ಕುರಿ ಕಾಯಲು ಹೋಗಿದ್ದ ಬಾಲಕರು ನೀರು ಕುಡಿಯಲು ಹೋಗಿ ನೀರಿನ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲ್ಲೂಕಿನ ಅಚ್ಚೋಲ ತಾಂಡಾದ ಬಳಿ ಭಾನುವಾರ ನಡೆದಿದೆ.
ತಾಂಡಾದ ನಿವಾಸಿಗಳಾದ ಅಮರ (12), ಜಯ ರಾಠೋಡ್ (14), ಕೃಷ್ಣಾ ರಾಠೋಡ್ (10) ಮೃತ ಬಾಲಕರು.
ಬೇಸಿಗೆ ಹಿನ್ನೆಲೆ ಭಾನುವಾರ ಸಂಜೆ ದಾಹ ತಣಿಸಿಕೊಳ್ಳಲು ನೀರಿನ ಹೊಂಡಕ್ಕೆ ಇಳಿದಿದ್ದಾರೆ. ಕಾಲು ಜಾರಿ ಬಿದ್ದು ನೀರು ಪಾಲಾಗಿರಬಹುದು ಎಂದು ಶಂಕಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಶವಗಳನ್ನು ಹೊರತೆಗೆಯಲಾಗಿದೆ. ಯಾದಗಿರಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲ್ಯಾಣ ಕರ್ನಾಟಕದಲ್ಲಿ 21,381 ಶಿಕ್ಷಕರ ಹುದ್ದೆ ಖಾಲಿ : ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತಕ್ಕೆ ಕಾರಣಗಳೇನು?