುಗಡೆಯಿಂದ ಕಮಲನಗರ, ಔರಾದ, ಭಾಲ್ಕಿ ತಾಲೂಕಿನ ಗ್ರಾಮಗಳ ಜನರಿಗೆ ತುಂಬಾ ಅನುಕೂಲವಾಗಲಿದೆ, ಹಾಗೂ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರಿಗೆ ವಿದ್ಯಾಭ್ಯಾಸ, ಆಸ್ಪತ್ರೆ, ಇತರೆ
ಕೆಲಸಗಳಿಗೆ ತೆರಳಲು ಇನ್ನಷ್ಟು ಅನುಕೂಲವಾಗಲಿದೆ. ಜನತೆ ಈ ವಿಶೇಷ ರೈಲಿನ ಸದೂಪಯೋಗ
ಪಡೆದುಕೊಳ್ಳಲು ಸಚಿವರು ವಿನಂತಿಸಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ʼನಿಗರಾಣಿʼ ವಿನೂತನ ಯೋಜನೆ ಜಾರಿ: ಎಸ್‌ಪಿ ಚನ್ನಬಸವಣ್ಣ

ಜನತೆಯ ಇಚ್ಛೆಯಂತೆ ಹಾಗೂ ನನ್ನ ಮನವಿಗೆ ಸ್ಪಂದಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವರವರಿಗೆ ಮತ್ತು ರೈಲ್ವೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಕೇಂದ್ರ ಸಚಿವ ಭಗವಂತ ಖೂಬಾ ಧನ್ಯವಾದ ತಿಳಿಸಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ...

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....

ರಾಯಚೂರು | ಅಬಕಾರಿ ಇಲಾಖೆ ದಾಳಿ; ₹500 ಮುಖಬೆಲೆಯ ನೋಟಿನ 62 ಬಂಡಲ್ ಪತ್ತೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಳಿಗಲ್ಲಿಯ ಗೌಳಿಯೊಬ್ಬರ ಮನೆಯಲ್ಲಿ ಗೋಣಿ ಚೀಲದ...