ಯಾದಗಿರಿ | ನರಗುಂದ ಬಂಡಾಯ ರೈತ ಹುತಾತ್ಮ ದಿನಾಚರಣೆ

Date:

Advertisements

ನರಗುಂದದಲ್ಲಿ 1980ರಲ್ಲಿ ನಡೆದ ರೈತ ಚಳುವಳಿಯಲ್ಲಿ ಅಂದಿನ ಗುಂಡೂರಾವ್ ಸರಕಾರದ ಪೊಲೀಸರು ಹೋರಾಟ ನಿರತ ರೈತರಿಗೆ ಗುಂಡು ಹಾರಿಸಿ ಕೊಂದಿರುವ ನೆನಪಿನ ಅಂಗವಾಗಿ ಪ್ರತಿ ವರ್ಷದಂತೆ ನರಗುಂದ-ನವಲಗುಂದ ಬಂಡಾಯ ರೈತ ಹುತಾತ್ಮ ದಿನಾಚರಣೆಯನ್ನು ಸೋಮವಾರ ಶಹಾಪುರದ ಎಪಿಎಮ್‌ಸಿ ಕಾರ್ಯಾಲಯದಲ್ಲಿ ಜರುಗಿತು.

ಚಿಂತಕ ಶಿವಣ್ಣ ಇಜೇರಿ ಮಾತನಾಡಿ, ‘1981-82 ರಲ್ಲಿ ರೈತ ಸಂಘದ ಜೈಲ್ ಭರೋ ಕಾರ್ಯಕ್ರಮದಲ್ಲಿ ಜೈಲಿಗೆ ಹೋದ ಪ್ರಸಂಗದ ನೆನಪನ್ನು ಎಳೆಎಳೆಯಾಗಿ’ ಬಿಚ್ಚಿಟ್ಟರು.

ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ವಿ. ಪಾಟೀಲ ಅವರು ದೇವನಹಳ್ಳಿ ಬಲವಂತ ಭೂಸ್ವಾಧೀನ ಹೋರಾಟದಲ್ಲಿ ಭಾಗವಹಿಸಿದ ಪ್ರಸಂಗ ಮತ್ತು ಸರಕಾರ ಈ ನಿರ್ಣಾಯ ಕೈಬಿಟ್ಟುಕೊಟ್ಟಿರುವುದರ ಕುರಿತು ಪ್ರಸ್ತಾಪಿಸಿ ಅಲ್ಲಿನ ರೋಚಕ ಜಯದ ಕುರಿತು ಸ್ಮರಿಸಿದರು.

Advertisements

ರೈತ ಸಂಘದ ನಲವತ್ತೈದು ವರುಷ ನಡೆದು ಬಂದ ದಾರಿ, ಚುನಾವಣಾ ರಾಜಕೀಯ, ಸದ್ಯ ಮುಂದಿರುವ ರೈತ ಸಂಘದ ಸವಾಲುಗಳ ಕುರಿತು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ವಿವರಿಸಿದರು.

ರೈತರಿಗೆ ಯಾವುದೇ ದ್ರವ ರೂಪದ ರಸಗೊಬ್ಬರವನ್ನು ಲಿಂಕಾಗಿ ಕೊಡದೆ ರೈತರಿಗೆ ಬೇಕಿರುವ ಗೊಬ್ಬರಗಳನ್ನು ಜಿಲ್ಲಾಡಳಿತ ಪೂರೈಸಲೇಬೇಕು. ಗೊಬ್ಬರ ಸಲುವಾಗಿ ಕೃಷಿ ಇಲಾಖೆ ಅಧಿಕಾರಿಗಳ ಮತ್ತು ರೈತರ ಸಭೆ ಕರೆದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಹಸೀಲ್ದಾರ್‌ ಅವರನ್ನು ಭೇಟಿಯಾಗಿ ಆಗ್ರಹಿಸಿದರು.

ಇದನ್ನೂ ಓದಿ : ಬೀದರ್‌ | ಅಕ್ರಮ ಆಸ್ತಿ ಗಳಿಕೆ ಆರೋಪ : ಆರೋಗ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ರೈತ ಸಂಘದ ಪ್ರಮುಖರಾದ ಶರಣು ಮಂದ್ರವಾಡ, ಚಂದ್ರಕಲಾ ವಡಿಗೇರಿ, ಮುದ್ದಣ್ಣ ಅಮ್ಮಾಪುರ್, ಮಲ್ಲಣ್ಣನಾಯಕ, ಮಲ್ಕಣ್ಣ ಚಿಂತಿ, ಭೀಮಣ್ಣನಾಯಕ, ಫಕೀರ್ ಅಹ್ಮದಸಾಬ್, ಹಣ್ಮಂತ್ರಾಯ ಗುಜ್ಜಲ್, ಬಾಲಾಜಿ, ಶರಣು ಯಕ್ಷಿಂತಿ, ಚಾಂದಪಾಷಸಾಬ್, ಬಸವರಾಜ ಲಕ್ಷ್ಮೀಪುರ, ಸಾಯಬ್ ಲಾಲ್ ಹುಣಸಿಗಿ, ಪ್ರಭಾಕರ ಪಾಟೀಲ, ಸುನಿಲ ಕೊಂಗಂಡಿ ಮತ್ತಿತರರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X