ಸಿಡಿಲು ಬಡಿದು ಕುರಿಗಾಹಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ಸುರಪುರ ತಾಲ್ಲೂಕಿನ ಹಾಳ ಅಮ್ಮಾಪುರ ಗ್ರಾಮದ ಮರೆಪ್ಪ ಅಯ್ಯಪ್ಪ ದೇವಡಿ (21) ಮೃತಪಟ್ಟಿರುವ ವ್ಯಕ್ತಿಯಾಗಿದ್ದಾರೆ.
ಗುರುವಾರ ಕುರಿ ಮೇಯಿಸಲು ಹೋದ ವೇಳೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುರಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ : ನುಡಿಯಂಗಳ | ಮಾತೃಭಾಷೆ ಎನ್ನಬೇಡಿ, ಕನ್ನಡವೆನ್ನಿ
ವರದಿ : ರಾಘವೇಂದ್ರ ಮಾಸ್ತರ