ಯಾದಗಿರಿ ನಗರಸಭೆ ಸದಸ್ಯ ಗಣೇಶ ದುಪ್ಪಲ್ಲಿ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನಮಾನ ನೀಡಬೇಕೆಂದು ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಯಾದಗಿರಿ ಜಿಲ್ಲಾಧಿಕಾರಿ ಮುಖಾಂತರ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
“ಗಣೇಶ ದುಪ್ಪಲ್ಲಿ ಅವರು ಮಾದಿಗ ಸಮಾಜದ ಹಿರಿಯ ಮುಖಂಡರಾಗಿದ್ದು, ಪ್ರಸ್ತುತ ನಗರಸಭೆ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ಮುಖಂಡರಾಗಿ, ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ಶ್ರಮಿಸಿದ್ದು, ಪಕ್ಷದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನಮಾನ ನೀಡಬೇಕು” ಎಂದು ಕಾರ್ಯಕರ್ತರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಗರಸಭೆಗೆ ಪೌರ ಕಾರ್ಮಿಕರ ಮುತ್ತಿಗೆ
“ಪಕ್ಷದ ಹಿತದೃಷ್ಠಿಯಿಂದ ಗಣೇಶ ದುಪ್ಪಲಿ ಅವರಿಗೆ ಯಾವುದಾದರೊಂದು ನಿಗಮ, ಮಂಡಳಿಗೆ ನೇಮಕ ಮಾಡಿ, ಸೂಕ್ತ ಸ್ಥಾನಮಾನ ನೀಡಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗಣೇಶ್ ದುಪ್ಪಲ್ಲಿ, ಶಿವು ಮುದ್ನಾಳ್, ಚಂದ್ರು ಮುಂಡ್ರಿಗಿ, ಕಾಶಪ್ಪ ಹೆಗ್ಗಣಗೇರಾ, ದೇವು ಲಿಂಗೇರಿ, ಮಲ್ಲು ಬೆಳಗೇರಾರು, ನಿಂಗಪ್ಪ ಹಾಲಗೇರಾ, ವಿಲ್ಸನ್ ಹಾಲಗೇರಾ, ರಾಜು ಕಡೆಚೂರ, ಮರಿಲಿಂಗಪ್ಪ ಇದ್ದರು.