ಯಾದಗಿರಿ | ಶಾಲೆ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ; ಒಂದೇ ದಿನದಲ್ಲಿ ಅಧಿಕಾರಿಗಳ ಭೇಟಿ

Date:

Advertisements

ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಗಣಪೂರ ಗ್ರಾಮದಲ್ಲಿ ಮೂಲ ಸೌಕರ್ಯದಿಂದ ವಂಚಿತವಾಗಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆಯ ಸಿಆರ್‌ಪಿ, ಬಿಇಒ, ಬಿಆರ್‌ಪಿ, ಟಿಇಒ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಪಸಪುಲ್ ಗ್ರಾಮ ಪಂಚಾಯಿತಿ ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೂಲಸೌಕರ್ಯದಿಂದ ವಂಚಿತವಾಗಿರುವ ಶಾಲೆ ಕುರಿತು ಸಾಮಾಜಿಕ ಕಾರ್ಯಕರ್ತ ಉಮೇಶ್‌ ಮುದ್ನಾಳ್‌ ಅವರ ಪತ್ರಿಕೆ ಹೇಳಿಕೆ ಮೇರೆಗೆ ಈ ದಿನ.ಕಾಮ್‌ ಜುಲೈ 27ರಂದು ʼಯಾದಗಿರಿ | ಐದು ದಿನಗಳಲ್ಲಿ ಶಾಲೆ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ; ಉಮೇಶ ಮುದ್ನಾಳ ಎಚ್ಚರಿಕೆʼ ಎಂಬ ತಲೆಬರಹದಲ್ಲಿ ಸುದ್ದಿ ಪ್ರಕಟ ಮಾಡಿತ್ತು. ಇದನ್ನು ಗಮನಿಸಿದ ಸಂಬಂಧಪಟ್ಟ ಅಧಿಕಾರಿಗಳು ಒಂದೇ ದಿನದಲ್ಲಿ ಶಾಲೆಯತ್ತ ಧಾವಿಸಿದ್ದು, ಪರಿಶೀಲಿಸಿದ್ದಾರೆ.

ಗುರುಮಠಕಲ್ ಮತಕ್ಷೇತ್ರದ ಗಣಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4 ಕೊಣೆ, 1 ಅಡುಗೆ ಕೋಣೆ ಮುಟ್ಟಿದರೆ ಕುಸಿದು ಬೀಳುವ ಸ್ಥಿತಿಯಲ್ಲಿರುವುದನ್ನು ಗಮನಿಸಿ ಗ್ರಾಮಸ್ಥರೊಂದಿಗೆ ವಿದ್ಯಾರ್ಥಿಗಳ ಪೊಷಕರು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಕಂಡು ಮಕ್ಕಳು ಮತ್ತು ಪೊಷಕರ ಜೊತೆ ಚರ್ಚಿಸಿ ಹೋರಾಟ ರೂಪಿಸಿದ್ದರು.

Advertisements
ಶಾಲೆಗೆ ಅಧಿಕಾರಿಗಳ ಭೇಟಿ
ಗಣಪೂರ ಶಾಲೆಗೆ ಅಧಿಕಾರಿಗಳ ಭೇಟಿ

ಈ ಕುರಿತು “ಗಣಫೂರ ಗ್ರಾಮದ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಭೂತ ಬಂಗಲೆಯಂತಿದೆ. ಶಾಲೆಯ ಸಮಸ್ಯೆಗಳನ್ನು ಐದು ದಿನಗಳಲ್ಲಿ ಪರಿಹರಿಸದಿದ್ದರೆ, ವಿಜಯಪುರ-ಹೈದರಾಬಾದ್‌ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತೇವೆ” ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ್ ಕೆ ಮುದ್ನಾಳ ಎಚ್ಚರಿಕೆ ನೀಡಿದ್ದರು.

