ತೆಲಂಗಾಣ ಗಡಿಯಲ್ಲಿರುವ ಎಕ್ಲಾಸ್‌ಪುರ ಗ್ರಾಮದ ಸಮೀಪ ಶನಿವಾರ ಮಧ್ಯಾಹ್ನದ ಸಾರಿಗೆ ಬಸ್ ಹಾಗೂ ಜೀಪ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ.
ನಾರಾಯಣಪೇಟೆ ಜಿಲ್ಲೆ ಮೂಲಃದ ಸಿರಿಶಾ (10) ಮತ್ತು ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಶಿವಪುರದ ಹನುಮಂತಿ (50) ಮೃತರು ಎಂದು ತಿಳಿದು ಬಂದಿದೆ.
ತೆಲಂಗಾಣದ ನಾರಾಯಣಪೇಟೆ ಕಡೆಯಿಂದ ಗುರುಮಠಕಲ್ ಕಡೆಗೆ ಬರುತ್ತಿದ್ದ ಕೆಕೆಆರ್‌ಟಿಸಿ ಬಸ್ ತಿರುವಿನಲ್ಲಿ ಎದುರಿನಿಂದ ಬಂದ ಜೀಪ್‌ಗೆ ಹೊಡೆದಿದೆ. ಜೀಪ್‌ನಲ್ಲಿದ್ದ ಸಿರಿಶಾ ಮತ್ತು ಹನುಮಂತಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ನಾರಾಯಣಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವರದಿ ಮಾಹಿತಿ : ಮಹಾಂತೇಶ್
