ವಿವಾಹಿತೆ ಮಹಿಳೆಗೆ ಜೀವ ಬೆದರಿಕೆಯೊಡ್ಡಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಸುರುಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತ ಮಹಿಳೆ ಉಮಾದೇವಿ ಎಂಬುವವರು ಆರೋಪಿ ವೀರೂಪಾಕ್ಷಿ ಎಂಬುವವರ ವಿರುದ್ಧ ನೀಡಿದ್ದ ದೂರಿನ ಮೇರೆಗೆ ಏಪ್ರಿಲ್ 25ರಂದು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ʼಮಹಿಳೆ ಮನೆಗೆ ಪದೇ ಪದೇ ಬರುತ್ತಿದ್ದ ವೀರೂಪಾಕ್ಷಿ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದನು. ʼನಿನ್ನ ಗಂಡನನ್ನು ಬಿಟ್ಟು ನನ್ನೊಂದಿಗೆ ಬಾʼ ಎಂದು ಪೀಡಿಸುತ್ತಿದ್ದ, ಮಹಿಳೆ ಸಹಕರಿಸದಿದ್ದರೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದು ಒತ್ತಾಯದಿಂದ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಈ ವಿಷಯ ಯಾರಿಗಾದರೂ ಹೇಳದಂತೆ ಬೆದರಿಕೆ ಹಾಕಿದ್ದಾನೆʼ ಎಂದು ಆರೋಪಿಸಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿ ಒಂದು ವಾರ ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸಿ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಂತ್ರಸ್ತೆ ಕುಟುಂಬಸ್ಥರು ದೂರಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಆಕಸ್ಮಿಕ ಬೆಂಕಿ : ಸುಟ್ಟು ಕರಕಲಾದ ₹7.50 ಲಕ್ಷ ಮೌಲ್ಯದ 50 ಕ್ವಿಂಟಲ್ ತೊಗರಿ ಕಾಳು