ಸಾಮಾಜಿಕ ಕಾರ್ಯಕರ್ತ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶಾಲೆಗೆ ಓಡೋಡಿ ಬಂದು ಸಮಸ್ಯೆಗಳನ್ನು ಪರಿಶೀಲನೆ ನಡೆಸಿದ್ದಾರೆ. ನಾಲ್ಕು ತರಗತಿ ಕೋಣೆಗಳು, ಶೌಚಾಲಯ, ಅಡುಗೆ ಕೋಣೆ ಮತ್ತು ಶಾಲೆಯ ಹಿಂಭಾಗದಲ್ಲಿರುವ ಬೃಹತ್ ಮಲಿನ ನೀರಿನ ತಗ್ಗು ಗುಂಡಿಗಳನ್ನು ಸುಮಾರು 3 ತಾಸುಗಳ ಕಾಲ ಪರಿಶೀಲಿಸಿ ವಾಸ್ತವ ಅರಿತುಕೊಂಡು ಪೊಷಕರ, ಗ್ರಾಮ ಪಂಚಾಯಿತಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದರು” ಎಂದು ತಿಳಿಸಿದರು.

ಗಣಪೂರ ಶಾಲೆ

“ಶಾಲೆಯ ಸಮಸ್ಯೆ ಇಡೀ ಗ್ರಾಮದ ಸಮಸ್ಯೆಯಾಗಿದ್ದು, ಇದಕ್ಕೆ ರಾಜಕೀಯ ಬಣ್ಣ ನೀಡದೆ ಎಲ್ಲರೂ ಸಹಕಾರ ನೀಡಬೇಕು. ಕೇವಲ ನಾಮಕಾವಸ್ತೆಗೆ ಭೇಟಿ ಆಗಬಾರದು. ಸಮಸ್ಯೆ ಪರಿಹಾರವಾಗಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಸಿದರು.

“ಶೌಚಾಲಯ ನೆಲಸಮಗೊಳಿಸಲು ನಿರ್ಧರಿಸಿ, ಮಲಿನ ನೀರು ನಿಂತ ತಗ್ಗು ಗುಂಡಿಗಳಿಗೆ ಮಣ್ಣು ತುಂಬಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸಲು ಸೂಚಿಸಿದರು. ಶಿಥಿಲಗೊಂಡ ನಾಲ್ಕು ಕೋಣೆಗಳು ಮತ್ತು ಅಡುಗೆ ಕೋಣೆಯನ್ನು ನೆಲಸಮಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಅಧಿಕಾರಿಗಳು ಪತ್ರ ಬರೆದರು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ಐದು ದಿನಗಳಲ್ಲಿ ಶಾಲೆ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ; ಉಮೇಶ ಮುದ್ನಾಳ ಎಚ್ಚರಿಕೆ

“ನಾಲ್ಕು ಕೋಣೆಗಳಿಗೆ ನಿರ್ಬಂಧ ವಿಧಿಸಿ, ಅಲ್ಲಿ ಪಾಠ ಪ್ರವಚನ ಮಾಡದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು. ಅಡುಗೆ ಕೋಣೆಯನ್ನೂ ನೆಲಸಮ ಮಾಡಲು ನಿರ್ಧರಿಸಲಾಯಿತು. ಬೇರೆ ಸ್ಥಳದಲ್ಲಿ ಅಡುಗೆ ಕೋಣೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಾ ಪಂ ಸಹಾಯಕ ನಿರ್ದೇಶಕರು ಭರವಸೆ ನೀಡಿದ್ದಾರೆ” ಎಂದು ಉಮೇಶ್ ಮುದ್ನಾಳ್ ತಿಳಿಸಿದರು.

ಈ ಸಂದರ್ಭದಲ್ಲಿ ಆಂಜಿನೇಯ ಬೆಳಗೇರಿ, ತಾಯಪ್ಪ ಕಾಳಬೆಳಗುಂದಿ, ಗಣಪೂರ ಗ್ರಾಮದ ಮುಖಂಡರುಗಳಾದ ನರಸಪ್ಪ, ಶಂಕರ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ, ಗ್ರಾಪಂ ಸದಸ್ಯ ನರಸಿಂಗಪ್ಪ, ಭೀಮರಾಯ, ತಾಯಪ್ಪ ಹೊಸಡಿ, ನಿಂಗಪ್ಪ, ಚೆನ್ನಪ್ಪ, ಭೀಮರಾಯ ಬಂಕಲಗಿ, ಕಾಂತು, ಆಂಜಿನೇಯ, ಮಾದೇವಪ್ಪ, ಮಾದೇವ, ತಾಯಪ್ಪ ನವಾಬುರಜ ಸೇರಿದಂತೆ ಬಹತೇಕರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X