ಮರಳು ಮಾಫಿಯಾದಿಂದ ಬಹುತೇಕ ಮಂದಿ ಮೃತಪಟ್ಟಿದ್ದು, ಮರಳು ಧಂದೆ ತಡೆಯಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಯಾದಗಿರಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರು.
“ರಾಯಚೂರು ಜಿಲ್ಲೆಯ ದೇವದುರ್ಗ ಮತ್ತು ಕಲಬುರಗಿಯಲ್ಲಿ ಮರಳು ಮಾಫಿಯಾದಿಂದ ಬಹುತೇಕರು ಮೃತಪಟ್ಟಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ಅಕ್ರಮ ಮರಳು ತಡೆಹಿಡಿದು, ಮೃತ ಕುಟುಂಬಗಳಿಗೆ ₹50 ಪರಿಹಾರ ನೀಡಬೇಕು” ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಮರಳು ದಂಧೆಕೋರರು ಅಮಾನುಷವಾಗಿ ಮೂವರ ಮೇಲೆ ಜೆಸಿಬಿ ಹರಿಸಿ ಭೀಕರವಾಗಿ ಹತ್ಯೆ ಮಾಡಿದ್ದು, ಕಲಬುರಗಿಯಲ್ಲಿ ಪೊಲೀಸ್ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಿದ್ದರು. ಅಕ್ರಮ ಮರಳು ಮಾಫಿಯಾದಿಂದ 4 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಮರಳು ದಂಧೆ ನಡೆಯುತ್ತಿದೆ. ಅಕ್ರಮ ಮರಳು ದಂಧೆ ನಡೆಸುವವರಿಗೆ ಕಾನೂನಿನ ಭಯ ಇಲ್ಲದಂತಾಗಿದೆ. ಹಣದ ಅಹಂಕಾರದಿಂದ ಗೂಂಡಾ ವರ್ತನೆ ತೋರುತ್ತಿದ್ದಾರೆ” ಎಂದು ಸಂಘಟನೆ ಜಿಲ್ಲಾ ಅಧ್ಯಕ್ಷ ವಿಶ್ವನಾಥ್ ನಾಯಕ ಆರೋಪಿಸಿದರು.
“ಯಾದಗಿರಿ ಜಿಲ್ಲೆಯಲ್ಲಿಯೂ ಇದೇ ರೀತಿ ಆಕ್ರಮ ಮರಳು ದಂಧೆ ನಡೆಯುತ್ತಿದ್ದು, ತೆರಿಗೆ ಕಟ್ಟದೇ, ಸರ್ಕಾರಕ್ಕೆ ವಂಚನೆ ಮಾಡುತ್ತದ್ದಾರೆ. ಇದಕ್ಕೆ ಕಡಿವಾಣ ಹಾಕಿ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.
ಸಮಗ್ರ ತನಿಖೆ ನಡೆಸಿ, ಅಕ್ರಮ ಮರಳು ಮಾಫಿಯಾ ತಡೆಹಿಡಿದು, ಮೃತ ಕುಟುಂಬಗಳಿಗೆ ₹50 ಲಕ್ಷ ಪರಿಹಾರ ನೀಡಬೇಕು. ಒಂದು ವೇಳೆ ಕ್ರಮಕ್ಕೆ ಮುಂದಾಗದೇ ಹೋದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಜಯ ಕರ್ನಾಟಕ ಜಿಲ್ಲಾದ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ ಮನವಿ ಸಲ್ಲಿಸಿದರು, ಮನವಿ ಸ್ವೀಕರಿಸಿದ ಸಹಾಯಕ ಆಯುಕ್ತರು ಜಿಲ್ಲೆಯ ಯಾದಗಿರಿ ಹಾಗೂ ವಡಗೇರಾ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಕ್ರಮ ಮರಳು ಧಂದೆ ನಡೆಯುತ್ತಿದ್ದು ವಡಗೇರಾದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಅಕ್ರಮ ಮರಳು ಧಂದೆ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮರಳು ಮಾಫಿಯಾ ತಡೆಗೆ ಆಗ್ರಹ
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಗುತ್ತೇದಾರ, ಹಣಮಂತ ಪೂಜಾರಿ, ವೆಂಕಟೇಶ ಯಾದಗಿರಿ, ವೆಂಕಟೇಶ, ಮಾರುತಿ ಮುದ್ನಾಳ, ಆನಂದ ಗುತ್ತೇದಾರ, ರಿಯಾಜ್ ಪಟೇಲ್, ಬಾಬುಗೌಡ, ನಾಗರಾಜ ರಾಮಸಮುದ್ರ, ಭೀಮು ಪೂಜಾರಿ, ಸಾಬರಡ್ಡಿ, ಶೆಟ್ಟಿಕೇರಾ, ನಾಗಪ್ಪ ಶೆಟ್ಟಿಕೇರಾ, ಆಶಪ್ಪ ಜಿನಿಕೇರಾ, ಗೋಪಾಲಕೃಷ್ಣ ಗುರುಮಠಕಲ್, ಸಣ್ಣಮೀರ ಹತ್ತಿಕುಣಿ, ರಂಗನಾಥ ನಾಯಕ ಇತರರು ಇದ್ದರು.