ಯಾದಗಿರಿ | ಇನ್ನೊಬ್ಬರ ಬೆಳವಣಿಗೆಯನ್ನು ಸಹಿಸುವವನೇ ನಿಜವಾದ ಸಾಹಿತಿ ; ಈಶ್ವರ್ ಕಟ್ಟಿಮನಿ

Date:

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಬೆಳವಣಿಗೆಯನ್ನು ಸಹಿಸುವ ಗುಣ ಹೊಂದಿದ್ದರೆ ಅವನೇ ನಿಜವಾದ ಸಾಹಿತಿ ಎಂದು ಹಿರಿಯ ಸಾಹಿತಿ ಈಶ್ವರ್ ಕಟ್ಟಿಮನಿ ಅಭಿಪ್ರಾಯಪಟ್ಟರು.

- Advertisement -

ಅವರು ಸರಕಾರಿ ಪದವಿಪೂರ್ವ ಕಾಲೇಜು, ಭೀಮರಾಯನ ಗುಡಿಯಲ್ಲಿ ಆಯೋಜಿಸಿದ್ದ ಗೋವಿಂದರಾಜ ಸಿ. ಸುರಪುರಕರ ಅವಳಿ ಕೃತಿಗಳ ಲೋಕಾರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ‘ಪರೀಕ್ಷೆ ಎದುರಿಸುವುದು ಹೇಗೆ’ ವಿಷಯದ ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಕವಿ ತನ್ನ ಕಾಲಘಟ್ಟದ ಸಾಮಾಜಿಕ ತಾರತಮ್ಯ, ದುಃಖ-ದುಮ್ಮಾನಗಳನ್ನು ಅರಿತು ಸಮಾಜಕ್ಕೆ ಪರಿಚಯಿಸಿ ಜಾಗೃತಿ ಮೂಡಿಸಬೇಕು. ಕವಿ ಬರೆದ ವಿಚಾರಗಳು ಪ್ರತಿಯೊಬ್ಬ ಓದುಗನಿಗೂ ತನ್ನದೇ ಎಂದು ಅನಿಸಿದಾಗಲೇ ಬರವಣಿಗೆ ಸಾರ್ಥಕವಾಗುತ್ತದೆ ಎಂದು ಯುವ ಕವಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ‘ನಕ್ಕಾವೋ ನಕ್ಷತ್ರ ಹನಿ’ ಗವಿತಾ ಕೃತಿಯನ್ನು ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರನಾಥ್ ಹೊಸ್ಮನಿ ಹಾಗೂ ‘ನಕ್ಕಾವೋ ನೋವುಗಳು’ ಕವನ ಸಂಕಲನವನ್ನು ಸರಕಾರಿ ಪದವಿ ಕಾಲೇಜು ಸುರಪುರದ ಪ್ರಾಂಶುಪಾಲ ಪ್ರೊ. ಬಲಭೀಮರಾಯ ದೇಸಾಯಿ ಲೋಕಾರ್ಪಣೆಗೊಳಿಸಿದರು.

‘ಅವಳಿ ಕೃತಿಗಳ ಪರಿಚಯವನ್ನು ಹಿರಿಯ ಸಾಹಿತಿ ಡಾ. ಗೋವಿಂದರಾಜ ಮತ್ತು ತಾಲೂಕು ಖಜಾನಾಧಿಕಾರಿ ಡಾ. ಮೋನಪ್ಪ ಶಿರವಾಳ್ ಮಾಡಿದರು. ಗೋವಿಂದರಾಜರ ಬರವಣಿಗೆ ಸಾಮರ್ಥ್ಯ ಶ್ಲಾಘನೀಯವಾಗಿದೆ’ ಎಂದು ಹೇಳಿದರು.

ನಂತರ ಭೀಮಪ್ಪ ಪೀರಾಪುರ್ ಹಾಗೂ ಶಿವಾನಂದ ದೋರನಹಳ್ಳಿ ಅವರು ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಿಂದ್ರಪ್ಪ ಮಡಿವಾಳಕರ್ ವಹಿಸಿದ್ದರು. ಉಪನ್ಯಾಸಕರಾದ ಸಾಯಬಣ್ಣ ಮೆತ್ರೆ, ಸಿದ್ದಪ್ಪ ಒಡೆಯರ್, ಭೀಮರೆಡ್ಡಿ ಪಾಟೀಲ್, ಗುರುನಾಥ ದೇಸಾಯಿ, ಸಂತೋಷ್ ಜುನ್ನ, ಹನುಮಂತ್ರಾಯ ಗೌಡ ಪಾಟೀಲ್, ಧರ್ಮನಗೌಡ ಹಾಗೂ ಸಾಹಿತಿಗಳಾದ ಆಮ್ಲಯ್ಯ ಮಡ್ನಾಳ್, ಈರಣ್ಣ ಸಾಹಿತ್ಯಗಾರ, ಬೀರನೂರ್ ಗೌಡಪ್ಪ ಗೌಡ, ಪರಿವಾಣ ಉಪಸ್ಥಿತರಿದ್ದರು.

ಇದನ್ನು ಓದಿದ್ದೀರಾ? ಕಲಬುರಗಿಯಲ್ಲಿ ʼಪ್ರಬುದ್ಧ ಅಕಾಡೆಮಿʼ ಉದ್ಘಾಟನೆ

ಈ ಸಂದರ್ಭದಲ್ಲಿ ಲೇಖಕ ಗೋವಿಂದರಾಜ ಸಿ. ಸುರಪುರ ಹಾಗೂ ಅವರ ಪತ್ನಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಶಹಾಪುರ ಮತ್ತು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಸುರೇಶ್ ಅರುಣಿ ಸ್ವಾಗತಿಸಿದರು. ಮಡಿವಾಳಪ್ಪ ಪಾಟೀಲ್ ನಿರೂಪಿಸಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಸಂಚಾರ ನಿಯಮ ಪಾಲನೆಗೆ ಜಾಗೃತಿ: ಹೆಲ್ಮೆಟ್, ಪರವಾನಗಿ, ವಿಮೆ ಕಡ್ಡಾಯ

ನಗರದ ಸೇರಿದಂತೆ ತಾಲ್ಲೂಕಿನ ಭೀಮರಾಯನಗುಡಿ ಹಾಗೂ ಗೋಗಿ ಗ್ರಾಮಗಳಲ್ಲಿ ಸಂಚಾರ ನಿಯಮಗಳ...

ಯಾದಗಿರಿ | ನಗರ ಸಂಚಾರಕ್ಕೆ ಪ್ರತ್ಯೇಕ ಠಾಣೆ, ಹತ್ತಿಗೂಡೂರಿಗೆ ಗ್ರಾಮೀಣ ಠಾಣೆ ಆರಂಭಿಸುವಂತೆ ಆಗ್ರಹಿಸಿ ಮನವಿ

ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಪೊಲೀಸ್‌ ಇಲಾಖೆಯ ಮೇಲಿನ ಕಾರ್ಯಭಾರ...

ಯಾದಗಿರಿ | ನಿವೇಶನಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ

ನಗರದಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಸ್ಲಂ ಜನಾಂದೋಲನ...

ಯಾದಗಿರಿ | ಕಾಂಗ್ರೆಸ್‌ ತೆಕ್ಕೆಗೆ ಯುವ ನಾಯಕ ವೀರಾರಡ್ಡಿ ಮುನ್ನಾಳ

ಗುರುಮಿಠಕಲ್, ಯಾದಗಿರಿ ಮತಕ್ಷೇತ್ರದ ಯುವ ನಾಯಕ ಬಿ.ಎಸ್. ವೀರಾರಡ್ಡಿ ಮುನ್ನಾಳ ಅವರು...